ಮೊನ್ನೆ ಚರಿತಾಳ ರೆಡ್ ವೈನ್ ರಾದ್ದಾಂತ ಓದಿದ ಮೇಲೆ , ಆರ್ಕುಟ್ ಎಂಬ Social Community ಯಲ್ಲಿ ನನಗಾದ ಒಂದು ಕೆಟ್ಟ ಅನುಭವವನ್ನು ಬರೀ ಬೇಕು ಅನ್ನಿಸ್ತು . ಈ ಲೇಖನ ಸ್ವಲ್ಪ ವೈಯುಕ್ತಿಕ ಅನ್ನಿಸಿದರೂ ಹೇಳಿ ಬಿಡುವ ಒಂದು ತವಕ .. ಸ್ವಲ್ಪ ತಡವಯಿತೇನೋ ಅಂತ ಅನ್ನ್ಸುತ್ತೆ
ರಾತ್ರಿ ಸುಮಾರು 11 ಗಂಟೆಯಾಗಿರಬಹುದು , ಸ್ನೇಹಿತೆ ನಳಿನಿಯ ಫೋನ್ .. " ಸಂತು ಬೇಗ ನಿನ್ ಆರ್ಕುಟ್ ಪ್ರೊಫೈಲ್ ಗೆ ಲಾಗ್ ಆಗು " ಅಂತ , ಈ ಸರೀ ರಾತ್ರಿ ನಲ್ಲಿ ಏನೇ ನಿಂದು ರಗಳೆ ಅಂತ ಕ್ಯಾತೆ ತೆಗೆದೆ . ಅದಕ್ಕವಳು ಇಲ್ಲ ಕಣೋ ನಿನ್ ಪ್ರೊಫೈಲ್ ನಿಂದ ಸಿಕ್ಕಾಪಟ್ಟೆ ಸ್ಕ್ರಾಪ್ ಬರ್ತಾ ಇದ್ದಾವೆ ", ಅವಳ ದ್ವನಿ ಸ್ವಲ್ಪ ನಡುಗುತಿತ್ತು , ಯಾಕೋ ಹೆದರಿದ್ದವಳಂತೆ ಅನ್ನಿಸ್ತಾ ಇತ್ತು . ತಕ್ಷಣ ಸ್ನೇಹಿತನ ಲ್ಯಾಪ್ಟಾಪ್ ಕನೆಕ್ಟ್ ಮಾಡಿ ನೋಡಿದಾಗ ನನಗೆ ಒಂದು ತರ ಅಸಹ್ಯ , ಲ್ಯಾಪ್ಟಾಪ್ ನ್ನು ಕುಕ್ಕಿ ಬಿಡುವಷ್ಟು ಕೋಪ ಬಂದಿತ್ತು . ನಳಿನಿಗೆ ಮತ್ತೆ ಫೋನ್ ಮಾಡ್ತೀನಿ ಅಂತ ಹೇಳಿ ಕಟ್ ಮಾಡಿದೆ . ಇಲ್ಲಿ ನಾನು ಮಾಡಿದ ಎಡವಟ್ಟು ಏನಪ್ಪಾ ಅಂದ್ರೆ , ನನ್ನ ರೂಮ್ ಹತ್ತಿರ ಇರುವ ಒಂದು ಬ್ರೌಸಿಂಗ್ ಸೆಂಟರ್ ನಲ್ಲಿ ಈ ಆರ್ಕುಟ್ ತೆಗೆದು , ಕೊನೆಗೆ ಸರಿಯಾಗಿ ಲಾಗ್ ಔಟ್ ಆಗದೆ ಹೊರ ಬಿದ್ದಿದ್ದೆ . ಇದನ್ನೇ ದುರುಪಯೋಗಪಡಿಸಿಕೊಂಡ ಕೆಲ ಕಿಡಿಗೇಡಿಗಳು ನಳಿನಿಯ ಮೆಸೇಜ್ ಬಾಕ್ಸ್ ನಲ್ಲಿ ತುಂಬ ಅಶ್ಲೀಲವಾದ ಪದಗಳನ್ನು ಬಳಸಿ ಮೆಸೇಜ್ ಮಾಡಲಾಗಿತ್ತು ... ಛೆ !! ಈಗಲೂ ನೆನೆದರೆ ತುಂಬ ಬೇಜಾರ್ ಆಗುತ್ತೆ .. ಎಲ್ಲವೂ ನನ್ನ ಬೀಜವಬ್ದಾರಿಯಿಂದ ಆಗಿದ್ದು ... ತಕ್ಷಣ ನಳಿನಿಗೆ ಫೋನ್ ಮಾಡಿದಾಗ , ಯಾಕೋ ಉತ್ತರ ಬರ್ಲಿಲ್ಲ , ಮನಸ್ಸು ಇನ್ನೂ ಹೆಚ್ಚಾಗಿ ಚದಪಡಿಸೋಕೆ ಶುರುವಾಯಿತು . ಇಲ್ಲ ಇನ್ನು ತಡಿಯೋದಿಕ್ಕೆ ಆಗೋಲ್ಲ ಗಾಡಿ ತಗೊಂಡು ನಳಿನಿ ಮನೆ ಹತ್ತಿರ ಹೊರಡಲು ಸಿದ್ಧನಾದೆ . ಅಷ್ಟರಲ್ಲಿ ನಳಿನಿಯ ಕರೆ ಬಂದು .. ನನಗೆ ಮಾತೆ ಹೊರಡಲಿಲ್ಲ , ಕೊನೆಗ ಗದ್ಗರಿಸಿ " ನಳಿನಿ .. ಗೊತ್ತಿಲ್ಲ ಕಣಮ್ಮ ಹೇಗ್ ಆಯಿತು ಅಂತ ".., ಸ್ನೇಹಿತೆ ಹೇಳಿದ್ದು ಒಂದೇ ಮಾತು " ನಂಗ್ ಗೊತ್ತು ಕಣೋ ..... ಇದು ಯಾರದೋ ಬೇರೆಯವರ ಕೆಲಸ ಅಂತ , ನೀನ್ ಯಾಕೆ ಅಷ್ಟೊಂದು ಬೇಜಾರ್ ಮಾಡ್ಕೊಳ್ತಿಯ" ಒಂದು ಕ್ಷಣ ಕಣ್ಣು ಮುಚ್ಚಿ ತೆಗೆದಾಗ ಗೊತ್ತಿಲ್ಲದೆ ಕಣ್ಣೀರು ಕೆನ್ನೆಗೆ ಇಳಿದಿತ್ತು .
ಇಂದು ನಳಿನಿ ಬದುಕಿಲ್ಲ .. ಯಾವೊದೋ ಒಂದು ದುರ್ಘಟನೆಯಲ್ಲಿ ಸ್ನೇಹಿತೆಯ ಇರುವು ಮರೆಯಾಗಿ ಒಂದು ವರ್ಷಗಳೇ ಕಳೆದು ಹೋಗಿದೆ . ನಾನು ನಳಿನಿ ಬಾಲ್ಯ ಸ್ನೇಹಿತರು , ಒಂದೇ ಕಡೆ ಓದಿದವರು .. ನಳಿನಿಗೆ ನಾರನಳ್ಳಿ ಅಂತ ಅಡ್ಡ ಹೆಸರು ನಾಮಕರಣ ಮಾಡಿದ್ದು ನಾನೇ .. ಸ್ಕೂಲ್ನಲ್ಲಿ ನಾರನಳ್ಳಿ ಹೆಸರು ಸಕತ್ ಹೆಸರು ಮಾಡಿತ್ತು. ಇನ್ನು ಅವಳ ಬಗ್ಗೆ ಹೇಳಲು ಬೇರೆಯೇ ಒಂದು ಲೇಖನ ಬರೀಬೇಕು . ಕೊನೆಗೂ ಗೆಳತಿ ನನಗೆ ಗೆಳೆತನದ ಅರ್ಥ ತಿಳಿಸಿ ಹೋಗಿದ್ದಳು . ನೆನದಾಗ ತುಂಬ ಭಾವುಕನಾಗ್ತಿನಿ ...
