Tuesday, August 19, 2008

ಅಲ್ಲಿ ಇಲ್ಲಿ ಕೇಳಿದ್ದು .. ನೋಡಿದ್ದು !!

ಕಣ್ಣು ಹೊಡೆದು propose ಮಾಡಿ ಅವಳು ಒಪ್ಪಿಕೊಂಡು ಮದುವೆ ಆದ್ರೆ ನಮ್ಮ LIC Bond ಗೋ ಅಥವ Bank A/C ಗೋ Nominee ಆಗ್ತಾಳೆ, ನಾಕ್ ಮಕ್ಳಿಗೆ ತಾಯಿನು ಆಗ್ತಾಳೆ by chance ನಸೀಬು ಮಕಾಡೆ ಮಲಿಕಂಡ್ರೆ ನಮ್ಮ E mail id ಗೆ Password ಆಗ್ತಾಳೆ ಅಥವ ಕೈ ಮೇಲೋ ಎದೆ ಮೇಲೋ ಹಚ್ಚೆ ಆಗಿ ಜೀವನ ಪೂರ್ತಿ ಕಾಡ್ತಾ ಇರ್ತಾಳೆ.....

ಎಂದೋ ಒಂದು ರಾತ್ರಿ ಸಕತ್ ನಿದ್ದೆ ಮಾಡ್ತಾ ಇರಬೇಕಾದ್ರೆ ಎದೆನಲ್ಲಿ ಜಲ್ ಅಂತ ಒಂದು alaram ಕೊಟ್ಟು ಎಬ್ಬಿಸ್ತಾಳೆ !! ಎಂದೋ ಮಾಡಿದ ಆಣೆ, ಕೊನೆವರಗೂ ನಿನ್ ಜೊತೇನೆ ಇರ್ತೀನಿ ಅಂತ ಕೊಟ್ಟ ಭಾಷೆ , ಯಾರಿಗೂ ಹೇಳಬೇಡ ಅಂತ ಹೇಳಿದ ಗುಟ್ಟುಗಳು, "loafer ನನ್ ಮಗ್ನೆ ಚಪ್ಪಲಿ ತಕೊಂಡು ಹೊಡಿತೀನಿ" ಅನ್ನೋವರ್ಗು ಹಳಸಿ ಹೋದ ಸಂಬಂಧ .. ಮತ್ತೆ ... ತಪ್ಪಾಯಿತು ಕಣೋ ಅಂತ ಅತ್ತಿದ್ದು .. ಈ ಎಲ್ಲಾ ನೆನಪುಗಳು ಬಂದಾಗ ಸುಮ್ನೆ ಒಂದು ಸಲ ನಕ್ಕು ಮತ್ತೆ ಮಲಿಕಂಡ್ರೆ ಸರಿ...ಇಲ್ಲ circleಗೆ ಹೋಗಿ ಒಂದ್ ಕ್ವಾಟರ್ ಹೊಡಿತೀನಿ ಅಂದ್ರೆ ... ನಮ್ಮಪ್ಪರಾಣೆ ಉದ್ದಾರ ಆಗಲ್ಲ !!


"Courtesy: ಸ್ವಲ್ಪ ಎಲ್ಲೋ ಓದಿದ ನೆನಪು, ಸ್ವಲ್ಪ ನಾನೆ ಸೇರಿಸಿ ಬರೆದಿದ್ದು

ಇಂತಿ ಹಳೆ Dove ಮತ್ತು ಹೊಸ Dove ಗಳ ವಿಶ್ವಾಸಿ.
ಸಂತೋಷ್
(ಎಲ್ಲದಕ್ಕೂ ಕ್ಷಮೆ ಇರಲಿ)

2 comments:

  1. ಕ್ಷಮ್ಸಿದ್ದೀವಿ :-)

    ReplyDelete
  2. ಸಂತೋಷ್ ಸಾರ್

    ಇದು ಪಕ್ಕ ಅನುಭವದ ಮಾತಾ?

    ಇದರಲ್ಲಿರುವ ಸ್ಕೆಚ್ ತುಂಬಾ ಚೆನ್ನಾಗಿದೆ.

    ಮತ್ತೊಂದು ವಿಷಯ;
    ನೀವು ನನ್ನ ಬ್ಲಾಗ್ ನೋಡಿ ಓದಿ ಅದರಲ್ಲಿ ಕಾಮೆಂಟ್ ಮಾಡಿದ್ರಿ. ಅದ್ರೆ ಇವತ್ತು ನಾನು ಅದರಲ್ಲಿನ ತಪ್ಪುಗಳನ್ನೆಲ್ಲಾ delite ಮಾಡಿ ಮತ್ತೆ ಅದೇ ಲೇಖನಗಳನ್ನು ಇನ್ನಷ್ಟು
    ಸುಂದರಗೊಳಿಸಿದ್ದೀನಿ. ನೀವು ಮತ್ತೊಮ್ಮೆ ನನ್ನ ಬ್ಲಾಗಿಗೆ ಬನ್ನಿ. ಓದಿ enjoy ಮಾಡುತ್ತೀರಿ ಅನ್ನೋ ಭರವಸೆ
    ಕೊಡ್ತೀನಿ. ಮತ್ತಷ್ಟು ಹೊಸ ಲೇಖನ ಹಾಕಿದ್ದೀನಿ.
    ಕಾಮೆಂಟ್ ಮಾಡಿ.
    thanks.
    ಬ್ಲಾಗ್ ವಿಳಾಸ:
    http://camerahindhe.blogspot.com/
    ಫೋಟೊ ಸಹಿತ ಲೇಖನಕ್ಕಾಗಿ:
    http://chaayakannadi.blogspot.com/

    ಶಿವು.ಕೆ

    ReplyDelete