ಅದೊಂದು ಅದ್ಭುತವಾದ ಕಲೆ , ನಿಜವಾದ ನಟನೊಬ್ಬ ಮಾತ್ರ ರಂಗ ಭೂಮಿಯಲ್ಲಿ ಉಳಿಯಬಲ್ಲ . ಅಲ್ಲಿ ದಿನವೂ ಹಬ್ಬದ ವಾತವರಣ ,
ಹೊಟ್ಟೆ ತುಂಬ ಊಟವಿಲ್ಲದಿದ್ದರು ಹೊಟ್ಟೆ ತುಂಬ ನಗು ತುಂಬಿರುತ್ತದೆ .
ನಿಜಕ್ಕೂ ಪ್ರತಿಬಾವಂತ ಕಲಾವಿದರಿರುತ್ತಾರೆ , ಸ್ಟೇಜ್ ಮೇಲೆ ಬಂದಾಗ ಪ್ರೇಕ್ಷಕರು ಅಂಡು ಅಲುಗಾಡದಂತೆ ಕೂರುತ್ತಾರೆ . ಕೆಲವೊಂದು ಕೆಳ ಮಟ್ಟದ ಸಂಭಾಶನೆಗಳಿದ್ದರು ರಂಜನೀಯವಾಗಿರುತ್ತದೆ .
"ಎಲ್ಲಿಯು ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು " ಎಂಬ ಕವಿ ವಾಣಿ ಅವರಿಗೆ ಚೆನ್ನಾಗಿ ಒಪ್ಪುತ್ತದೆ , ಎಲ್ಲಿಯು ನಿಲ್ಲದ ಊರೂರು ತಿರುಗಾಟ ಮನೆಯು ಇಲ್ಲ ಕೊನೆಯು ಇಲ್ಲ . ಅವರು ಒಂದು ಊರಲ್ಲಿ ಹೆಚ್ಚೆಂದರೆ ಆರರಿಂದ ಒಂದು ವರ್ಷದವರೆಗೆ ಮಾತ್ರ ಉಳಿಯಬಲ್ಲರು .
ಒಂದು ದಿನ ಹೌಸ್ ಫುಲ್ ಕಂಡರೆ ಒಂದು ವಾರ ಊಟಕ್ಕೆ ಯೋಚನೆ ಇಲ್ಲ .
ಒಂದು ವೇಳೆ ನಸೀಬು ಮಕಾಡೆ ಮಲ್ಕೊಂಡು ಜೋರಾಗಿ ಮಳೆ ಬಂದು ಒಳಗೆ ನೀರು ತುಂಬಿ ಕೊಂಡರಂತೂ ..ಅವರ ಕಥೆ ಹೇಳ ತೀರದು . ಮೂರೂ ದಿನ ಹೀಗೆ ಜೋರು ಮಳೆ ಬಂದದ್ದೆ ಆದರೆ ನಾಲ್ಕನೆಯ ದಿನಕ್ಕೇ ಕಟ್ಟಿದ್ದ ಕಂಬ , ಇಟ್ಟ ಗೂಟ , ತಕಡು, ಹಾರ್ಮೋನಿಯಮ್ ಪೆಟ್ಟಿ , ತಬಲಾ , ಡ್ರಮ್ ಸೆಟ್ಟು , ಪರದೆ , ಹಗ್ಗ ಎಲ್ಲವನ್ನು ಗಂಟು ಕಟ್ಟಿ ಊರ ಜನಗಳ ಹತ್ತಿರ ಭಿಕ್ಷೆ ಬೀಡಿ ಟೆಂಪೂ ದವನಿಗೆ ಅರ್ದಂಬರ್ದ ಬಾಡಿಗೆ ಕೊಟ್ಟು ಬೇರೆ ಊರಿಗೆ ಪ್ರಯಾಣ . ಮನೆಯು ಇಲ್ಲ ಕೊನೆಯು ಇಲ್ಲ .
ಇನ್ನು ನಟರ ಮತ್ತು ಕೆಲಸಗಾರರ "ಪಗಾರ" ಎಂಬ ಅವರ ಪದ ದೂರದ ಮಾತು . ಇನ್ನು ಅಲ್ಲಿ ಇರುವ ಕೆಲಸಗಾರರು ಅಂದರೆ ರಂಗ ಪಟ್ಟಿ ಮಾಡುವವರು , ನೀರು ತುಂಬುವವರು , ಪರದೆ ಕಟ್ಟುವವರು - ಇವರ ಬದುಕಂತೂ ಯಾವ ಶತ್ರುವಿಗೂ ಬೇಡ .
