ಸ್ನೇಹಿತರ ಹತ್ತಿರ ಲೊಟ್ಟೆ-ಲೋಸ್ಕು ಪುರಾಣ ಮಾತಾಡ್ತಾ ಇರ್ಬೇಕಾದ್ರೆ ಮನುಷ್ಯರೆಲ್ಲಾ ಅಮೀಬಾಗಳಂತೆ Reproduction ಮಾಡೋಹಾಗಿದ್ದಿದ್ರೆ ಹೇಗ್ ಇರ್ತಿತ್ತು ಅನ್ನೂ ವಿಷಯ ಪ್ರಸ್ತಾಪ ಆಗಿತ್ತು , ಒಂದು ವೇಳೆ ಮನುಷ್ಯರೆಲ್ಲಾ ಅಮೀಬಾ ತರ ಆಗೊಗಿದ್ರೆ ಕವಿತೆಗಳು, ಚಿತ್ರಗಳು, ಬಣ್ಣಗಳು ಯಾವುದು ಹುಟ್ಟುತ್ತಿರಲಿಲ್ಲವೇನೋ, ಪ್ರಣಯಕ್ಕೂ ಮತ್ತು ಪ್ರಳಯಕ್ಕೂ ಅಂತಹ ವ್ಯತ್ಯಾಸ ಗೊತ್ತಾಗ್ತಾ ಇರ್ಲಿಲ್ಲ ! . ಆದ್ರೆ ನೆನಪುಗಳನ್ನು ಅಮೀಬಾಕ್ಕೆ ಹೋಲಿಸಬಹುದು, ಒಂದರ ಹಿಂದೆ ಒಂದು ಬಿಚ್ಚಿಕೊಳ್ತಾ ಹೋಗುತ್ತೆ , ಕೆಲವೊಂದು ಬೇಡವಾದ ನೆನಪುಗಳ ಮೇಲೆ Attempt to Murder ಕೇಸ್ ಹಾಕಿ ಗಲ್ಲಿಗೆ ಹಾಕೋಣ ಅಂದ್ರೆ ಹೇಗೋ ಜಾಮೀನಿನ ಮೇಲೆ ಹೊರೆಗೆ ಬಂದು ಮತ್ತೆ ಕಾಡ್ತಾವೆ !
ಬೇಡ ಕಣ್ಲಾ ಇಷ್ಟೊಂದು complex ಆಗ್ ಬೇಡ ಅಂತ ಸ್ನೇಹಿತನ ಕಾಳಜಿ ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಶಾಪ್ಪಿಂಗ್ ಮಾಲ್ ಗಳಲ್ಲಿ ಕಳೆದು ಹೋಗೋಕೆ ಇಷ್ಟ ಇಲ್ಲ , ಅಜ್ಞಾತದ ಕಡೆಗೆ ಒಂದು ನೆಗೆತ ಬೇಕು ಅನ್ಸುತ್ತೆ, a perfect unfamiliar. ಒಂದು ಚೂರು ಪರಿಚಯವಿಲ್ಲದ್ದನ್ನು ಕಾಣದ ಊರಿಗೆ ಹೋಗಿ ಗೊತ್ತಿಲ್ಲದನ್ನು ಹುಡುಕುವ ಆಸೆ ಮರೀಚಿಕೆ ಆಗೋ ಭಯ ಕಾಡಿದಾಗೆಲ್ಲ ಕವಿತೆ, ಹಾಡು, ಡಾರ್ಕ್ ರಮ್ ಯಾವುದು ರುಚಿಸೋಲ್ಲ. ಪ್ರತೀ ನಿಮಿಷವೂ ಗಂಟೆಗಳಷ್ಟು ಕೆಳೆದ ಅನುಭವ (ಥೇಟ್ ಗಾಂಜಾ ಹೊಡೆದಂತೆ). ಬಹುಶಃ ಇದು ಮನಸ್ಸಿನ ಒಂದು ಭಾವದ ಉತ್ಕಟತೆ ಆಗಿರಲಿಕ್ಕೆ ಮಾತ್ರ ಸಾಧ್ಯವೇನೋ .
