Friday, October 30, 2009

ಅಚ್ಚರಸಿಗೆ ..!

ಬಾ ಗೆಳತಿ..
ಮಳೆ ಹನಿಯಲಿ
ಅಚ್ಚ- ಅಡವಿಯಲಿ
ನನ್ನ ಅಚ್ಚರಸಿ
ನಿನಗೆ ನನ್ನುಸಿರನು
ಬೆಚ್ಚಗೆ ಆಚ್ಛಾದಿಸಿ
ಒಲವ-ದೀಪ ಹಚ್ಚಿಟ್ಟು
ಜಗದ ಎಲ್ಲ
ಸಂಚಿಗೆ ಕಿಚ್ಚಿಟ್ಟು
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ

6 comments:

ಚಿತ್ರಾಕರ್ಕೇರಾ, ದೋಳ್ಪಾಡಿ said...

ಸಂತೋಷ್..
ಸುಂದರ ಭಾವಲಹರಿ. ಚೆನ್ನಾಗಿದೆ.
-ಚಿತ್ರಾ

shivu said...

ಬಂದೇ ಬರುತ್ತಾಳೆ....

ಸಂತೋಷ್...

ಬಂದೇ ಬರುತ್ತಾಳೆ....

ಬಾಲು said...

ಬಂದೆ ಬರ್ತಾಳೆ ಹಾಗು ಬಂದಿದ್ದಾಳೆ ಕೂಡ ಅಲ್ವ?

ನಿಮ್ಮ ಹಿಂದಿನ ಪೋಸ್ಟ್ ನೋಡಿ ಹಾಗೆ ಹೇಳಿದೆ.

ತೇಜಸ್ವಿನಿ ಹೆಗಡೆ- said...

ಬದುಕನ್ನು ಈಗಾಗಲೇ ಪ್ರವೇಶಿಸಿದವಳು ನಿಮ್ಮೊಡನೆ ದಟ್ಟಡವಿಗೆ ಬರದಿರುವಳೇ? ಖಂಡಿತ ಬರುವಳು. ಇನ್ನು ಸ್ವಲ್ಪ ಸಮಯವಷ್ಟೇ :)

ಸುಂದರ ಕವನ.

Rajesh Manjunath - ರಾಜೇಶ್ ಮಂಜುನಾಥ್ said...

:-)

ದಿಲೀಪ್ ಹೆಗಡೆ said...

ಸುಂದರವಾದ ಕವನ.. :)