Friday, December 12, 2008

ಪ್ರೀತಿ-ಪ್ರೇಮ ಮತ್ತೊಂದು ನೆನಪು ..

ಪ್ರೀತಿ -ಪ್ರೇಮ ಇದ್ದಕ್ಕೆ ಏನೇ definition ಕೊಟ್ರುನೂ ಯಾವುದು ಸರಿಯಾಗಿ ಆರ್ಥ ಆಗೋಲ್ಲ . ಅದು ಎಷ್ಟೇ ಮುಲಭೂತ ಇಚ್ಚಾ ಕ್ರಿಯೇಯಾಗಿರಬೇಕು ಅಂತ ಪ್ರಯತ್ನಿಸಿದರು ಕೆಲವೊಮ್ಮೆ ಸ್ವಾರ್ಥ ಎಲ್ಲಿಂದಲೂ ಬಂದು ಅಡಗಿ ಕೂತಿರುತ್ತದೆ ....ಎಲ್ಲವನ್ನು ಮತ್ತೆ ತಿದ್ದಿ ಬಿಡೋಣ ಅನ್ನುವಷ್ಟರಲ್ಲಿ ಭಯಂಕರವಾದ ಒಂದು ego ಕಾಡಿಬಿಡುತ್ತೆ..ಸರಿ ಅದೇನೇ ಆಗಲಿ ಹೇಳೇ ಬಿಡೋಣ ... ಇಲ್ಲ ಕಣೇ.. ಎಲ್ಲಾ ನಂದೇ ತಪ್ಪು ದಯವಿಟ್ಟು ಕ್ಷಮಿಸಿಬಿಡು .. ಎಲ್ಲೋ ಒಂದು ಕಡೆ ಇಬ್ಬರು ಬೆಚ್ಚಗೆ ಕುಳಿತು ಕನಸುಗಳನ್ನು ಹೆಕ್ಕಿ ತೆಗೆಯೋಣ. ನಮ್ಮಿಬ್ಬರ ಒಳ್ಳೆತನ , ಕೆಟ್ಟತನ, ಪ್ರೀತಿ, ಕೋಪ ಎಲ್ಲವೂ ನಮ್ಮಿಬ್ಬರಷ್ಟು ಬೇರಾರಿಗೂ ಅರ್ಥವಾಗ್ಲಿಕ್ಕೆ ಸಾದ್ಯ ಇಲ್ಲ .. ನೀನ್ ಹೇಳೋದು ನಿಜ ಕಣೋ ..ನಮ್ಮಿಬ್ಬರ ಒಳ್ಳೆತನ , ಕೆಟ್ಟತನ, ಪ್ರೀತಿ, ಕೋಪ ಎಲ್ಲವೂ ನಮ್ಮಿಬ್ಬರಷ್ಟು ಬೇರಾರಿಗೂ ಅರ್ಥವಾಗ್ಲಿಕ್ಕೆ ಸಾದ್ಯ ಇಲ್ಲ , ಆದ್ರೆ ನಿನ್ನೆಲ್ಲ ತಿಕ್ಕಲುತನಗಳನ್ನು, ನಿನ್ನ ಅಬ್ಯಾಸ-ದುರಭ್ಯಸಗನ್ನು ನನ್ನಿಂದ ಸಹಿಸಲು ಸಾದ್ಯ ಇಲ್ಲ .. I think we both are nothing to do with each other. ಛೆ ! ನನ್ನ ತಿಕ್ಕಲುತನ , ಅದಕ್ಕೊಂದು ಆಕೆಗೆ ನನ್ನ outline. ಎಷ್ಟೊಂದು ಗೋಜಲು ಮಾಡಿಕೊಂಡು ಬಿಟ್ಟಿರ್ತಿವಿ. ಇಲ್ಲ... ನನ್ ಸ್ವಭಾವ ಇದಲ್ಲ ..ನಾನೊಬ್ಬ ತುಂಬಾ Serious ಆದ ಮನುಷ್ಯ . ನನಗೆ ನನ್ನದೇ ಆದ ಸಿದ್ದಾಂತಗಳಿದೆ, ಚಿತ್ರ-ವಿಚಿತ್ರ ಆದರ್ಶಗಳನ್ನು Fevicol ಹಾಕಿಕೊಂಡು ಅಂಟಿಸಿಕೊಂಡಿದ್ದೀನಿ. ನಿಜ ಅದರ ಮೇಲೆ ಬೇರೆ ಯಾರದು ಸಹ ಅದಿಕಾರ ಇರೋದಿಲ್ಲ . . ಆದರು ಕೆಲವೊಮ್ಮೆ ಹೀಗನ್ನಿಸಿದ್ದು ನಿಜ .. ನನ್ನೆಲ್ಲ ಹುಚ್ಚು ಆದರ್ಶಗಳನ್ನು , ಸಿದಾಂತಗಳನ್ನು, ತಿಕ್ಕಲುತನವನ್ನು ಬದಿಗೊತ್ತಿ ಪ್ರಾಮಾಣಿಕವಾಗಿ ಆಕೆಯೊಂದಿಗೆ ಕನಸು ಕಾಣುವ ಆಸೆ ಇನ್ನು ಬಿಟ್ಟು ಹೋಗಿಲ್ಲ .

