ಮೊನ್ನೆ ನನ್ ಅಣ್ಣ ಫೋನ್ ಮಾಡಿ - " ಸಂತೋಷಾ , ಯಾವಗಪ್ಪ ಮದುವೆ ಆಗ್ತಿಯ ? ವಯಸ್ಸು ಆಗ್ತಾ ಬಂದಲಪ್ಪ ? ಏನ್ ಕಥೆ ನಿಂದು ..? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ .. ನಾನಿದ್ದವನು ಏನೂ ಒಂದು ಹಾರಿಕೆ ಉತ್ತರ ಕೊಟ್ಟು ಸುಮ್ಮನಾದೆ . ಒಬ್ಬನೇ ಕೂತು ಯೋಚನೆ ಮಾಡ್ತಾ , ನಾನಗೆ ಹಾಳು ಮಾಡಿಕೊಂಡ ಸಂಬದಗಳು , ಅವೇ ಕಳಚಿಕೊಂಡದ್ದು , ಹೆಸರೇ ಇಲ್ಲದ ಕೆಲವು ಸಂಭಂದಗಳು ...ಎಲ್ಲ ಸಂಬದಗಳು ಹಾಗೆ .. ಯಾವಕ್ಕು ಸರಿಯಾಗಿ ಈಜು ಬರೋದಿಲ್ಲ . ಭಾವಗಳ ಬಾವಿಯಲ್ಲಿ ಬಿದ್ದು ಒದ್ದಾಡ್ತಾ ಇರುತ್ತೆ . ಎಲ್ಲದಕ್ಕೂ ಹಗ್ಗ ಕಟ್ಟಿ ಮೇಲೆತ್ತುವಷ್ಟರಲ್ಲಿ ಮತ್ತೊಂದಷ್ಟು ಬಾವಿಗೆ ಬಿದ್ದಿರುತ್ತೆ ... ಯಾವುದೂ ಒಂದು ಪುಸ್ತಕದಲ್ಲಿ ಓದಿದ ನೆನಪು - Don't put too much emotional weight on any relationship
****************************************************************************
ರೀ ಸಂತೋಷ್ , ತುಂಬ ಚೆನ್ನಾಗಿ ಕವಿತೆ ಬರಿತಿರಿ , ನೀವ್ ಕವಿನ ? - ಹೀಗೊಬ್ಬಕೆ ಕೇಳಿದ ಪ್ರಶ್ನೆಗೆ ನಗು ತಡೆಯಲಾಗಲಿಲ್ಲ !
ಇಲ್ಲ ಕಣಮ್ಮ ನಾನ್ ಕವಿ ಅಲ್ಲ , ಕವಿತೆ ಬರೆದ ಮಾತ್ರ ಕವಿ ಆಗೋಕೆ ಸಾದ್ಯ ಇಲ್ಲ . ನಮಗೆ ಅಂಟಿ ಎಷ್ಟೋ ಮನೋಪ್ರವ್ರುತ್ತಿಗಳಲ್ಲಿ ಕವಿತೆ, ಬರಹ ಸಹ ಒಂದು . ಆಕೆಗೆ ಮನೋಪ್ರವೃತ್ತಿ ಅಂದ್ರೆ ಏನು ಅಂತ ತಿಳಿಸಿ ಹೇಳೋಷ್ಟರಲ್ಲಿ ...ಯಪ್ಪಾ ! ಸಾಕ್ ಸಕಗೊಯಿತು .
****************************************************************************
ಯು.ಎಸ್ ರಿಟರ್ನ್ ಗೆಳೆಯನೊಬ್ಬನ ನಡೆ/ನುಡಿ ಪಾಯಿಂಟ್ ಗಳು
೧. In US ಅಥವಾ When I was in US.... ಆಮೇಲೆ ಮಿಕ್ಕಿದ್ದು
೨. "Still I am feeling that essence of Jet Lag" - ಬಡ್ಡಿ ಮಗ ಅಲ್ಲಿಂದ ವಾಪಸ್ ಬಂದು ನಾಲ್ಕು ತಿಂಗಳು ಆಗಿರತ್ತೆ
೩. ಏರ್ಪೋರ್ಟ್ ನಲ್ಲಿ ಬ್ಯಾಗಿಗೆ ಅಂಟಿಸಿದ್ದ , ಏರ್ವೇಸ್ ಸ್ಟಿಕರ್ ಒಂದು ವರ್ಷ ಆದರು ತೆಗ್ದಿರೋದಿಲ್ಲ - ಬಿಟ್ರೆ ಹಣೆ ಮೇಲೆ ಅಂಟುಸ್ಕೊಂಡು ಓಡಾಡೋದೊಂದು ಬಾಕಿ
೪. Table Manners ಬಗ್ಗೆ ಎರಡು ಗಂಟೆ ಲೆಕ್ಚರ್ - ( ಬಿಡ್ಲಾ ಸಾಕು ನಾನು ಒಂದ್ ವರ್ಸ ಪೈವ್ ಸ್ಟಾರ್ ಹೋಟ್ಲು ನಲ್ಲಿ ಮಣ್ಣ ಹೊತ್ತಿವ್ನಿ .. ನಂಗು ವಸಿ ಗೊತ್ತೈತೆ ಅಂತ ಹೇಳಿ ಬಾಯಿ ಮುಚ್ಚಿಸಿದ್ದಯಿತು)
೫. ಯಾವ್ ಬ್ರಾಂಡ್ ಎಣ್ಣೆಗೆ ಏನ್ ಮಿಕ್ಸ್ ಮಾಡಿದ್ರೆ ಎಷ್ಟು ಕಿಕ್ ಕೊಡುತ್ತೆ ಅನ್ನೋದು (ಹಂಗೆ ಹೇಳ್ದೊನು ಒಂದ್ ದಿನ ಫುಲ್ ಟೈಟ್ ಆಗಿ , ಕಲರ್ ಕಲರ್ ವಾಂತಿ ಮಾಡ್ಕೊಂಡಿದ್ದ ... ಯಾಕ್ಲ ಹಿಂಗಾಯಿತು ಅಂತ ಕೇಳಿದಿಕ್ಕೆ, ಸ್ಥಳ ಮಹಾತ್ಮೆ ಅಂತಾನೆ )
೬. ಯಾಕ್ಲ ಇಂಡಿಯಾಗೆ ವಾಪಸ್ ಬಂದೆ ಅಲ್ಲೇ ಇರಬೇಕಾಗಿತ್ತು ಅಂತ ಕೇಳಿದ್ರೆ .....No man, ಅಲ್ಲೂ ಸಿಕ್ಕಾಪಟ್ಟೆ ಕಾಸ್ಟ್ ಕಟ್ಟಿಂಗು. ಟಾಯ್ಲೆಟ್ ಪೇಪರ್ ನ ಎರಡು ಕಡೆ use ಮಾಡಿ ಅಂತಾರೆ !!
