Friday, October 31, 2008

ಒಲವ ದೀಪ

ಬಾ ಗೆಳತಿ ಹಚ್ಚಿ ಬಿಡುವ ಒಲವ ದೀಪ ...

ಸಾವಿರ ಕಷ್ಟವಿರಲಿ ಒಮ್ಮೆ
ಹಚ್ಚಿ ಬಿಡುವ ಒಲವ ದೀಪ
ನೋಡಿ ಬಿಡುವ ನೀನು ನಾನು
ನಮ್ಮ ನಮ್ಮ ರೂಪವ

ನಿಜ ಗೆಳತಿ , ಗಾಢ ಕತ್ತಲೆಯನ್ನು
ಬೆಳಗುವಾಸೆಯಿಲ್ಲ
ಬೆತ್ತಲೆಯ ಸತ್ಯಗಳನ್ನು
ಹುಡುಕುವಾಸೆಯಿಲ್ಲ

ಹಚ್ಚಿ ಬಿಡುವ ಒಲವ ದೀಪ
ಪ್ರೇಮ ಧ್ಯಾನಕೆ
ಮುಗಿಯದು ನನ್ನ ಒಲವಿನ ತೈಲ
ಆರದು ಈ ಒಲವ ದೀಪ

ಬಾ ಗೆಳತಿ ಹಚ್ಚಿ ಬಿಡುವ ಒಲವ ದೀಪ ...

8 comments:

ಚರಿತಾ said...

not bad Santhosh....

ಮತ್ತೆ ತಡ ಏಕೆ..? ಹಚ್ಚೇ ಬಿಡಿ....:)

ಚರಿತಾ said...

ಮತ್ತಷ್ಟು ಕವನ ಬರೀರಿ ಸಂತೋಷ್...

Santhosh said...

ಥ್ಯಾಂಕ್ಸ್ ಚರಿತ ... ನಿಮ್ಮಷ್ಟು ಚೆನ್ನಾಗಿ ಕವನ ಬರಿಯೋಕೆ ಬರೋಲ್ಲ !

ನಿಮ್ಮ ಪದ ಸಂಗ್ರಹ ತುಂಬಾ ಚೆನ್ನಾಗಿದೆ .. ಎಲ್ಲವನ್ನು ತುಂಬಾ ಅಚ್ಚು ಕಟ್ಟಾಗಿ ಹೆಣೆಯುತ್ತಿರ !!

shivu K said...

ಸಂತೋಷ್,

ಕವನ ಚೆನ್ನಾಗಿದೆ. ಸರಳವಾಗಿದ್ದರೂ ಒಲವಿನ ಅರ್ಥ ಕಟ್ಟಿಕೊಡುವಲ್ಲಿ ಸಫಲವಾಗಿದೆ. ಬರೆಯುತ್ತಿರಿ.

ಜೋಮನ್ said...

ಚೆಂದದ ಕವಿತೆ ಕಣ್ರಿ. ಇಷ್ಟ ಆಯ್ತು.

Santhosh said...

@ Shivu and Joman,

Tumba Thanks...

Umesh said...

Andahvagi mudibhandhidae e nina kavitae..oolava deepa acchidaeya gaelaya?

Santhosh said...

@ Umesh

Thanks kano :)