Monday, August 18, 2008

ಕನ್ನಡ ಬರುತ್ತಾ !!

ಗುರೂ ಕನ್ನಡ ಬರುತ್ತಾ ..!! ಬೆಂಗಳೂರಲ್ಲಿ ಸಾಮನ್ಯವಾಗಿ ಕೇಳಿ ಬರುವ ಮಾತು . ಪಾಪ ಬೆಂಗಳೂರ್ದು ಏನು ತಪ್ಪಿಲ್ಲ ಬಿಡಿ ಅಸಲಿಗೆ ಬ್ಯಾಂಗಲೋರ್ ನಾಮಪದ ಆಗಿ ಉಳ್ದಿಲ್ಲ . Bangalored = laid off due to outsourcing, outsourcing to other parts of Asia.

ಎಂ ಜಿ ರೋಡ್ ಪುಟ್ಪಾತ್ ವ್ಯಾಪಾರಿನ ಮಾತಾಡ್ಸ್ ನೋಡಿ .. ನಮಪ್ಪರಾಣೆ ಅವನ್ ಬಾಯಲ್ಲಿ ವಾಂಗೋ ಸಾರ್ ಇಲ್ಲ ರಾ ಅಂಡಿ ಅಂತಾನೆ ಮಾತಾಡ್ಸೋದು !! ಅದು ಅವನ್ ತಪ್ಪಲ್ಲ ...ಕೊನೆಗೆ ಅವನ್ ಜೊತೆ ವ್ಯಾಪಾರ ಮಾಡೋದು ಬಿಡೋದು ನಮ್ ಕರ್ಮ .
ಈಗ ಹೇಗ್ ಆಗಿದೆ ಅಂದ್ರೆ , ನಾವ್ ಯಾರ್ ಜೋತೆನಾದ್ರು ಮಾತಾಡ್ ಬೇಕು ಅಂದ್ರೆ ಮೊದಲು ಕನ್ನಡ ಬರುತ್ತಾ ಅಂತ ಕೇಳ್ತಿವಿ ...(confirm ಮಾಡ್ಕೊಂದು ...... ಆಮೇಲೆ ಮಿಕ್ಕಿದ್ದು)

ಅದೆಲ್ಲ ಬಿಡ್ರಿ ... ಒಂದ್ ವರ್ಷದ ಹಿಂದೆ ನನ್ ಫ್ರೆಂಡ್ ಒಬ್ಳಿಗೆ ಫೋನ್ ಮಾಡಿದ್ದೆ .... ಬಾಲ್ಯ ಸ್ನೇಹಿತೆ ..ತುಂಬ ಮಾತಾಡಬೇಕು ಅನ್ಕೊಂಡಿದ್ದೆ ... ಅಲ್ಲಿ ಆಗಿದ್ದೆ ಬೇರೆ ... !! ನಮಿಬ್ಬರ ಸಂಬಾಷಣೆ ಇಲ್ಲಿದೆ ನೋಡಿ ..

ನಾನು : ಹೆಲೋ ****** ನ ಮಾತಾಡ್ತಾ ಇರೋದು ...?
ಅವಳು: Yes speaking.. who is calling please
ನಾನು: ನಾನ್ ಕಣಮ್ಮ ಸಂತೋಷ್ ಮಾತಾಡ್ತಾ ಇರೋದು .. ನಿನ್ ಪ್ರೈಮರಿ ಸ್ಕೂಲ್ ಕ್ಲಾಸ್ ಮೇಟು ...
ಅವಳು: really...what a surprise santhu..oh my god i just cant beleive...how are u man..what are you doing..? where are..?
ನಾನು: ನಾನ್ ಚೆನ್ನಾಗಿದ್ದೀನಿ ...(ಇತ್ಯಾದಿ ಇತ್ಯಾದಿ..ಇತ್ಯಾದಿ..ಇತ್ಯಾದಿ..)... ನೀನ್ ಹೇಗಿದ್ದೀಯ ..ಏನ್ ಮಾಡ್ತಾ ಇದ್ದೀಯ ..?
ಅವಳು: I am find da.. i am working for ***ro (ಅರ್ಥ ಮಾಡ್ಕೊಳ್ಳಿ .. ಯಾವ ಕಂಪನಿ ಅಂತ )
ನಾನು: ಇನ್ನೇನ್ ಸಮಾಚಾರ ... ???
ಅವಳು: ohh..nothing special man, you have to tell everything.
ನಾನು: ನಂದು ಸಮಾಚಾರ ಏನು ಇಲ್ಲ ... ನಿನ್ ಮದುವೆ ಆಯ್ತಾ ..?
ಅವಳು: (ಸಣ್ಣದೊಂದು ನಗು - ಕನ್ನಡ ದಲ್ಲಿ ನಕ್ಲೋ , ಇಂಗ್ಲೀಷಲ್ಲಿ ನಕ್ಲೋ ಅಂತ ಗೋತ್ತಗ್ಲಿಲ್ಲ )..no da..still time is there for that..what about you then..?
ನಾನು: (ಸ್ವಲ್ಪ ಜೋರಾಗಿ ನಕ್ಕು ) ಇಲ್ಲ ಕಣಮ್ಮ ..ಇನ್ನು ಲೇಟು ... ಮತ್ತೆ ಯಾವಾಗ್ ಸಿಗ್ತಿಯ .. ??
ಅವಳು: oh no man..i think this month is not possible, i am going to delhi on my project work and again i am going to pattaya, planning to spend time with my mom, dad and aunt..ok santhu, i got some urgent work..will call you later..take care da..bye ok..
ನಾನು: ಓಕೆ ಕಣಮ್ಮ ಫ್ರೀ ಅದಾಗ ಫೋನ್ ಮಾಡು ... ಬೈ (ಹುಡ್ಗಿರು ಯಾವಾಗ take care ಅಂತಾರೋ ನಾವೇ ಅರ್ಥ ಮಾಡ್ಕೊಬೇಕು ...ಮಾತಾಡೋಕೆ ಟೈಮ್ ಇಲ್ಲ ಫೋನ್ ಕಟ್ ಮಾಡು ಅಂತ )
ಒಂದ್ ವರ್ಷ ಆಯಿತು , ಹುಡುಗಿ ಪತ್ತೆ ಇಲ್ಲ ...!!!



