ಬ್ಯಾಂಗಲೋರ್ ಬೆಂಗಳೂರು ಆಗೈತೆ
ಪುಟ್ಟ ಪುಟ್ಟಿಯರ ಪುಟ್ಟ ಪದ್ಯದ ಮ್ಯಾಗೆ ಹ್ಯಾರಿ ಪೊಟ್ಟರ್ ಕುಂತೈತೆ
ಅವ್ವಂದಿರ ಬಾಯಲ್ಲಿ ಈಳಿಗೆ ಮಣೆ ರುಬ್ಬೋ ಕಲ್ಲು ಮರ್ತೊಗೈತೆ
ಇಂಗ್ಲೀಸು ಬರಾಕಿಲ್ಲ ಅಂದ್ರೆ ಅಪ್ಪ ಜಡ್ ಜಡಿಕಂಡು ಹೊಡಿತಾನೆ
ಸಾಲೆನಾಗೆ ಇಂಗ್ಲಿಸ ಮಾತಾಡಕಿಲ್ಲ ಅಂದ್ರೆ ಮೆಡುಂಮ್ಮೊರು ದಂಡ ಕಟ್ಟು ಬಡ್ಡೆದ್ನೆ ಅಂತಾಳೆ
ಅವಲಕ್ಕಿ ಪವಲಕ್ಕಿ ಅಂತಿದ್ದ ಪುಟಾಣಿ ಬಾಯ್ನಾಗೆ ಲವ್ ಡವ್ ತುಂಬೈತೆ
ಪಟ್ಟಣದ ಹುಡ್ಗಿಗೆ ಗೊತ್ತಿಲ್ಲಪ್ಪೋ ನಂ ಸಾಲ್ ಮರದ ತಿಮ್ಮಕ್ಕ
ಗೊತ್ತಿದ್ರೆ ಗೊತ್ತಿರ್ತೈತೆ ಐಸ್ವರ್ಯ ರೈ ಅವಳ್ ಅವ್ವುನ್ನ್ ಹೆಸ್ರು
ಇಲ್ಲ ಅಂದ್ರೆ ಅವಳ್ ಸಾಕೋ ನಾಯಿ ಹೆಸ್ರು
ಹುಟ್ಟಿದ್ದು ಯವುರಮ್ಮಿ ಅಂದ್ರೆ ಬ್ಯಾಂಗಲೋರ್
ಬ್ಯಾಂಗಲೋರ್ ಬೆಂಗಳೂರು ಆಗೈತೆ
ನಾಲಗೆ ಸೀಳ್ಸಿ ಬಾಯಿ ಹೊಲ್ಸಕಿದ್ರುನು ಮೂಗ್ನಾಗೆ ಕನ್ನಡ ಪದ್ವಾಡ್ತೀನಿ
ಅಂತಿದ್ದ ರತ್ನನ್ ಪರ್ಪಂಚ್ ದಾಗೆ ಉಸಿರ್ರ್ ಕೊಡೊ ಗಾಳಿನೇ ಇಂಗ್ಲಿಸ್ ಆಗೋದ್ರೆ ಎಂಗಅಣ್ಣ
ಬರ್ರಲ ಕನ್ನಡ ಬರದವರಿಗೆ ಕನ್ನಡ ಕಲ್ಸವ

ReplyDeleteಅಂತಿದ್ದ ರತ್ನನ್ ಪರ್ಪಂಚ್ ದಾಗೆ ಉಸಿರ್ರ್ ಕೊಡೊ ಗಾಳಿನೇ ಇಂಗ್ಲಿಸ್ ಆಗೋದ್ರೆ ಎಂಗಅಣ್ಣ
ಈಗ ಇಂಗೇ ಆಗೋಗ್ತೈತಣ್ಣ, ಏನ್ ಮಾಡೋದಣ್ಣ :(
ಕನ್ನಡ ಬರದವ್ರಿಗೆ ಕನ್ನಡ ಕಲ್ಸದ್ಕಿಂತ ಕನ್ನಡಿಗರು ಕನ್ನಡವಾಡಿದ್ರೆ ಸಾಕು ಮೊದಲು.
ಚೆನ್ನಾಗಿ ಬರೆದಿದ್ದೀರಿ.
@ Vikas...
ReplyDeleteಕನ್ನಡ ಬರದವ್ರಿಗೆ ಕನ್ನಡ ಕಲ್ಸದ್ಕಿಂತ ಕನ್ನಡಿಗರು ಕನ್ನಡವಾಡಿದ್ರೆ ಸಾಕು ಮೊದಲು.... ಚೆನ್ನಾಗಿ ಹೇಳಿದ್ದೀರ, ಕನ್ನಡಕ್ಕೆ ಎಂತ ಕಾಲ ಬಂತು ರೀ ... ನಿಜ್ಜ ಹೇಳ್ತೀನಿ... ಕನ್ನಡ ಮಾತಾಡಿದ್ರೆ ಯಾವ್ದೋ ಬೇರೆ ಗ್ರಹ ದಿಂದ ಬಂದಿರೊಂಗೆ ನೋಡ್ತಾರೆ !! ಹಾಗಂತ ನಂಗೇನು ಇಂಗ್ಲಿಷ್ ಬರಲ್ಲ ಅಂತ ಅರ್ಥ ಅಲ್ಲ...