ಕೊನೆಗೆ ಆ ನನ್ನ ಆರ್ಕುಟ್ ಪ್ರೊಫೈಲ್ ಅನ್ನು ಡಿಲೀಟ್ ಮಾಡಿ ಹೊಸತೊಂದು ಮಾಡಿದಾಯಿತು . ಇಂದು ಈ social community ಬ್ಲಾಗ್ ಗಳು ನನ್ನ ಕಣ್ಣಿಗೆ ಮಕ್ಕಳು ಆಡುವ ಆಟದ ವಸ್ತುಗಳ ತರ ಕಾಣಿಸುತ್ತೆ . ಆಟಿಕೆಯೊಂದಿಗೆ ಹೆಚ್ಚು ಆಟ ಆಡುವ ಮನಸ್ಸು ಈಗ ನನ್ನಲಿಲ್ಲ .. ಅದಕ್ಕೆ ಈಗ ಈ ಬ್ಲಾಗ್ ಗಳಿಗೆ ಅಂಟಿಕೊಂಡಿದ್ದೇನೆ .
ಸಂತೋಷ್ ಸಾರ್,
ReplyDeleteನಿಮ್ಮ ಗೆಳತಿ ನಳಿನಿ ತೀರಿಹೋದದ್ದು ಬ್ಲಾಗಿನಲ್ಲಿ ಓದಿ ಮನಸ್ಸಿಗೆ ವಿಷಾದವೆನಿಸಿತು. ನಾವು ನಮ್ಮ ಬ್ಲಾಗನ್ನು ಸರಿಯಾಗಿ ಲಾಗೊಟ್ ಮಾಡದಿದ್ದಲ್ಲಿ ಕಿಡಿಗೇಡಿಗಳು ಖಂಡಿತ ದುರುಪಯೋಗಪಡಿಸಿಕೊಳ್ಳುತ್ತಾರೆ. ಇದರ ಬಗ್ಗೆ ಪ್ರತಿಯೊಬ್ಬರೂ ಜಾಗ್ರತೆಯಿಂದಿರಬೇಕು.
ಆಹಾಂ! ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು ಬಂದಿವೆ ಬಿಡುವು ಮಾಡಿಕೊಂಡು ಬನ್ನಿ.
ಸಂತೋಷ್,
ReplyDeleteಆರ್ಕುಟ್ ಮಕ್ಕಳ ಆಟಿಕೆ ಅನ್ನೋ ನಿಮ್ಮ ಮಾತು ನಿಜ.
ಆದ್ರೆ,ನೀವೂ ಸೇರಿದಂತೆ ಕೆಲವು ಒಳ್ಳೆ ಸ್ನೇಹಿತರನ್ನೂ ಒದಗಿಸಿದೆ ಅದು...:-)
ನಿಮ್ಮ ಸ್ನೇಹಿತೆಯ ನೆನಪಿಗೆ ನಮ್ಮ ಕಂಬನಿ.
ಸಂತೋಷ್,
ReplyDeleteನಿಮ್ಮ ಗೆಳತಿ ನಳಿನಿ ನಿಮ್ಮ ಬಗ್ಗೆ ಇಟ್ಟಿದ್ದ ನಂಬಿಕೆಯ ಬಗ್ಗೆ ಸಂತೋಷ ಹಾಗೂ ಅವರು ನೆನಪಾಗಿ ಮಾತ್ರ ಉಳಿಯುವಂತಾಗಿದ್ದಕ್ಕೆ ಖೇದವಾಯಿತು. ಈ ಬ್ಲಾಗಿಗೊಮ್ಮೆ ಭೇಟಿ ಕೊಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.
http://kandenanondhukanasu.blogspot.com/