ಅಂದ ಹಾಗೆ ನಾನು ಯಾವುದೇ ಕನ್ನಡ ಸಂಘ ಪರವಾಗಿ ಹೋರಾಟ ಮಾಡ್ತಿಲ್ಲ ... !! ಎಲ್ಲಾದರು " ಕನ್ನಡ ಬರುತ್ತಾ " ಅನ್ನೋ ಶಬ್ದ ನಿಮ್ ಕಿವಿಗೆ ಕೇಳಿದ್ರೆ ... ಕನ್ನಡ ನಮ್ಮ್ ಉಸಿರು ಅನ್ನೋದನ್ನ ಮರೀಬೇಡಿ ...!!

ಇಂತಿ
ಸಂತೋಷ್
{****(ಅವಳು) ಎಲ್ಲಿ ಇದ್ದೀಯ ಅಂತ ಗೊತ್ತಿಲ್ಲ , ಕ್ಷಮೆ ಇರಲಿ , ಕ್ಸಮಿಸಿಲ್ಲ ಅಂದ್ರು ಪರವಾಗಿಲ್ಲ adjust ಮಾಡ್ಕೊತೀನಿ}

6 comments:

ವಿಕಾಸ್ ಹೆಗಡೆ/Vikas Hegde said...

ಹುಡ್ಗಿರು ಯಾವಾಗ take care ಅಂತಾರೋ ನಾವೇ ಅರ್ಥ ಮಾಡ್ಕೊಬೇಕು ...ಮಾತಾಡೋಕೆ ಟೈಮ್ ಇಲ್ಲ ಫೋನ್ ಕಟ್ ಮಾಡು ಅಂತ

ಹ್ಹ ಹ್ಹ, ನಿಜ ನಿಜ.

ಕೆಲವು (alomost?) ಕನ್ನಡದ ಹುಡ್ಗೀರ ಅಥವಾ ಕನ್ನಡಿಗರ ಮನಸ್ಥಿತಿಯನ್ನ ಸರಿಯಾಗಿ ಹೇಳಿದ್ದೀರ. ನನಗೂ ಈ ತರಹ ಅನುಭವಗಳು ಸುಮಾರು ಆಗಿವೆ.

***ro ಯಾವ್ ಕಂಪನಿ ಅಂತ ಗೊತ್ತಾಗ್ಲಿಲ್ಲ. ಇನ್ನೆನಾದ್ರೂ ಸುಳಿವು ಕೊಡಿ :)

Santhosh said...
This comment has been removed by the author.
Santhosh said...

ಧನ್ಯವಾದಗಳು ....

****ro - Applying Thought :)

ವಿಕಾಸ್ ಹೆಗಡೆ/Vikas Hegde said...

ಗೊತ್ತಾಯ್ತು ;-)

Anonymous said...

ಅವಳು: (ಸಣ್ಣದೊಂದು ನಗು - ಕನ್ನಡ ದಲ್ಲಿ ನಕ್ಲೋ , ಇಂಗ್ಲೀಷಲ್ಲಿ ನಕ್ಲೋ ಅಂತ ಗೋತ್ತಗ್ಲಿಲ್ಲ )- Nice one.. overall everything is nice..

Manaswi.. said...

ತುಂಬಾ ಚನ್ನಾಗಿ ಬರೆದಿದ್ದೀರಿ,
ಬೆಂಗಳೂರಲ್ಲಿ ಕನ್ನಡ ಮಾತಾಡುವವರ ಸಂಖ್ಯೆಗಿಂತ ಕನ್ನಡ ಬಂದರೂ ಬೇರೆ ಭಾಷೆಯಲ್ಲಿ ಮಾತಾಡುವವರ ಸಂಖ್ಯೆಯೇ ಜಾಸ್ತಿ ಆಗಿದೆ..