ಗೆಳೆತಿ ನಿನಗೊಂದು ಕಿವಿ ಮಾತು ..
ಇತಿಹಾಸವೆನೇನೂ ಹೇಳುತ್ತಿದೆ
ಕೇಳಿಸಿಕೂ ಸುಮ್ಮನೆ
ಯಾರದೂ ಕೂಗುಗಳು ಕೇಳಿಸಿದರೆನಂತೆ
ನೆಮ್ಮದಿಯ ನಾಳೆಗಳು ನಮ್ಮವೇ
ಅಪ್ಪ ಬೈಯುವರೆಂದು ಹೆದರಿ ಕೂರದಿರು
ಮಾವ ಎನ್ನುವ ಸಲಿಗೆ ನನಗೂ ಇದೆ ಗೆಳತಿ
ತಪ್ಪು ಎಂದು ಅತ್ತೆ ಬೈದರೆ
ಅತ್ತು ಬಿಡು, ಕ್ಷಮಿಸಲಾರದ ತಪ್ಪು ಯಾವುದು ಇಲ್ಲ
ಬೇರಾವ ಮಾತುಗಳು ಕೇಳಿಸದಿರಲಿ
ನನ್ನೆದೆಯ ಬಡಿತದ ಹೊರತು
ಮನ ಮುತ್ತಿದಾ ನಲ್ಲೆ ಬಂದು ಮನೆ ತಟ್ಟಿದರೆ
ಬಾಳಲು ಬಹುದು ಜೊತೆಯಲಿ ಬೆರೆತು
********************************************************
ನಾನೇ ಬರೆದು ನಾನೇ ಅಳಿಸಿದೆ
ಗೀಚಿದ ಗೆರೆಗಳಿಗೆ ಭಾವ ಅವಿತಿದೆ
ಭಾವ ತುಂಬಿ ಬರೆದ ಸಾಲು
ಹೃದಯ ತುಂಬಿ ಹರಿದ ಸಾಲು
ಬದಲಾಯಿಸಿ ಬರೆಯ ಬೇಕೆಂದನಿಸಲಿಲ್ಲ
ಅಳಿಸಿದಲ್ಲೇ ಮತ್ತೇನನು ಬರೆಯಲಾಗಲಿಲ್ಲ
ವ್ಯರ್ಥವಾದ ಸಾಲೊಂದು
ಇರಬಾರದಿತ್ತು
ಅಳಿಸೋ ಮುಂಚೆ ಅರ್ಥ
ಬರಬೇಕಿತ್ತು .....
ಸಂತೋಷ್,
ReplyDeleteಕವನ ಚೆನ್ನಾಗಿದೆ.....
ವ್ಯರ್ಥವಾದ ಸಾಲೊಂದು
ಇರಬಾರದಿತ್ತು
ಅಳಿಸೋ ಮುಂಚೆ ಅರ್ಥ
ಬರಬೇಕಿತ್ತು...
ನಾನು ತುಂಬಾ ಇಷ್ಟಪಟ್ಟ ಸಾಲುಗಳು....
ಮುಂದುವರಿಯಲಿ ನಿಮ್ಮ ಪದ ಪ್ರಯೋಗ....
ಸಂತೋಷ್ ಇಷ್ಟೊಂದು ಚೆನ್ನಾಗಿ ಕವನ ಬರೆದಿದ್ದೀರಿ ಅನ್ನುವಾಗ ನಿಜಕ್ಕೂ ಅಚ್ಚರಿಯಾಯಿತು.ಬಹುಶಃ ಈ ಮಾತು ಡಜನ್ ಗಟ್ಟಲೆ ಗೆಳತಿಯರಿಗೆ ಕಿವಿಮಾತಾದೀತು. ಭಾವ ತುಂಬಿ ಬರೆದ ಸಾಲುಗಳು ಮನತಟ್ಟಿದವು..ಹೆಚ್ಚೇನೂ ಹೇಳಾರೆ..'ಅಳಿಸಿದರೆ ಮತ್ತೇನನ್ನೂ ಬರೆಯಲಾಗಲಿಲ್ಲ..ವ್ಯರ್ಥವಾದ ಸಾಲೊಂದು ಇರಬಾರದಿತ್ತು...." ನಂಗೂನು ಇಷ್ಟವಾಯಿತು. ನನ್ ಕಡೆಯಿಂದ ಪ್ರೀತಿಯ ಅಭಿವಂದನೆಗಳು...ಇನ್ನಷ್ಟು ಬರೆಯಿರಿ,..ಆಸ್ವಾದಿಸಲು ನಾವಿದ್ದೇವೆ.
ReplyDelete-ತುಂಬುಪ್ರೀತಿ,
ಚಿತ್ರ
ಸಂತೋಷ ಅವರೆ,
ReplyDeleteಮೊದಲ ಬಾರಿ ನಿಮ್ಮ ಬ್ಲಾಗಿಗೆ ಬಂದಿದ್ದೇನೆ. ಚೆನ್ನಾಗಿತ್ತು ಕವನ..
ಭಾವ ತುಂಬಿ ಬರೆದ ಸಾಲು
ಹೃದಯ ತುಂಬಿ ಹರಿದ ಸಾಲು --> ಸೂಪರ್ರೋ ಸೂಪರ್ರು.
ಸಂತೋಶ್....
ReplyDeleteಕವನದ ಭಾವಗಳು....
ಮನಸ್ಸಿಗೆ ತಟ್ಟುವ ಹಾಗೆ ಬರೆದಿದ್ದೀರಿ...
ಎಷ್ಟು ಚೆನ್ನಾಗಿ ಬರೆದಿದ್ದೀರಿ...?
ವಾವ್...!!
ಪ್ರತಿ ಸಾಲು... ವಿರಹಿಗಳಿಗೆ
ನೋವಿನ ಸಾಂತ್ವನ ಹೇಳುವಂತಿದೆ...
ನನಗೆ ಬಹಳ ಇಷ್ಟವಾಯಿತು...
ನಿಮ್ಮ ಕವನದ ಪ್ರತಿ ಸಾಲಿಗೂ..
ಅದರ ಭಾವಗಳಿಗೂ..
ನಿಮಗೂ...
ನನ್ನದೊಂದು...
ಸಲಾಮ್....
ಹಾಯ್ ಸಂತೋಷ್,
ReplyDeleteತು೦ಬಾ ಅರ್ಥಪೂರ್ಣವಾಗಿದೆ. ಇಷ್ಟವಾಯಿತು.
ಬರೆಯುತ್ತಿರಿ..
ಏನ್ರೀ,..ಎಷ್ಟ್ ಚೆನ್ನಾಗ್ ಬರೆದಿದ್ದೀರಿ...!!
ReplyDeleteಹೊಸ ವರ್ಷ - ನಿಮ್ಮೆಲ್ಲಾ ಮಧುರ ಕಾಮನೆಗಳನ್ನು ಈಡೇರಿಸಲಿ,ನಲ್ಮೆಯ ಗೆಳತಿ ನಿಮ್ಮವಳಾಗಲಿ ಎಂದು ಆಶಿಸುತ್ತೇನೆ.
modale helidante, neevu chennaagi bareyutteeri. punha kavana shurumaadidralla.. tumbaa santosha!
ReplyDelete:-)
Chennagi Bariteera, Munduvaresi.
ReplyDeleteಎಲ್ಲಾರಿಗೂ ತುಂಬ ಧನ್ಯವಾದಗಳು ... :)
ReplyDeletenanu oadutta bnda ella kavanagaloo tumbaa ishtavaadavu. sakat bareeteeri neevu:)
ReplyDelete