ಕೊನೆಗೆ ನಮ್ಮೆಲ್ಲಾ ತೀವ್ರ ತರಹದ ಭಾವನೆಗಳನ್ನು ಕಲ್ಪಿಸಿಕೊಳ್ಳುವಂತಹ intensity ಮನಸ್ಸಿಗಿದ್ದರೂ ಎಲ್ಲವೋ ನಮ್ಮ ಅಭಿವ್ಯತಿತ್ವಕ್ಕೆ ಮತ್ತು ಮಾನಸಿಕ ಪರಾತಂತ್ರ್ಯಕ್ಕೆ ಬಿಟ್ಟಿದ್ದು. ಪರಾತಂತ್ರ್ಯ ಭಾವವಿರುವುದು ಮನಸಿನ್ನಲ್ಲೇ ಹೊರತು ದೇಹದಲಲ್ಲವಲ್ಲ. ಕಾಮಾಟಿಪುರದ ಬೀದಿಗಳಲ್ಲಿ ನಿರೋದ್ ಪ್ಯಾಕೆಟ್ ಮಾರುವ ಪುಟ್ಟ ಬಾಲಕನನ್ನು ಕಂಡಾಗ ಫೆಮಿನಿಸಂನ ತತ್ವಗಳು ಊದಿ ಹಾರಲು ಬಿಟ್ಟ ಬಲೂನ್ , ಬಹುಶಃ ಅದು ಪರಾತಂತ್ರ್ಯದ ಇನ್ನೊಂದು phase ಇರಬಹುದೇನೋ. ಲೊಟ್ಟೆ-ಲೋಸ್ಕು ಪುರಾಣಗಳು, ಫೆಮಿನಿಸಂ ತತ್ವಗಳು, ದೊಡ್ಡ ದೊಡ್ಡ ಆಚಾರ್ಯರ ಸಿದ್ದಾಂತಗಳು, ವೈಜ್ಞಾನಿಕ ಥಿಯರಿಗಳು, ರಾತ್ರಿ ದಂಧೆಗಳ ಮೇಲೆ ನಿಂತ ಪಟ್ಟಣಗಳ ಹಗಲುಗಳು ನಮ್ಮ ನಮ್ಮ ಮನೆಯ ಉಪ್ಪಿನ ಋಣದಿಂದ ಮುಕ್ತವಾಗಿರಲಿಕ್ಕೆ ಸಾದ್ಯನೇ ಇಲ್ಲವೇನೋ.

Optical Illusion Image By - Ava7
ಸಂತೂ,
ReplyDeleteನಿಜಕ್ಕೂ ಚಿಂತನೆಗೆ ಗ್ರಾಸವಾಗಿರೋ ವಿಚಾರ.
ಯಾಕೆ ಈ ಥರ ಹುಳ ಬಿಡ್ತೀರ ತಲೆಗೆ ?
ಆದರೂ "ಕಾಮಾಟಿಪುರದ ಬೀದಿಗಳಲ್ಲಿ ನಿರೋದ್ ಪ್ಯಾಕೆಟ್ ಮಾರುವ ಪುಟ್ಟ ಬಾಲಕನನ್ನು ಕಂಡಾಗ ಫೆಮಿನಿಸಂನ ತತ್ವಗಳು ಊದಿ ಹಾರಲು ಬಿಟ್ಟ ಬಲೂನ್" ನಿಜಕ್ಕೂ ಬಹಳ ಫೀಲಿಂಗ್ ಕೊಡ್ತು.
ಕಟ್ಟೆ ಶಂಕ್ರ
ಲೇಖನ ಚಿಕ್ಕದಗಿದ್ರು ತುಂಬ ವಿಷಯಗಳನ್ನು ಹೇಳುತ್ತೆ, ನಿಜಕ್ಕೂ ಚಿಂತನೆಗೆ ಹಚ್ಚುವ ಬರಹ.
