
ಇದು ನನ್ನ ಭಾವಕ್ಕೆ ಬೆಕಾಗಿತ್ತೆನೋ.. ಸುಮಾರು ವರ್ಷಗಳ ಹಿಂದೆ ಇದ್ದ ಪರಿಚಯ ಈಗ ಹೀಗೊಂದು ಹೊಸ ಅರ್ಥಕ್ಕೆ ಗಂಟು ಬೀಳುತ್ತೆ ಅಂತ ತಿಳಿದಿರಲಿಲ್ಲ . ನನ್ನೆಲ್ಲ ಆರ್ಭಟ, ಸಿಟ್ಟು-ಸೆಡವು, ಎಲ್ಲವನ್ನು ಬದಿಗೊತ್ತಿ ಒರೋಗೋ ಹೆಗಲು ಬೇಕೆನಿಸಿದ್ದು ನನ್ನ ಅಂತರಾಳಕ್ಕೆ ಬೇಕಾಗಿತ್ತು.ನೀನು ನನ್ನವಳು ಎಂಬ ಭಾವಕ್ಕಿಂತ , ನಾನು ನಿನ್ನವನು, ನನ್ನದೆಲ್ಲವೂ ನಿಂದೆ ಎಂಬ ಒಂದು ಪರಿಪಕ್ವತೆಯ ಪ್ರಯತ್ನ.
ಮಾಸಲಾದ ಬಣ್ಣಗಳನ್ನು ತೆಗೆದು, ಬಣ್ಣ ಬಳಿದು ಕುಂಚ ಹಿಡಿದು "ಚಿತ್ರ" ಬಿಡಿಸುವ ಹವಣಿಕೆಯಲ್ಲಿ ನಿಂತಿದ್ದಾಳೆ. ಯಾವುದೇ ಪ್ರಶ್ನೆಗಳ ಸರಮಾಲೆ ಇಲ್ಲದೆ ಎಲ್ಲವನ್ನೂ ತಿದ್ದಿ-ತೀಡಿ ತಾನೇ ಉತ್ತರವನ್ನು ಸೂಚಿಸುವ ಪ್ರಶ್ನೆಯಾಗಿಬಿಟ್ಟಿದ್ದಾಳೆ. ತನ್ನೆಲ್ಲ ಚಾತುರ್ಯ , ಚಾಕಚಕ್ಯಗಳನ್ನು ಒಟ್ಟುಗೂಡಿಸಿ ಎಲ್ಲವನ್ನು ಸದ್ದಿಲ್ಲದೆ ಆವಾಹಿಸಿಕೊಂಡುಬಿಟ್ಟಿದ್ದಾಳೆ. ಮತ್ತೆ ಇವೆಲ್ಲವೂ ನನ್ನ ಅಂತರಾಳಕ್ಕೆ ಬೇಕಾಗಿತ್ತು .
ಬಹು ದೂರಕೆ ತೇಲಿಬಿಟ್ಟ ಎಷ್ಟೋ ಭಾವಗಳನ್ನು ಎಲ್ಲಿಂದಲೂ ಹುಡುಕಿ ತಂದು ಎದುರಿಗೆ ಹರಡಿದ್ದಾಳೆ ... !!
Photo:
Balee