Sunday, December 14, 2008

ಪತ್ರ

ಆಗ ನಾವು ಅಣ್ಣನ ಜೊತೆ ಚಾಮರಾಜನಗರದಲ್ಲಿ ಇದ್ವಿ , ಅಣ್ಣ JSS ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪ್ರಾದ್ಯಪಕರಗಿದ್ದರು.ಆಗ ನಾನಿನ್ನು ಐದನೇ ತರಗತಿಯಲ್ಲಿದ್ದೆ ... ಆಗ ನನ್ನ ಸ್ನೇಹಿತನಿಗೆ ಬರೆದ ಪತ್ರ ಇದು . ಮೊನ್ನೆ ಭುವನೇಶ್ವರಕ್ಕೆ ಹೋದಾಗ ಅವನ ರೂಮಿನಲ್ಲಿ ಸಿಕ್ಕಿದ್ದು , ಏನಿಲ್ಲ ಅಂದ್ರು ಇಪ್ಪತ್ತು ಸಲ ಇದೆ ಪತ್ರವನ್ನು ಓದಿದ್ದೆ .. ನಿಮ್ಮಲ್ಲೂ ಹಂಚಿ ಕೊಳ್ಳುವ ಆಸೆ .

ಪ್ರೀತಿಯ ಗಣೇಶನಿಗೆ,

ಅಣ್ಣ ಮತ್ತು ನಾವೆಲ್ಲರೂ ಇಲ್ಲಿ ಕ್ಷೆಮವಾಗಿದ್ದೇವೆ , ನಿನ್ನ ಕ್ಷೇಮ ಸಮಚಾರಕ್ಕೆ ಪತ್ರ ಬರಿ .
ಹೋದ ವಾರ ನಾವು ಕರಿನಂಜನಪುರದವರ ಮೇಲೆ ಮ್ಯಾಚ್ ಹಾಕಿದ್ದಿವಿ . ನಾವು ಸೋತು ಹೋದೆವು . ತೂಡ್ ಬಾಬು ಎರಡು ಕ್ಯಾಚ್ ಬಿಟ್ಟ . ನಾನು ಮತ್ತು ಅಣ್ಣ ಬೂದಿಪಡಗ ಕಾಡಿಗೆ ಹೋಗಿದ್ದೆವು . ಗಂಟೆ ಗಿರೀಶ ನಾನು ಬರುತ್ತೀನಿ ಅಂತ ಗಲಾಟೆ ಮಾಡುತ್ತಿದ್ದ . ನಾನು ಅಣ್ಣನಿಗೆ ಗೊತ್ತಿಲ್ಲದೇನೆ ಶಾಲೆಗೆ ರಜೆ ಹಾಕಿ ಕರಿವರ್ದನರಾಜನ ಬೆಟ್ಟಕ್ಕೆ ಒಬ್ಬನೇ ಹೋಗಿದ್ದೆ . ಮನೆಯಲ್ಲಿ ತೂಡ್ ಬಾಬು ಬಿಟ್ರೆ ಬೇರೆ ಯಾರಿಗೂ ಗೊತ್ತಿಲ್ಲ , ಬೆಟ್ಟ ಚೆನ್ನಾಗಿತ್ತು . ನೀನು ಮನೆಗೆ ಬಂದಾಗ ಅಣ್ಣನಿಗೆ ಏನು ಹೇಳಬೇಡ .

ಮೊನ್ನೆ ನಾವೆಲ್ಲರೂ ಅಣ್ಣನ ಕಾಲೇಜಿಗೆ ಹೋಗಿದ್ದೆವು , ಅಣ್ಣ ಭೂತಗಾಜಿನಲ್ಲಿ ಅಮೀಬಾ ತೋರಿಸಿದರು . ಸಾಗರದಿಂದ ಶಾಂತಲ ಆಂಟಿ ಬಂದಿದ್ದರು , ನಮಗೆಲ್ಲ ದೇವಿ ಭುವನ ಮನಮೋಹಿನಿ ಹಾಡು ಹೇಳಿಕೊಟ್ಟರು .

ಇಲ್ಲಿ ಬೇರೆ ಏನು ವಿಶೇಷ ಇಲ್ಲ , ನೀನು ಪತ್ರ ಬೇರೆ
ಇಂತಿ
ಸಂತೋಷ

12 comments:

  1. ಚೆನ್ನಾಗಿದೆ .. ದೇವಿ ಭುವನ ಮೋಹಿನಿ ಹಾಡು ನೀನು ಸ್ಕೂಲ್ನಲ್ಲಿ ಚೆನ್ನಾಗಿ ಹಾಡ್ತಾ ಇದ್ದೆ ... ಹಾಡಿನ ಪೂರ್ತಿ ಸಾಹಿತ್ಯ ಮರೆತು ಹೋಗಿದೆ ..

    ReplyDelete
  2. ದೇವಿ ಭುವನ ಮನಮೋಹಿನಿ ನಿರ್ಮಲ ಸೂರ್ಯ ಕರೋಜ್ವಳ ತರಣಿ ಜನಕ ಜನನಿ ಜನನಿ
    ಪ್ರತಮ ಪ್ರಭಾತೆ ಉದಿತವಗಮನೆ , ಪ್ರತಮ ಪ್ರಸಾದಿತ ..