ReplyDelete"ಲೊಟ್ಟೆ-ಲೋಸ್ಕು ಪುರಾಣಗಳು, ಫೆಮಿನಿಸಂ ತತ್ವಗಳು, ದೊಡ್ಡ ದೊಡ್ಡ ಆಚಾರ್ಯರ ಸಿದ್ದಾಂತಗಳು, ವೈಜ್ಞಾನಿಕ ಥಿಯರಿಗಳು, ರಾತ್ರಿ ದಂಧೆಗಳ ಮೇಲೆ ನಿಂತ ಪಟ್ಟಣಗಳ ಹಗಲುಗಳು ನಮ್ಮ ನಮ್ಮ ಮನೆಯ ಉಪ್ಪಿನ ಋಣದಿಂದ ಮುಕ್ತವಾಗಿರಲಿಕ್ಕೆ ಸಾದ್ಯನೇ ಇಲ್ಲವೇನೋ" ಈ ಸಾಲುಗಳು ತುಂಬ ಇಷ್ಟವಾದವು. ಅಂದ ಹಾಗೆ ನೀವು ತುಂಬ ಸರಾಗವಾಗಿ ನಿರರ್ಗಳವಾಗಿ ಬರೆದಿದ್ದೀರ .
@ ಶಂಕರ..
ReplyDeleteಫೀಲ್ ಆಗಿದಕ್ಕೆ ಥ್ಯಾಂಕ್ಸ್ , ನಾನು ಕಾಮಾಟಿಪುರ ಪ್ರತ್ಯಕ್ಷವಾಗಿ ನೋಡಿದಾಗ ತಲೇಲಿ ಹೆಗ್ಗಣ, ಹಾವು, ಹಲ್ಲಿ. ಹುಳ ಹಿಪ್ಪಡೆ ಬಿಟ್ಕೊಂಡಿದ್ದೆ
ಕೆಲವೊಂದು ಬೇಡವಾದ ನೆನಪುಗಳ ಮೇಲೆ Attempt to Murder ಕೇಸ್ ಹಾಕಿ ಗಲ್ಲಿಗೆ ಹಾಕೋಣ ಅಂದ್ರೆ ಹೇಗೋ ಜಾಮೀನಿನ ಮೇಲೆ ಹೊರೆಗೆ ಬಂದು ಮತ್ತೆ ಕಾಡ್ತಾವೆ !
ReplyDeleteಚಂದದ ಸಾಲುಗಳಿವು.
ಬರಹ ಚಿಂತನಾರ್ಹ...
ಅಶೋಕ ಉಚ್ಚಂಗಿ
ಈಗಾಗಲೇ ಭಾರತದ ಜನಸಂಖ್ಯೆ ೧೧೦ ಕೋಟಿ ಆಗಿದೆ. ಅಮೀಬಾ ತರಹಾ reproduction ಮಾಡೋ ಹಾಗಿದ್ರೆ!
ReplyDeleteವಿಚಾರ ಮಾಡೋಕೇ ಹೆದರಿಕೆ ಆಗತ್ತೆ.
Going a step behind the thoughts and emotions expressed may give a calmed alertness that help see things with greater clarity and disappearing of the issues itself!
ReplyDeleteಸಂತೋಷ್...
ReplyDeleteಶಂಕರ್ ಹೇಳಿದಹಾಗೆ ತಲೆಯಲ್ಲಿ ಹುಳ ಬಿಡುವ ಕೆಲಸ ಯಾಕೆ..?
ನಿಮ್ಮ ಮಾತು ಅಕ್ಷರ ಸಹ ಸತ್ಯ...
ನಿಮ್ಮ ಕವನಗಳ ಹಾಗೆ..
ಲೇಖನವೂ ಚೆನ್ನಾಗಿರುತ್ತದೆ..
ಅಭಿನಂದನೆಗಳು..
