ಅದೊಂದು ಅದ್ಭುತವಾದ ಕಲೆ , ನಿಜವಾದ ನಟನೊಬ್ಬ ಮಾತ್ರ ರಂಗ ಭೂಮಿಯಲ್ಲಿ ಉಳಿಯಬಲ್ಲ . ಅಲ್ಲಿ ದಿನವೂ ಹಬ್ಬದ ವಾತವರಣ ,
ಹೊಟ್ಟೆ ತುಂಬ ಊಟವಿಲ್ಲದಿದ್ದರು ಹೊಟ್ಟೆ ತುಂಬ ನಗು ತುಂಬಿರುತ್ತದೆ .
ನಿಜಕ್ಕೂ ಪ್ರತಿಬಾವಂತ ಕಲಾವಿದರಿರುತ್ತಾರೆ , ಸ್ಟೇಜ್ ಮೇಲೆ ಬಂದಾಗ ಪ್ರೇಕ್ಷಕರು ಅಂಡು ಅಲುಗಾಡದಂತೆ ಕೂರುತ್ತಾರೆ . ಕೆಲವೊಂದು ಕೆಳ ಮಟ್ಟದ ಸಂಭಾಶನೆಗಳಿದ್ದರು ರಂಜನೀಯವಾಗಿರುತ್ತದೆ .
"ಎಲ್ಲಿಯು ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು " ಎಂಬ ಕವಿ ವಾಣಿ ಅವರಿಗೆ ಚೆನ್ನಾಗಿ ಒಪ್ಪುತ್ತದೆ , ಎಲ್ಲಿಯು ನಿಲ್ಲದ ಊರೂರು ತಿರುಗಾಟ ಮನೆಯು ಇಲ್ಲ ಕೊನೆಯು ಇಲ್ಲ . ಅವರು ಒಂದು ಊರಲ್ಲಿ ಹೆಚ್ಚೆಂದರೆ ಆರರಿಂದ ಒಂದು ವರ್ಷದವರೆಗೆ ಮಾತ್ರ ಉಳಿಯಬಲ್ಲರು .
ಒಂದು ದಿನ ಹೌಸ್ ಫುಲ್ ಕಂಡರೆ ಒಂದು ವಾರ ಊಟಕ್ಕೆ ಯೋಚನೆ ಇಲ್ಲ .
ಒಂದು ವೇಳೆ ನಸೀಬು ಮಕಾಡೆ ಮಲ್ಕೊಂಡು ಜೋರಾಗಿ ಮಳೆ ಬಂದು ಒಳಗೆ ನೀರು ತುಂಬಿ ಕೊಂಡರಂತೂ ..ಅವರ ಕಥೆ ಹೇಳ ತೀರದು . ಮೂರೂ ದಿನ ಹೀಗೆ ಜೋರು ಮಳೆ ಬಂದದ್ದೆ ಆದರೆ ನಾಲ್ಕನೆಯ ದಿನಕ್ಕೇ ಕಟ್ಟಿದ್ದ ಕಂಬ , ಇಟ್ಟ ಗೂಟ , ತಕಡು, ಹಾರ್ಮೋನಿಯಮ್ ಪೆಟ್ಟಿ , ತಬಲಾ , ಡ್ರಮ್ ಸೆಟ್ಟು , ಪರದೆ , ಹಗ್ಗ ಎಲ್ಲವನ್ನು ಗಂಟು ಕಟ್ಟಿ ಊರ ಜನಗಳ ಹತ್ತಿರ ಭಿಕ್ಷೆ ಬೀಡಿ ಟೆಂಪೂ ದವನಿಗೆ ಅರ್ದಂಬರ್ದ ಬಾಡಿಗೆ ಕೊಟ್ಟು ಬೇರೆ ಊರಿಗೆ ಪ್ರಯಾಣ . ಮನೆಯು ಇಲ್ಲ ಕೊನೆಯು ಇಲ್ಲ .
ಇನ್ನು ನಟರ ಮತ್ತು ಕೆಲಸಗಾರರ "ಪಗಾರ" ಎಂಬ ಅವರ ಪದ ದೂರದ ಮಾತು . ಇನ್ನು ಅಲ್ಲಿ ಇರುವ ಕೆಲಸಗಾರರು ಅಂದರೆ ರಂಗ ಪಟ್ಟಿ ಮಾಡುವವರು , ನೀರು ತುಂಬುವವರು , ಪರದೆ ಕಟ್ಟುವವರು - ಇವರ ಬದುಕಂತೂ ಯಾವ ಶತ್ರುವಿಗೂ ಬೇಡ .