    ನನಗು ಅಷ್ಟೇ ನೆನಪಿರೋದು :)

    ReplyDelete
  3. ಪತ್ರ ಚೆನ್ನಾಗಿದೆ. ಜೊತೆಗೆ Raw ಆಗೂ ಇದೆ!

    ReplyDelete
  4. ಸಂತೋಷ್...

    ಪತ್ರದಲ್ಲಿ ನನಗೆ ಮುಗ್ಧತೆ ಕಾಣುತ್ತಿದೆ..ತುಂಟತನದ ಸಂಗಡ...
    ಚೆನ್ನಾಗಿದೆ ಹಳೆಯ ಮೆಲುಕುಗಳು...

    ReplyDelete
  5. @ Shivu and Prakash sir..

    Thank You very much :)

    ReplyDelete
  6. ನಿಮಗಿಂತ ಬೆಟರ್ರು(ನೀವು ಬರೆದ ಪತ್ರದ ಕುರಿತು ಕಳೆದ ನನ್ನ ಅಣ್ಣನ ಪತ್ರಕ್ಕೆ ಪ್ರತಿಕ್ರಿಯಿಸುವಾಗ ಹೇಳಿದ್ರಿ). ಒಳ್ಳೆ ನೆನಪು..ಮತ್ತೊಮ್ಮೆ ಮರುಕಳಿಸಿದೆ. ಇಂಥ ಪತ್ರಗಳಿದ್ದರೆ ಇನ್ನೂ ಹಾಕ್ಬಿಡಿ..ಓದ್ತೀವಿ.
    -ತುಂಬುಪ್ರೀತಿ,
    ಚಿತ್ರಾ

    ReplyDelete
  7. ಪತ್ರಬರೆಯುವ ಕಲೆ ಮಾಯವಾಗುತ್ತಿದ್ದು ಅದನ್ನು ಜೀವಂತವಾಗಿ ಇಡಬೇಕಾದ ಪ್ರಮೇಯ ಮುಂದೊಂದು ದಿನ ಬರಬಹುದು. ನಿಮ್ಮ ಖಾಸಗಿ ಪತ್ರವೂ ಉತ್ತಮವಾಗಿದೆ ಓದಲು. ತೂಡ್ ಬಾಬು ಯಾರು?
    ಒಲವಿನಿಂದ
    ಬಾನಾಡಿ

    ReplyDelete
  8. ಗುರು ನೀನು ಯಾರು ಹೇಳು ಗುರು. ನಾನು ಚಾಮರಾಜನಗರದವನೇ ತಮಾಶೆ ಏನಂದ್ರೆ ನಾವು ಕೂಡ ಕರಿನಂಜನಪುರದವರೊಂದಿಗೆ ಕ್ರಿಕೆಟ್ ಮ್ಯಾಚ್ ಆಡುತಿದ್ದೇವು. ನನ್ನ ಊರು ಸೊಮವಾರಪೇಟೆ. ನಾನು ಒದಿದ್ದು JSS high schiool & colleg up to 2nd PUC. ಹಾ..! ಆ ಬೆಟ್ಟದ ಹೆಸರು ಕರಿವರದರಾಯನ ಬೆಟ್ಟ ಓಕೆ. ನನ್ನನ್ನು ಸಂಪರ್ಕಿಸಲು rajeshbhindu@gmail.com

    ReplyDelete
  9. ಯಾವಾಗ ಮುಂದಿನ updatuuuuu!
    ನಮ್ಮ ಗುರುಗಳಿಗೆ(ರಾಜೇಶ್)ಎಡ್ರೆಸ್ ಕೊಟ್ರಾ?
    -ಚಿತ್ರಾ

    ReplyDelete
  10. ಬಾಲ್ಯದ ಮುಗ್ಧತೆ ಪತ್ರದಲ್ಲಿ ಕಾಣುತ್ತದೆ. ಎಷ್ಟು ಚಂದ ಅಲ್ವ ಬಾಲ್ಯದ ನೆನಪುಗಳು. ನನಗೂ ಇತ್ತೆಚೆಗಷ್ಟೇ ನಾನು ಹೈ ಸ್ಕೂಲಲ್ಲಿ ಇದ್ದಾಗ ನಾನು ಅಣ್ಣನಿಗೆ ಬರೆದ ಪತ್ರವೊಂದು ಸಿಕ್ಕಿತ್ತು, ನಾನು ಪ್ರಕಟಿಸಲೇ ಎಂದು ಯೋಚಿಸುತ್ತಿದ್ದೇನೆ :) ನಿಮ್ಮಿಂದ ಹೀಗೆ ಒಳ್ಳೆಯ ಬರಹಗಳು ಬರುತ್ತಲಿರಲಿ.

    ReplyDelete
  11. ಪತ್ರ ಮುದ್ದು ಮತ್ತು ಮುಗ್ಧವಾಗಿದೆ.

    ಆದರೆ ಅಲ್ಲಲ್ಲಿ (ನಿಮಗೆ ತಿಳಿಸಲೇಬೇಕೆಂಬಷ್ಟು) ಅಕ್ಷರದೋಷಗಳಿವೆ.

    ಓದುವಾಗ ಅಡ್ಡಿಯುಂಟುಮಾಡಿದ್ದರಿಂದ ತಿಳಿಸಬೇಕಾಯ್ತು.

    ReplyDelete