ಅಶೋಕ್ಅವರಿಗೆ:
ReplyDeleteಧನ್ಯವಾದಗಳು... :)
ಸುನಾಥನ್ ಅವರಿಗೆ:
:) ಚಂದ್ರ ಲೋಕದಲ್ಲಿ ವ್ಯವಸ್ಥೆ ಆಗ್ತಿತ್ತೇನೋ
ಪ್ರಕಾಶ್ ಅವರಿಗೆ:
ಇಲ್ಲ ಬಿಡಿ ಇನ್ ಮೇಲೆ ಹುಳ ಬಿಡೋ ಕೆಲಸ ಮಾಡೋಲ್ಲ :(
___________________________________
sms ಹಾಗು ಫೋನ್ ಮೂಲಕ ಮೆಚ್ಚುಗೆ ಸೂಚಿಸಿದ ಮಿತ್ರರಿಗೂ ಧನ್ಯವಾದಗಳು
ಸಂತೋಷ್,
ReplyDeleteಏನ್ರಿ ಇದು ತುಂಬಾ ದಿನದ ಮೇಲೆ ಇಷ್ಟೊಂದು ಸೀರಿಯಸ್ ವಿಚಾರವನ್ನು ಕೈಗೆತ್ತಿಕೊಂಡಿದ್ದೀರಿ....ಪ್ರಾರಂಭ ಹೇಗೋ ಶುರುಮಾಡಿ ಅಂತ್ಯ ಈ ರೀತಿ ಮಾಡಿ ಎಲ್ಲರನ್ನು ಚಿಂತೆಗೆ ಹತ್ತಿಸಿದ್ದೀರಿ...good. keep it up!
ಶಿವೂ ಸರ್.. ಪ್ರತಿಕ್ರಿಯೆಗೆ ಧನ್ಯವಾದಗಳು .
ReplyDeleteತುಂಬಾ ವಿಷಯಗಳನ್ನು ಹೇಳ್ ಬೇಕು ಅನ್ನಿಸಿದ್ರೂ ..ಅಕ್ಷರಗಳಲ್ಲಿ ಇಳಿಸಲು ಆಗ್ತ ಇಲ್ಲ .. :)
"ಕಾಣದ ಊರಿಗೆ ಹೋಗಿ ಗೊತ್ತಿಲ್ಲದನ್ನು ಹುಡುಕುವ ಆಸೆ ಮರೀಚಿಕೆ ಆಗೋ ಭಯ ಕಾಡಿದಾಗೆಲ್ಲ ಕವಿತೆ" lines bahaLa chennaagive, bahaLa gahanavaada vishayada bagge barediddeeri nalku saari Odidaaga oMdishTara maTTige baavaarth gottayitu..
ReplyDelete@ Prabhu..
ReplyDeleteNalku saari oodo kashta tagondidakke dhanyavaadagalu..
ಬರಹ ಹೊಸ ತರ ಇದೆ ..
ReplyDeleteಆದ್ರೆ ಕೆಲವೊಂದು ವಿಷಯಗಳು ಸ್ಪಷ್ಟವಾಗಿ ಅರ್ಥ ಆಗೋ ತರ ಇಲ್ಲ , ಸ್ವಲ್ಪ ಸರಳವಾಗಿ ಬರಿ ಬಹುದಿತ್ತೇನೋ !
ಲೇಖನ ಸುಲಭವಾಗಿ ಶುರುವಾಗಿ ನ೦ತರ ಗ೦ಭಿರ ವಾಗುತ್ತ ಸಾಗುತ್ತದೆ. ಲೆಖನ ಚಿಕ್ಕದು... ವಿಷ್ಯ ದೊಡ್ಡದು.
ReplyDelete"ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಶಾಪ್ಪಿಂಗ್ ಮಾಲ್ ಗಳಲ್ಲಿ ಕಳೆದು ಹೋಗೋಕೆ ಇಷ್ಟ ಇಲ್ಲ , ಅಜ್ಞಾತದ ಕಡೆಗೆ ಒಂದು ನೆಗೆತ ಬೇಕು ಅನ್ಸುತ್ತೆ, a perfect unfamiliar. ಒಂದು ಚೂರು ಪರಿಚಯವಿಲ್ಲದ್ದನ್ನು ಕಾಣದ ಊರಿಗೆ ಹೋಗಿ ಗೊತ್ತಿಲ್ಲದನ್ನು ಹುಡುಕುವ ಆಸೆ ಮರೀಚಿಕೆ ಆಗೋ ಭಯ ಕಾಡಿದಾಗೆಲ್ಲ ಕವಿತೆ, ಹಾಡು, ಡಾರ್ಕ್ ರಮ್ ಯಾವುದು ರುಚಿಸೋಲ್ಲ" ......