ಎಲ್ಲಾ ವೃತ್ತಿ ರಂಗ ಭುಮಿಯವರ ಹಣೆ ಬರಹ ಇಷ್ಟೇ ..
ಎಲ್ಲೂ ಕೆಲವೊಂದು ನೆಮ್ಮದಿಯಿಂದ ಇದ್ದರೂ ಇರಬಹುದು . ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಹಣೆ ಪಟ್ಟಿ ಹಚ್ಚಿಕೊಂಡು ಸರ್ಕಾರದ ದುಡ್ಡಿಗಾಗಿ ಹೊಂಚು ಹಾಕುತ್ತಿರುವ , ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ದೊಡ್ಡ ದೊರೆಗಳ Sponsorship ಗಾಗಿ ಅವರ ಮನೆಯ ಗೇಟು ಕಾಯುವ ಹವ್ಯಾಸಿ ರಂಗ ಭೂಮಿಯವರ ಎದುರು ವೃತ್ತಿ ರಂಗ ಭೂಮಿ ಕಲಾವಿದರು ಹೆಚ್ಚು ಸ್ವಾಭಿಮಾನಿಗಲೆನಿಸುವುದಿಲ್ಲವೇ..??
6 comments:
ವೃತ್ತಿ ರಂಗಭೂಮಿಯ ಬಗ್ಗೆ ನಿಮ್ಮ knowledge ಎಷ್ಟರ ಮಟ್ಟಿಗೆ ಇದೆ ಎಂದು ಗೊತ್ತಿಲ್ಲ . ಲೇಖನ ಓದಿದರೆ ಸಾಕಷ್ಟು ಅದರ ಬಗ್ಗೆ ತಿಳಿದ ಹಾಗೆ ಇದೆ . ಅಂದ ಮಾತ್ರಕ್ಕೆ ಹವ್ಯಾಸಿ ರಂಗಭುಮಿಯವರನ್ನು ಹೀಗೆ ತೆಗಳುವುದು ತಪ್ಪು.
@ Mr/Ms. Anonymous..
ಅನಾನಿಮಸ್ ಗಳಿಗೆ ಉತ್ತರ ಕೊಡೊ ಆಸಕ್ತಿ ಯಾಗಲಿ ತಾಳ್ಮೆಯಾಗಲಿ ಇಲ್ಲ .. ನಿಮ್ಮ ಹೆಸರು ಹಾಕಿ ಕಾಮೆಂಟ್ ಮಾಡಿ ಕೊಳೋದನ್ನ ಅಬ್ಯಾಸ ಮಾಡ್ಕೊಳಿ .
ಸಂತೋಷ್..
ಎಷ್ತು ಚೆನ್ನಾಗಿ ಬರೆದಿದ್ದೀರಿ...ನನ್ನ ಗೆಳೆಯನ ಅಣ್ಣನ ನಾಟಕ ಕಂಪನಿ ಇದೆ. ನೀವು ಹೇಳಿದ ಮಾತುಗಳನ್ನೇ ಅವರು ಹೇಳಿ ಬೇಸರ ಪಟ್ಟು ಕೊಂಡಿದ್ದರು..
ಬೆಣ್ಣೆ ಹೊಸೆಯುವವರ ಕಾಲ ಇದು ಅನ್ನುತ್ತಾರೆ..
ಚಿಂತನೆ ಹಚ್ಚುವ ಬರಹ..
ಅಭಿನಂದನೆಗಳು...
@ anonymous
ಬೇಜಾರ್ ಮಾಡ್ಕೋಬೇಡಿ ... ಖರಾಬ್ ಮುಡಲಿದ್ದೆ :) ನಾನ್ ಎಲ್ಲಾ ಹವ್ಯಾಸಿ ರಂಗಬೂಮಿ ಕಲಾವಿದರನ್ನು ಬೈತ ಇಲ್ಲ :)average ella haage irtare
@ Prakash,
Nija..ನಿಜ ಬೆಣ್ಣೆ ಹೊಸೆಯುವವರ ಕಾಲ
ಧನ್ಯವಾದಗಳು
Post a Comment