ನಿನ್ನಲಿರೋ ಈ ಗುಣ ನನಗೆ ಇಷ್ಟ ಆಗ್ಲಿಲ್ಲ ಅನ್ನೋದಿಕ್ಕಿಂತ , ಅದು ನನಗೆ ಅರ್ಥ ಆಗ್ಲಿಲ್ಲ ಕಣೇ ..ಸ್ವಲ್ಪ ಬಿಡಿಸಿ ಹೇಳು ಅಂತ ಕೇಳೋದ್ರಲ್ಲಿ ಹೆಚ್ಚು ಬುದ್ದಿವಂತಿಕೆ ಅಡಗಿದೆ ಅಂತ ನನಿಗೆ ಅರ್ಥವಗೊಷ್ಟರಲ್ಲಿ ..Yes, I also think we both are nothing to do with each other ಅನ್ನೋ ತಿರ್ಮಾನಕ್ಕೆ ಬಂದಾಗಿತ್ತು

ನೆನಪುಗಳೇ ಹಾಗೆ ಎಲ್ಲೂ ಹೋಗಲಾರವು , ಭಾವನೆಯ ಯಾವುದೋ ಒಂದು ನಾದಕ್ಕೆ ಮತ್ತೆ ವಾಪಸ್ ಬಂದು ಗಿರಗಿಟ್ಲೆ ಹೊಡಿತ ಇರುತ್ತೆ .. ಎಂದು ಒಂದು ರಾತ್ರಿ ಸಕತ್ ನಿದ್ದೆ ಮಾಡ್ತಾ ಇರುವಾಗ ಜಲ್ ಅಂತ ಒಂದು ಅಲಾರಂ ಕೊಟ್ಟು ಎಬ್ಬಿಸಿ ಬಿಟ್ಟಿರುತ್ತೆ.

ಪದಗಳಿದ್ದರೂ ಬರೆಯಲು ಆಗ್ತ ಇಲ್ಲ .. ಈ ಪ್ರೀತಿ-ಪ್ರೇಮಗಳೇ ಹೀಗೆ ಎಲ್ಲಾ ಇದ್ದು ಏನೂ ಎಲ್ಲವೇನೂ ..ಎಲ್ಲದಕ್ಕೂ ಒಂದು saftey-vault ಹುಡುಕಿಟ್ಟುಕೊಳ್ಳೋದು ತುಂಬಾ ಕಷ್ಟ

ನ್ಯೂ ಇಯರ್ ... I am going to stop cigerette
ಹೊಸ ವರ್ಷದ ನನ್ನ resolution..
ಅಸಲಿಗೆ ಕಳೆದ ಏಳೆಂಟು ಹೊಸ ವರ್ಷಗಳಿಂದಲೂ ಆ resolution ಬದಲಾಗಿಲ್ಲ

ಖಂಡಿತ ಬದಲಾಗುತ್ತೆ ..

12 comments:

shivu K said...

ಸಂತೋಷ್,

ನಿಮ್ಮ ಹೊಸ ರೆಸಲ್ಯೂಷನ್ ಈ ವರ್ಷವಾದರೂ ಯಶಸ್ವಿಯಾಗಲಿ ಎಂದು ಆರೈಸುತ್ತೇನೆ.

ಸಂತೋಷ್ ಚಿದಂಬರ್ said...

@shivu

Thank u saar :)

Sriranjini said...

good one santosh ;-)

Ashok Uchangi said...

neevu yaarendu gottagalilla.nimma taayiyavara hesarenu?yaara mane?dayamaadi e mail nalli tilisi.nanna uchangibalaga blog nodi.

ashok uchangi

beetelboy said...
This comment has been removed by a blog administrator.
ಚರಿತಾ said...

ಆಹ್,....ಬರಹ ಮನಸು ತಟ್ಟಿತು ಸಂತೋಷ್.
ನಿಜ,ನಮ್ಮ ಸ್ವಪ್ರತಿಷ್ಠೆಯಿಂದಾಗಿ ಎಷ್ಟೆಲ್ಲಾ ಕಳೆದುಕೊಳ್ಳ್ತೀವಿ.
ಹೊಸವರ್ಷದ ನಿಮ್ಮ resolution ಗೆ ALL THE BEST.:)

janaki said...

eshtondu saragavaagi bareyuttiri...nimma baraha tumba easy flowing...

ಚಿತ್ರಾಕರ್ಕೇರಾ, ದೋಳ್ಪಾಡಿ said...

ಆಗಲಿ..ಶುಭವಾಗಲಿ,.ಕನಸು ಈಡೇರಲಿ.
-ಚಿತ್ರಾ

ಸಂತೋಷ್ ಚಿದಂಬರ್ said...

@Chitra madammu..

ಹ ಹಾ ಹ್... ಇನ್ನು ಕನಸು ಕಾಣೋಕ್ಕೆ ಬೇರೆ ನೋಡ್ಬೇಕು :)

ಸಂತೋಷ್ ಚಿದಂಬರ್ said...

@Charita..

Thanks :)

Pramod said...

ನಿಮ್ಮ ಹೊಸ(ಹಳೇ) ರೆಸೊಲ್ಯೂಷನ್ ಮು೦ದಿನ ವರ್ಷನೇ ಈಡೇರಿದ್ರೆ, 2010ಗೆ ಏನ್ ಮಾಡ್ತೀರಿ?!! :)

ಸಂತೋಷ್ ಚಿದಂಬರ್ said...

@ pramod..

again will start smoking - 2010.. and that again going to be new resolution.. :)