Monday, April 23, 2012

ಪದಬಂಧ

ಪದಬಂಧ ಆಟದಲ್ಲಿ ಪೆನ್ನಿನ ತುದಿಯಲ್ಲಿ
ಸಿಕ್ಕಿ ಹೊರ ಬರಲಾರದೆ ಒದ್ದಾಡುತ್ತಿರುವ 
ಪದದಲ್ಲಿ ನೀನು ಇರುವೆಯೆಂದು ತಿಳಿದು
ಮತ್ತಷ್ಟೂ ಗೋಜಲು ಸಂಕಷ್ಟಕ್ಕೆ ಸಿಲುಕಿ 
ನಿನ್ನ ಆಚೀಚಿನ ವಿನ್ಯಾಸಕ್ಕೆ 
ತಪ್ಪು ಹೊಂದಿಕೆಯಾದೀತೆಂಬ ಭಯದಲ್ಲಿ
ಪೆನ್ನಿನ ಮೊನೆಯಲ್ಲಿಯೇ ಹೊರಬರಲಾರದೆ
ಮರುಹೊಂದಾಣಿಕೆ ಮಾಡುವ ಹವಣಿಕೆಯಲ್ಲಿ
ಕಾದು ಹೊಂಚು ಹಾಕುತ್ತಿರುವ ಪದಗಳೆಷ್ಟೋ !!
____________________________________________

ಲಲನಾನಾದ

ಬ್ರಿಗೆಡ್ ರೋಡಿನಲ್ಲಿ 
ಸಣ್ಣ ಸಣ್ಣ ಸ್ಕರ್ಟ್ ತೊಟ್ಟ 
ಲಲನೆಯರ ಲಲನಾನಾದ
ಪೋಲಿ ಮನಸಿಗೆ ಕೊಂಚ  
ಆಹ್ಲಾದತೆ ಕೊಟ್ಟಿದ್ದೇನೂ ನಿಜವೆಂದು
ಹೆಂಡತಿ ಮುಂದೆ ಒಪ್ಪಿಕೊಂಡ ಮೇಲೆ 
ಮೊದಲು ಈ ಆಫೀಸ್ ಬಿಡು
ಇಲ್ಲ root change ಮಾಡೆಂದು
ಕೂತಿದ್ದಾಳೆ..!!

4 comments:

sunaath said...

Wow!

ಪ್ರವರ ಕೆ ವಿ said...

sir kavte odutta oudtta khushisuttade,,,,, munduvaresi....

shivu.k said...

ಮೊದಲನೆಯದು ಸೂಪರ್...

Venkatesh Dodmane said...

ಒ೦ದೇ ಮಾತಿನಲ್ಲಿ ಹೇಳಬೇಕ೦ದರೆ, ನಿಮ್ಮೆಲ್ಲಾ ಬರಹದ ಭಾಷೆ ಸರಳ, ಸು೦ದರ.