Allo ninge inge yaaru helidru!
ReplyDeleteNange gottiro age neenu US gu hogilla,
So U r not the right person to talk like thissssss
ಪುಟ್ಟ ನಿಂಗೆ .. gist ಅರ್ಥವಾದಂತಿಲ್ಲ .. ನನ್ ಹೊಗಿಲ್ದೆ ಇರಬಹುದು . ಕೆಲವರು ಹೋಗಿ ಬಂದವರ ಹುಚ್ಚಾಟಗಳನ್ನು ಹೇಳಿದ್ದೇನೆ ಅಷ್ಟೇ ..
ReplyDeleteNodappa neenu mass agi foreign returns na baita idiya! Idu Dodda tappu :)
ReplyDeletehahhahhaa.....:)
ReplyDeletewel...kinda joke i like it.
ReplyDelete@ charita...
ReplyDeleteyavdikke nakkidri anta gottaglilla
@ Harshan
ReplyDeletesaar... yavdu jokes bardilla :)
ಸಂತೋಷ್,
ReplyDeleteಬಲು ಮಜಾ ಇದೆ ಬರಹ. ನನ್ನ ಅಮೇರಿಕಾ ಮೇಲಿನ ಸಿಟ್ಟನ್ನ ನೀವು ವರ್ಣಿಸಿದ ಟಾಯ್ಲೆಟ್ ಪೇಪರನ್ನು ಎರಡು ಕಡೆ ಉಪಯೋಗಿಸಿ ಅಂತ ಬರೆದಿದ್ದೀರಲ್ಲ ಆಗಲೇ ಸಮಾಧಾನವಾಗಿದ್ದು.
@ Shivu,
ReplyDeleteDanyavadagalu :)
ಸಂತೋಷ್....
ReplyDeleteಜನರ ಬೂಟಾಟಿಕೆಯನ್ನು ಚಂದವಾಗಿ ಬರೆದಿದ್ದೀರಿ....
@Prakash..
ReplyDeleteThanks sir..
ಚೆನ್ನಾಗಿ ಬರೇತಿರಲ್ಲಾ. ನಿಮ್ ಬರಹ ನಗುವಿನ ಟಾನಿಕ್!!! ನಾನು ಶರಧಿ..ಒಂದು ಸಲ ಸಾಧ್ಯವಾದರೆ ಬ್ಲಾಗ್ ಗೆ ಭೇಟಿ ನೀಡಿ
ReplyDelete-ಚಿತ್ರಾ
ha ha ha.. super
ReplyDeletetension tagalangilla, jokena joke aagi tagobeku :)
Chennagide blog... kannaDadalllo ishTu janaa blog bareetaare matte adanna ishTu janaa odtaare amtaa gottiralilla... keep it up...
ReplyDeletehi........
ReplyDeletethumba chennagide....... yaaru foreign returns irtaro means yarige ee nature thumba irutho avru egindale foreign ge hogidvi annod kooda marthogthare........
nice fantastic......
@Hema...
ReplyDeleteThanks :)
ಚೆನ್ನಾಗಿದೆ ಪಾಯಿ೦ಟ್ಸ್, ಶಾರ್ಟ್ ಆ೦ಡ್ ಸ್ವೀಟ್ :)
ReplyDeleteಇನ್ನೂ ಇವೆ, ಸೇರಿಸಿ ನಕ್ಕುಬಿಡಿ :))
ReplyDelete-z ಇದು ಝಡ್ ನಿಂದ ಜೀ ಅಗಿರತ್ತೆ
-೦ ಇದು ಜ಼ೆರೊ ಇಂದ ಬರೀ ಒ ಆಗಿರತ್ತೆ (hundred and one ಬದಲಾಗಿ one o one)
-ಯಾವಗ್ಲು ಕಾರ್ ನ ಎಡಗಡೆ ಬಾಗಿಲು ತೆಗೆದು steering -ಹುಡುಕ್ತ ಇರ್ತಾರೆ (ಅದಕ್ಕೊಂದು ಕೊಂಕು, ಬಂದು ೬ ತಿಂಗಳಾದ್ರು)
-ಮಾತಿಗೆ ಮುಂಚೆ Poor India ಅಂತಿರ್ತಾರೆ
-ನಾವು ೫೦ ರೂಪಯಿನಾ ಅಂದ್ರೆ, just 1 dollar man, forget it ಅಂತಾರೆ!!