Thursday, December 2, 2010

ಬಂಧಿ

ಮತ್ತೆ ನಿನ್ನ ಹೃದಯದಲ್ಲಿ ಬಂಧಿಯಾಗುವಾಸೆ

ದಯವಿಟ್ಟು ಜಾಮೀನು ಕೊಟ್ಟು

ಹೊರಗೆಳೆಯಬೇಡ ಗೆಳತೀ

ನೀನಿಲ್ಲದ ಜೈಲಿನಲ್ಲಿ ನಾನು ಇಂತಿಷ್ಟೇ.....

ಕಬ್ಬಿಣದ ಸರಳುಗಳ ಮಧ್ಯೆ

ಬಿಗಿ ಉಸಿರಿಡಿದು ನೀರವತೆ ಪಹರೆಯಲಿ

ಮುಗ್ಗರಿಸಿ.. ತಬ್ಬಿರಿಸಿ..

ಮಾಸಲು ನೆನಪುಗಳನು ವಿಲೆವಾರಿಗೊಳಿಸಿ

ತಾಜಮಹಲನು ಕಟ್ಟಿ

ಆಗೊಮ್ಮ ಈಗೊಮ್ಮೆ ಬಂದು ಹೋಗುವ

ನಿನ್ನ ಬಿಸಿ ಉಸಿರ ಸೆರೆ ಹಿಡಿದು

ಉಸಿರು ಬಿಚ್ಚಿ ...

ಉಸಿರಾಡಬಯಸುವ ಅಸ್ತಮಾ ರೋಗಿಯಂತೆ...

6 comments:

  1. ಸುಂದರವೀ ಬಂಧನ!

    ReplyDelete
  2. ಸುಮಧುರವೀ ಬಂಧನ!

    ReplyDelete
  3. ಸರ್
    ಅದೆಷ್ಟು ಚೆಂದಾಗಿ
    ಭಾವನೆಗಳನ್ನ ಜೋಡಿಸಿದ್ದಿರಾ?
    ವಾವ್ಹ್ ನೈಸ್ ...!!ತುಂಭಾ ಚೆನ್ನಾಗಿದೆ

    ReplyDelete
  4. tumbaa sundara kavana

    aadare odalu tadavaayitu

    kshame irali :)

    ReplyDelete
  5. ಮೌನದ ಬಂಧನದಿಂದ ಈಗಷ್ಟೆ ಬಿಡಿಸಿಕೊಡ ಹಾಗಿವೆ ಈ ಸಾಲುಗಳು.
    ನಿಮ್ಮ ಮೌನ ಮತ್ತಷ್ಟು ಮಾತಾಡಲಿ..

    ReplyDelete
  6. ಸು೦ದರ ಕಲ್ಪನೆಯ ಭಾವನಾತ್ಮಕ ಕವನ.

    ReplyDelete