Monday, October 26, 2009

ಕುಂಚ ಹಿಡಿದು ನಿಂತವಳು ...!!


ಇದು ನನ್ನ ಭಾವಕ್ಕೆ ಬೆಕಾಗಿತ್ತೆನೋ.. ಸುಮಾರು ವರ್ಷಗಳ ಹಿಂದೆ ಇದ್ದ ಪರಿಚಯ ಈಗ ಹೀಗೊಂದು ಹೊಸ ಅರ್ಥಕ್ಕೆ ಗಂಟು ಬೀಳುತ್ತೆ ಅಂತ ತಿಳಿದಿರಲಿಲ್ಲ . ನನ್ನೆಲ್ಲ ಆರ್ಭಟ, ಸಿಟ್ಟು-ಸೆಡವು, ಎಲ್ಲವನ್ನು ಬದಿಗೊತ್ತಿ ಒರೋಗೋ ಹೆಗಲು ಬೇಕೆನಿಸಿದ್ದು ನನ್ನ ಅಂತರಾಳಕ್ಕೆ ಬೇಕಾಗಿತ್ತು.ನೀನು ನನ್ನವಳು ಎಂಬ ಭಾವಕ್ಕಿಂತ , ನಾನು ನಿನ್ನವನು, ನನ್ನದೆಲ್ಲವೂ ನಿಂದೆ ಎಂಬ ಒಂದು ಪರಿಪಕ್ವತೆಯ ಪ್ರಯತ್ನ.

ಮಾಸಲಾದ ಬಣ್ಣಗಳನ್ನು ತೆಗೆದು, ಬಣ್ಣ ಬಳಿದು ಕುಂಚ ಹಿಡಿದು "ಚಿತ್ರ" ಬಿಡಿಸುವ ಹವಣಿಕೆಯಲ್ಲಿ ನಿಂತಿದ್ದಾಳೆ. ಯಾವುದೇ ಪ್ರಶ್ನೆಗಳ ಸರಮಾಲೆ ಇಲ್ಲದೆ ಎಲ್ಲವನ್ನೂ ತಿದ್ದಿ-ತೀಡಿ ತಾನೇ ಉತ್ತರವನ್ನು ಸೂಚಿಸುವ ಪ್ರಶ್ನೆಯಾಗಿಬಿಟ್ಟಿದ್ದಾಳೆ. ತನ್ನೆಲ್ಲ ಚಾತುರ್ಯ , ಚಾಕಚಕ್ಯಗಳನ್ನು ಒಟ್ಟುಗೂಡಿಸಿ ಎಲ್ಲವನ್ನು ಸದ್ದಿಲ್ಲದೆ ಆವಾಹಿಸಿಕೊಂಡುಬಿಟ್ಟಿದ್ದಾಳೆ. ಮತ್ತೆ ಇವೆಲ್ಲವೂ ನನ್ನ ಅಂತರಾಳಕ್ಕೆ ಬೇಕಾಗಿತ್ತು .

ಬಹು ದೂರಕೆ ತೇಲಿಬಿಟ್ಟ ಎಷ್ಟೋ ಭಾವಗಳನ್ನು ಎಲ್ಲಿಂದಲೂ ಹುಡುಕಿ ತಂದು ಎದುರಿಗೆ ಹರಡಿದ್ದಾಳೆ ... !!


Photo: Balee

14 comments:

sunaath said...

ಅಭಿನಂದನೆಗಳು!

Santhosh Rao said...

thank you sunaath sir :)

shivu.k said...

ಸಂತೋಷ್,

ಬರಹದಲ್ಲಿ ಏನೋ ವಿಶೇಷ ಅರ್ಥವಿರುವಂತಿದೆ. ಅದಕ್ಕಾಗಿ ಅಭಿನಂದನೆಗಳು.

ತೇಜಸ್ವಿನಿ ಹೆಗಡೆ said...

ಹಾಗೆಯೇ ಎಲ್ಲಾ ಭಾವಗಳನ್ನೂ ಸೆಳೆದುಕೊಂಡು ಬಿಡಿ. ಕುಂಚ ಹಿಡಿದು ನಿಂತವಳ ಚಿತ್ರಣ ತುಂಬಾ ಚೆನ್ನಾಗಿದೆ. ಆಕೆಯ ಚಿತ್ರವನ್ನೂ ಹಾಕಿದ್ದರೆ ಒಳ್ಳೆಯದಿತ್ತು :)

Anonymous said...

who is that lucky girl...