ಎಲ್ಲಾ ವೃತ್ತಿ ರಂಗ ಭುಮಿಯವರ ಹಣೆ ಬರಹ ಇಷ್ಟೇ ..
ಎಲ್ಲೂ ಕೆಲವೊಂದು ನೆಮ್ಮದಿಯಿಂದ ಇದ್ದರೂ ಇರಬಹುದು . ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಹಣೆ ಪಟ್ಟಿ ಹಚ್ಚಿಕೊಂಡು ಸರ್ಕಾರದ ದುಡ್ಡಿಗಾಗಿ ಹೊಂಚು ಹಾಕುತ್ತಿರುವ , ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ದೊಡ್ಡ ದೊರೆಗಳ Sponsorship ಗಾಗಿ ಅವರ ಮನೆಯ ಗೇಟು ಕಾಯುವ ಹವ್ಯಾಸಿ ರಂಗ ಭೂಮಿಯವರ ಎದುರು ವೃತ್ತಿ ರಂಗ ಭೂಮಿ ಕಲಾವಿದರು ಹೆಚ್ಚು ಸ್ವಾಭಿಮಾನಿಗಲೆನಿಸುವುದಿಲ್ಲವೇ..??
ವೃತ್ತಿ ರಂಗಭೂಮಿಯ ಬಗ್ಗೆ ನಿಮ್ಮ knowledge ಎಷ್ಟರ ಮಟ್ಟಿಗೆ ಇದೆ ಎಂದು ಗೊತ್ತಿಲ್ಲ . ಲೇಖನ ಓದಿದರೆ ಸಾಕಷ್ಟು ಅದರ ಬಗ್ಗೆ ತಿಳಿದ ಹಾಗೆ ಇದೆ . ಅಂದ ಮಾತ್ರಕ್ಕೆ ಹವ್ಯಾಸಿ ರಂಗಭುಮಿಯವರನ್ನು ಹೀಗೆ ತೆಗಳುವುದು ತಪ್ಪು.
ReplyDelete@ Mr/Ms. Anonymous..
ReplyDeleteಅನಾನಿಮಸ್ ಗಳಿಗೆ ಉತ್ತರ ಕೊಡೊ ಆಸಕ್ತಿ ಯಾಗಲಿ ತಾಳ್ಮೆಯಾಗಲಿ ಇಲ್ಲ .. ನಿಮ್ಮ ಹೆಸರು ಹಾಕಿ ಕಾಮೆಂಟ್ ಮಾಡಿ ಕೊಳೋದನ್ನ ಅಬ್ಯಾಸ ಮಾಡ್ಕೊಳಿ .
This comment has been removed by a blog administrator.
ReplyDeleteಸಂತೋಷ್..
ReplyDeleteಎಷ್ತು ಚೆನ್ನಾಗಿ ಬರೆದಿದ್ದೀರಿ...ನನ್ನ ಗೆಳೆಯನ ಅಣ್ಣನ ನಾಟಕ ಕಂಪನಿ ಇದೆ. ನೀವು ಹೇಳಿದ ಮಾತುಗಳನ್ನೇ ಅವರು ಹೇಳಿ ಬೇಸರ ಪಟ್ಟು ಕೊಂಡಿದ್ದರು..
ಬೆಣ್ಣೆ ಹೊಸೆಯುವವರ ಕಾಲ ಇದು ಅನ್ನುತ್ತಾರೆ..
ಚಿಂತನೆ ಹಚ್ಚುವ ಬರಹ..
ಅಭಿನಂದನೆಗಳು...
@ anonymous
ReplyDeleteಬೇಜಾರ್ ಮಾಡ್ಕೋಬೇಡಿ ... ಖರಾಬ್ ಮುಡಲಿದ್ದೆ :) ನಾನ್ ಎಲ್ಲಾ ಹವ್ಯಾಸಿ ರಂಗಬೂಮಿ ಕಲಾವಿದರನ್ನು ಬೈತ ಇಲ್ಲ :)average ella haage irtare
@ Prakash,
ReplyDeleteNija..ನಿಜ ಬೆಣ್ಣೆ ಹೊಸೆಯುವವರ ಕಾಲ
ಧನ್ಯವಾದಗಳು