ಹ್ಯಾಟ್ಸ್ ಅಪ್!!! ಅಧ್ಬುತ ವಾದ ಸಾಲುಗಳು!!!
ತಲೆಗೆ ತು೦ಬನೆ ಹುಳಗಳು ಹೊದವು!!!
ಬಾಲು:
ReplyDeleteಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು , ಹೀಗೆ ಬರುತ್ತಿರಿ
ಸಂತೋಷ್ ಅವರೆ,
ReplyDeleteಚಿಕ್ಕದಾದರೂ ಗಂಭೀರವ ವಿಷಯಗಳನ್ನು ಗಹನ ಚಿಂತನೆಗೀಡುಮಾಡುವಂತಿದೆ ಲೇಖನ.
"ಆದ್ರೆ ನೆನಪುಗಳನ್ನು ಅಮೀಬಾಕ್ಕೆ ಹೋಲಿಸಬಹುದು, ಒಂದರ ಹಿಂದೆ ಒಂದು ಬಿಚ್ಚಿಕೊಳ್ತಾ ಹೋಗುತ್ತೆ , ಕೆಲವೊಂದು ಬೇಡವಾದ ನೆನಪುಗಳ ಮೇಲೆ Attempt to Murder ಕೇಸ್ ಹಾಕಿ ಗಲ್ಲಿಗೆ ಹಾಕೋಣ ಅಂದ್ರೆ ಹೇಗೋ ಜಾಮೀನಿನ ಮೇಲೆ ಹೊರೆಗೆ ಬಂದು ಮತ್ತೆ ಕಾಡ್ತಾವೆ !"-
ನೀವು ಹೇಳಿದ್ದು ನೂರು ಶೇಕಡಾ ಸತ್ಯ. ನೆನಪುಗಳೇ ಹಾಗೇ ಸವಿ/ಕಹಿ ಬೇಧವಿಲ್ಲದೇ ಬಂದು ಮನಸ್ಸನ್ನು ಮುತ್ತುತ್ತವೆ. ಕೆಂಪಿರುವೆ, ಕಪ್ಪಿರುವೆಗಳೆರಡೂ ಸಕ್ಕರೆಗೆ ಮುತ್ತಿದಂತೇ.
ಕೆಲವೊಂದು ಕಡೆ ನನಗೆ ವಿಷಯಗಳ ಸ್ಪಷ್ಟತೆಗೆ ಕೊಂಚ ಕಷ್ಟವಾದರೂ ನಿಮ್ಮೊಳಗಿನ ಚಿಂತನೆ ನನ್ನೊಳಗೂ ತುಂಬಿತು.
ಹೀಗೇ ಬರೆಯುತ್ತಿರಿ. ಬರುತ್ತಿರುವೆ.
ನಾನು ಧರಿತ್ರಿ..ಬ್ಲಾಗ್ ಲೋಕಕ್ಕೆ ಹೊಸಬಳು. ಒಂದು ಸಲ ನನ್ ಕಡೆ ಬನ್ನಿ ಸರ್
ReplyDelete-ಧರಿತ್ರಿ
ಸಂತೋಷ್,
ReplyDeletetumba chennagide...lekhana
ಸಂತೊಷ ಬಹಳ ದಿನಗಳಾಯ್ತು ಯಾಕೇ ಎನೂ ಬರೆದಿಲ್ಲ, ಬಹಳ ಚೆನ್ನಾಗಿ ಬರೆಯುತ್ತಿದ್ದಿರಿ, ಅಚಾನಕ್ಕಾಗಿ ನಿಲ್ಲಿಸಿಬಿಟ್ಟಿದ್ದೀರಿ, ನಿಮ್ಮದೇ ಆದ ತೊದರೆಗಳಿರಬಹುದು.. ಅದರೂ ಬಿಡುವು ಮಾಡಿಕೊಂಡು ಮತ್ತೆ ಬರೀರಿ...
ReplyDelete