Santhosh Rao said...

ಶಿವೂ ಸರ್ ... ಥ್ಯಾಂಕ್ಸ್ , ನಿಜ ತುಂಬಾ ವಿಶೇಷವಾದ ಅರ್ಥವಿದೆ !!

ತೇಜಸ್ವಿನಿ ಮೇಡಂ .. ಧನ್ಯವಾದಗಳು, ಚಿತ್ರ ಹಾಕೋಕೆ ಅವಳ Permission ಇನ್ನು ಸಿಕ್ಕಿಲ್ಲ !!

Unknown said...

yen sir..... yen kathe.... yeno special iro hage ide... yaaru aahudgi...

Anonymous said...

ಕುಂಚ ಹಿಡಿದು ನಿಂತವಳು..ಸುಂದರ ವರ್ಣನೆ. ಯಾರವಳು? ಅಂತ ಹೇಳಿದ್ರೆ ತಪ್ಪೇನಿದೆಪ್ಪಾ? ಅವರ ಅನುಮತಿ ಮೇರೆಗೆ ಅವಳ ಚಿತ್ರ ಹಾಕಿಬಿಡಿ. ಇಲ್ಲಾಂದ್ರೆ ನಾವೇ ಸರ್ಚ್ ಮಾಡಬೇಕು ಗುರು...
ಅಭಿನಂದನೆಗಳು...ಬೇಗ ಊಟ ಹಾಕ್ಸಿ.

ಸಾಗರದಾಚೆಯ ಇಂಚರ said...

ಕುಂಚ್ ಹಿಡಿದವಳು ಸಿಕ್ಕಿದ್ದಕ್ಕೆ ಅಭಿನಂದನೆಗಳು
ಶುಭಸ್ತ್ಯ ಶೀಗ್ರಂ

Santhosh Rao said...

@ Shwetha,

idu Katheyalla Jeevan.. :)

ಅನಾನಿಮಸ್ಸು ...:) ಲಗ್ನ ಪತ್ರಿಕೆ ಕೊಡೋಕೆ ನಿಮ್ಮ್ ಹೆಸರು ಕೊಟ್ರೆ ಒಳ್ಳೇದಿತ್ತು :)

Ittigecement said...

ಯಾರವಳು...?
ಯಾರವಳು..?
ಸಂತೋಷದ ಮನ ಕದ್ದವಳು..?

ಅಭಿನಂದನೆಗಳು...


ವ್ಯಕ್ತಪಡಿಸಿದ ಶಬ್ಧಗಳಿಗೂ ನನ್ನ ಸಲಾಮ್...
ಬಹಳ ಸುಂದರವಾಗಿ ಬರೆದಿದ್ದೀರಿ...!

ಸಿಹಿ ಊಟ ಯಾವಾಗ..?

ದಿನಕರ ಮೊಗೇರ said...

ಸಂತೋಷ್ ಸರ್,
ನಿಮ್ಮ ಬ್ಲಾಗ್ ಗೆ ನನ್ನ ಪ್ರಥಮ ಭೇಟಿ, ತುಂಬಾ ಗಮನ ಸೆಳೆಯಿತು.... ಏನನ್ನೋ , ಯಾರಿಗೋ ಹೇಳಲು ಹೊರತಿದ್ದಿರಿ... ಅದು ಅವರಿಗೆ ಸರಿಯಾಗಿ ಅರ್ಥ ಆಗತ್ತೆ ಬಿಡಿ..... ನಮಗೂ ಅರ್ಥವಾಯ್ತು ಆದ್ರೆ ನಮಗೆ ಅರ್ಥವಾಗಿ ಏನೂ ಪ್ರಯೋಜನ ಇಲ್ಲವಲ್ಲ....

ಬಾಲು said...

ಅಭಿನಂದನೆಗಳು.

ಹೆಸರು ರಾಜೇಶ್, said...

'nammura' soseyagutihalu nanna gelathi. avalannu jopanavagi kapadiko geleya.
Abhinandanegalu.
Rajesh,
Saritha & Saraha