Tuesday, September 23, 2008

Quality ಬದುಕು ಅದಕ್ಕೊಂದು Acknowledgement

ಎಷ್ಟೂ ಜನ ಜೀವನದಲ್ಲಿ ಬರುವ ಸಣ್ಣ ಸಣ್ಣ ಆನಂದವನ್ನು ಮರೆತಿರುತ್ತಾರೆ , ಸುಮಾರು ದಿನಗಳ ನಂತರ ಮಳೆ ಬಂದಾಗ ಗಮ್ಮ್ ಎನ್ನುವ ಮಣ್ಣಿನ ಸುವಾಸನೆ ಸವಿಯಲು ಮರೆತಿರುತ್ತಾರೆ , ಸಣ್ಣ ಮಗುವೊಂದು ನಮ್ಮನು ನೋಡಿ ನಿಷ್ಕಲ್ಮಶ ನಗೆ ಬೀರಿದಾಗ ಮನ್ನಸ್ಸು ಅರಳದೆ ಆಕಾಶ ತಲೆ ಮೇಲೆ ಬಿಟ್ಟವರ ಹಾಗೆ ಯೋಚನೆ ಮಾಡುತ್ತಾ ಹೊರಟಿರುತ್ತಾರೆ , ಕೊನೆಗೆ ಅವರಿಗೆ ಒಂದೊಳ್ಳೆ ಪುಸ್ತಕ , ಹಾಡು, ಸಂಗೀತ ಯಾವುದು ರುಚಿಸುವುದಿಲ್ಲ . ಅಂತವರು ಬಾಯಿ ಬಿಟ್ಟರೆ ..."ಬಿಡು ಗುರೂ ಕೊನೆವರಗೂ ಗೂಟ ಹೊಡ್ಕೊಂಡ್ ಇರ್ತಿವ ", "ಓದಿ ಯಾರ್ ಉದ್ದಾರ ಆಗಿದ್ದರೆ ಬಿಡು ಗುರು" ಇರೋವರ್ಗೂ life enjoy ಮಾಡಬೇಕು ....

ನಿಜ life enjoy ಮಾಡಬೇಕು .. ರಾತ್ರಿ ಆಯಿತು ಅಂದ್ರೆ ಕಂಠ ಪೂರ್ತಿ ಕುಡ್ತು, ದಾರೀಲಿ ಸಿಕ್ಕ ಮಾಂಸ ತಿಂದು ಯಾವುದೋ ಹೆಣ್ಣಿನ ಹಿಂದೆ ಹೋಗುವ ತಲೆ ಮಾಸಿದವನು ಅವನದೇ ಆದ ಶೈಲಿನಲ್ಲಿ life enjoy ಮಾಡ್ತಾ ಇರ್ತಾನೆ , ಹೊತ್ತಿಗೆ ಮುಂಚೆ ಮನೆ ಸೇರಿ ಒಂದಷ್ಟೊತ್ತು TV ನೋಡಿ , ಪುಸ್ತಕ ಓದಿ , ಮಕ್ಕಳಿಗೆ ಚಂದ ಮಾಮ ನ ಕಥೆ ಹೇಳ್ತಾ ಊಟ ಮಾಡೋವ್ನು ಅವನದೇ ಶೈಲಿನಲ್ಲಿ life enjoy ಮಾಡ್ತಾ ಇರ್ತಾನೆ , ಇವನಿಗೆ ಲೈಫ್ ನಲ್ಲಿ ಸಿಗೋ Acknowledgement ಅಂದ್ರೆ ಬದುಕುವ ಹುಮ್ಮಸ್ಸು ..ಅದೇ ಆ ತಲೆ ಮಾಸಿದವನಿಗೆ ಸಿಗೋದು ..30 ವರ್ಷಕ್ಕೆನೆ ಗೂಟ ಕಿತ್ಕೊಂಡು ಹೋಗೋದು , ಬದುಕು ಇದಲ್ಲ ..ಒಳ್ಳೆಯ quality ಬದುಕು ಬಾಳಬೇಕು ..ನಿಜ ಒಂದೇ ದಿನದಲ್ಲಿ ಇಡೀ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಸಾದ್ಯ ಇಲ್ಲ ... ಪ್ರತಿ ದಿನದ resolution ಗಳು , ಹೊಸ ನಿರ್ಧಾರಗಳು ನೂತನ ಬದಲಾವಣೆಯತ್ತ ಕೊಂಡೊಯ್ಯ ಬೇಕು ...ಪ್ರತಿ ದಿನದ ಆಲೋಚನೆಗಳು ಹೊಸತಗಿರಬೇಕು .. ಬದಲಾಗಬೇಕು , ನಮಗೋಸ್ಕರ ಬದಲಾಗಬೇಕು ...

3 comments:

  1. ಸುಖಕ್ಕಾಗಿ ಕಾತರಿಸುವ
    ಕೋಟ್ಯಂತರ ಜನಕ್ಕೆ ಹಣ ನೆಲ
    ಹೊನ್ನು ಬೇಕು.
    ಕೆಲವರಿಗೆ ಪ್ರೀತಿ
    ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
    ಹಿತ್ತಿಲೊಂದರ ಹೂವು
    ಬಡಜೋಗಿಯ ಹಾಡು.


    :-)

    ReplyDelete
  2. ನಿಜ.
    ಅವರವರ ದ್ರುಷ್ಟಿಯಂತೆ ಜಗತ್ತು..!
    ಹಾಗೆಯೆ ಸುಖ, ಸಂತೋಷದ ವ್ಯಾಖ್ಯಾನವೂ ಕೂಡ ಅವರವರ ಸಂಸ್ಕಾರದ ಅನ್ವಯ.
    ಬಾಲ್ಯದಿಂದಲೆ ಸದಭಿರುಚಿಯ ನಂಟು ಮಕ್ಕಳಿಗೆ ಒದಗಿಸುವುದು ಅಗತ್ಯ..

    ReplyDelete
  3. ನಿಜ ! ನೀವೇಳಿದಂತೆ ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸುವುದರಲ್ಲಿ ಸಿಗುವ ಸುಖ ಅನುಭವಿಸಿದವನಿಗೆ ಗೊತ್ತು. ಸತ್ಯಕ್ಕೆ ಹತ್ತಿರವಾದ ಬರಹ !

    ReplyDelete