Friday, October 30, 2009

ಅಚ್ಚರಸಿಗೆ ..!

ಬಾ ಗೆಳತಿ..
ಮಳೆ ಹನಿಯಲಿ
ಅಚ್ಚ- ಅಡವಿಯಲಿ
ನನ್ನ ಅಚ್ಚರಸಿ
ನಿನಗೆ ನನ್ನುಸಿರನು
ಬೆಚ್ಚಗೆ ಆಚ್ಛಾದಿಸಿ
ಒಲವ-ದೀಪ ಹಚ್ಚಿಟ್ಟು
ಜಗದ ಎಲ್ಲ
ಸಂಚಿಗೆ ಕಿಚ್ಚಿಟ್ಟು
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ

6 comments:

  1. ಸಂತೋಷ್..
    ಸುಂದರ ಭಾವಲಹರಿ. ಚೆನ್ನಾಗಿದೆ.
    -ಚಿತ್ರಾ

    ReplyDelete
  2. ಬಂದೇ ಬರುತ್ತಾಳೆ....

    ಸಂತೋಷ್...

    ಬಂದೇ ಬರುತ್ತಾಳೆ....

    ReplyDelete
  3. ಬಂದೆ ಬರ್ತಾಳೆ ಹಾಗು ಬಂದಿದ್ದಾಳೆ ಕೂಡ ಅಲ್ವ?

    ನಿಮ್ಮ ಹಿಂದಿನ ಪೋಸ್ಟ್ ನೋಡಿ ಹಾಗೆ ಹೇಳಿದೆ.

    ReplyDelete
  4. ಬದುಕನ್ನು ಈಗಾಗಲೇ ಪ್ರವೇಶಿಸಿದವಳು ನಿಮ್ಮೊಡನೆ ದಟ್ಟಡವಿಗೆ ಬರದಿರುವಳೇ? ಖಂಡಿತ ಬರುವಳು. ಇನ್ನು ಸ್ವಲ್ಪ ಸಮಯವಷ್ಟೇ :)

    ಸುಂದರ ಕವನ.

    ReplyDelete
  5. ಸುಂದರವಾದ ಕವನ.. :)

    ReplyDelete