ಬಾ ಗೆಳತಿ ಹಚ್ಚಿ ಬಿಡುವ ಒಲವ ದೀಪ ...
ಸಾವಿರ ಕಷ್ಟವಿರಲಿ ಒಮ್ಮೆ
ಹಚ್ಚಿ ಬಿಡುವ ಒಲವ ದೀಪ
ನೋಡಿ ಬಿಡುವ ನೀನು ನಾನು
ನಮ್ಮ ನಮ್ಮ ರೂಪವ
ನಿಜ ಗೆಳತಿ , ಗಾಢ ಕತ್ತಲೆಯನ್ನು
ಬೆಳಗುವಾಸೆಯಿಲ್ಲ
ಬೆತ್ತಲೆಯ ಸತ್ಯಗಳನ್ನು
ಹುಡುಕುವಾಸೆಯಿಲ್ಲ
ಹಚ್ಚಿ ಬಿಡುವ ಒಲವ ದೀಪ
ಪ್ರೇಮ ಧ್ಯಾನಕೆ
ಮುಗಿಯದು ನನ್ನ ಒಲವಿನ ತೈಲ
ಆರದು ಈ ಒಲವ ದೀಪ
ಬಾ ಗೆಳತಿ ಹಚ್ಚಿ ಬಿಡುವ ಒಲವ ದೀಪ ...
not bad Santhosh....
ReplyDeleteಮತ್ತೆ ತಡ ಏಕೆ..? ಹಚ್ಚೇ ಬಿಡಿ....:)
ಮತ್ತಷ್ಟು ಕವನ ಬರೀರಿ ಸಂತೋಷ್...
ReplyDeleteಥ್ಯಾಂಕ್ಸ್ ಚರಿತ ... ನಿಮ್ಮಷ್ಟು ಚೆನ್ನಾಗಿ ಕವನ ಬರಿಯೋಕೆ ಬರೋಲ್ಲ !
ReplyDeleteನಿಮ್ಮ ಪದ ಸಂಗ್ರಹ ತುಂಬಾ ಚೆನ್ನಾಗಿದೆ .. ಎಲ್ಲವನ್ನು ತುಂಬಾ ಅಚ್ಚು ಕಟ್ಟಾಗಿ ಹೆಣೆಯುತ್ತಿರ !!
ಸಂತೋಷ್,
ReplyDeleteಕವನ ಚೆನ್ನಾಗಿದೆ. ಸರಳವಾಗಿದ್ದರೂ ಒಲವಿನ ಅರ್ಥ ಕಟ್ಟಿಕೊಡುವಲ್ಲಿ ಸಫಲವಾಗಿದೆ. ಬರೆಯುತ್ತಿರಿ.
ಚೆಂದದ ಕವಿತೆ ಕಣ್ರಿ. ಇಷ್ಟ ಆಯ್ತು.
ReplyDelete@ Shivu and Joman,
ReplyDeleteTumba Thanks...
Andahvagi mudibhandhidae e nina kavitae..oolava deepa acchidaeya gaelaya?
ReplyDelete@ Umesh
ReplyDeleteThanks kano :)