Friday, June 19, 2009

ನೀನಿಲ್ಲದೆ ....

ನೀನು ಮೊದಲು
ನಕ್ಕ ದಿನ
ನಾ ಮೌನಿಯಾದೆ
ಬಾಳ ತುಂಬಾ
ಎಲ್ಲ ಮರೆತು
ನಿನ್ನ ಧ್ಯಾನಿಯಾದೆ

ನಿನ್ನ ನಗುವಿರದ
ನನ್ನ ಊರಿನಲಿ
ಹಕ್ಕಿ ಹಾಡಲಿಲ್ಲ
ನಿನ್ನ ಇರುವಿರದ
ನನ್ನ ತೋಟದಲ್ಲಿ
ಹೂಗಳರಲಿಲ್ಲ

ನನ್ನ ಮನದಲಿ
ನಿನ್ನ ಹೆಸರಿಟ್ಟು
ನನ್ನ ಉಸಿರ ಬೆರೆಸಿ
ಎದೆಯಲಿ ಹಸಿರ ಬೆಳಸಿ
ಹರಸಿ ಹೋದ ಚೈತ್ರ
ಮತ್ತೆ ಮರಳಲಿಲ್ಲ

ನಿನ್ನ ನೋಡುವ
ನಲಿವಿನಲಿ ಮರೆತವು
ಬಾಳಿನ ನಲಿವುಗಳು
ಸೇರುವ ಸಾಹಸದಲ್ಲಿ
ಕಂಡವು ನನ್ನ
ಬಾಳಿನ ಗೆಲುವುಗಳು


Photo: Nic Temby

10 comments:

Umesh said...

loo chenngidae kano.. adare nimma oorigae hogi nodikondu baa ...

PARAANJAPE K.N. said...

ಚೆನ್ನಾಗಿದೆ

Santhosh Rao said...

@ Umesh..
ಥ್ಯಾಂಕ್ಸ್ ... ಹ್ಮಂ, ಊರಿಗೆ ಹೋಗ್ಬೇಕು !! ಮೀಟರ್ ಗೆಜ್ ಟ್ರೈನ್ ಹೋಗಿ ಬ್ರಾಡ್ ಗೆಜ್ ಟ್ರೈನ್ ಬಂದಿದೆ ಈಗ ..

Santhosh Rao said...

@ paranjape..

Dhanyavaadagalu...

Unknown said...

super, ree niwu kavi aagbahudu, good good keep it up, i realy liked this,

sunaath said...

ಸಂತೋಷ,
ಗೆಲವು ನಿಮಗೆ ದೊರೆತದ್ದು ಸಂತೋಷದ ವಿಷಯ. ನಲಿವು, ಗೆಲವು ನಿಮಗೆ ಯಾವಾಗಲೂ ಸಿಗಲಿ ಎಂದು ಹಾರೈಸುತ್ತೇನೆ.

Prabhuraj Moogi said...

ಬಹಳ ದಿನಗಳಾದ ಮೇಲೆ ಮತ್ತೆ ನಮಗೆ ನಿಮ್ಮ ಬರಹ ಓದಲು ಸಿಕ್ಕಿದೆ, "ನೀನಿಲ್ಲದೆ", "ನಿರೀಕ್ಷೆ"ಯಲ್ಲಿ ನಾವೂ ಇದ್ದೆವು!!! ನಿಮ್ಮನ್ನು "ಮೊದಲ ದಿನ ನಕ್ಕು ಮೌನ"ವಾಗಿಸಿದವಳು ಯಾರು ಅನ್ನೊದೇ ನಮ್ಮ ಕುತೂಹಲ... ಎರಡೂ ಕವನಗಳು ಬಹಳ ಚೆನ್ನಾಗಿವೆ.

ಹೆಸರು ರಾಜೇಶ್, said...

nimma padya estavayitu. nimage dhanyavadagalu. nimma kadinava.
rajesh

ಬಾಲು said...

chennagide. :)

ಗೌತಮ್ ಹೆಗಡೆ said...

:):):)