ಈ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲ , ಆದ್ರೂ ಅದರ ಬಗ್ಗೆ ಗೊತ್ತಿರುವಷ್ಟು ಏನಾದ್ರೂ ಬರೀಬೇಕು ಅನ್ನಿಸ್ತು .
ಲೆಮನ್ ಬ್ರದರ್ಸ್ ಬ್ಯಾಂಕ್ ದಿವಾಳಿಯಾಗಿ ಹೋಗಿದೆ , ಈ ಬ್ಯಾಂಕು ಅಮೇರಿಕಾದ ನಾಲ್ಕನೆ ಅತಿ ದೊಡ್ಡ ಇನ್ವೆಸ್ಟ್ ಮೆಂಟ್ ಬ್ಯಾಂಕು . ೧೯೨೯ ರಲ್ಲಿ ಆದ great depression ನಲ್ಲೂ ಬದುಕುಳಿದಿತ್ತು , ಬರಿ ಮೂರೇ ತಿಂಗಳಲ್ಲಿ ೨೪೦೦ ಕೋಟಿ ಗಳಷ್ಟು ಲಾಭ ಮಾಡಿತ್ತು . ನಮ್ ಬೆಂಗಳೂರಿನ IIM ಪದವಿದರನ್ನು ಕೆಲ್ಸಕ್ಕೆ ತಗೊಂಡು , ವರ್ಷಕ್ಕೆ ಏನಿಲ್ಲ ಅಂದ್ರು ಒಂದುವರೆ ಕೋಟಿಯಷ್ಟು ಸಂಬಳ ಕೊಟ್ಟು ಸಾಕಿತ್ತು . ಈಗ ಕಥೆ ಏನಾಗಿದೆ ಅಂದ್ರೆ ಆ ಎಲ್ಲಾ ಮೇಧಾವಿಗಳು ಬಟ್ಟೆ ಪ್ಯಾಕ್ ಮಾಡ್ಕೊಂಡು ವಾಪಸ್ ಮನೆಗೆ ಬಂದಿದ್ದಾರೆ .
ಅಸಲಿಗೆ ಕಥೆ ಏನಪ್ಪಾ ಅಂದ್ರೆ - ಅಮೆರಿಕದಲ್ಲಿ ಇರುವ finacial institution ಗಳು ಅಲ್ಲಿ ಇರೋ ಜನಗಳಿಗೆ ಯರ್ರಾ ಬಿರ್ರೀ ಸಾಲ ಕೊಡ್ತು . ಆ ಸಾಲಕ್ಕೆ sub-prime ಅಂತ ಹೆಸರು .. ಮಜಾ ಅಂದ್ರೆ ಈ ಸಾಲ ಆದಾರರಹಿತ ಸಾಲ . ಯಾವ documents ಕೇಳೋಲ್ಲ . ಅದೇ ನಮ್ co-operative ಬ್ಯಾಂಕ್ ಲ್ಲಿ ಸಾಲ ಕೇಳಿ ನೋಡಿ bank statement ಇಂದ ಹಿಡಿದು ಶೆಟ್ಟಿ ಅಂಗಡಿ ಚೀಟಿ ಲೆಕ್ಕದವರೆಗೂ ಕೇಳ್ತಾರೆ . ಕೊನೆಗೆ ಸಾಲನು ಕೊಟ್ಟಿ ಆಯಿತು , ಸಿಕ್ಕಪಟ್ಟೆ ಮನೆಗಳು ಕಟ್ಟಿದಾಯಿತು . ಬ್ಯಾಂಕ್ ನವರು ಕೊಟ್ಟ ಸಾಲಗಳಿಗೆ ಯಾವುದೇ ಸ್ಥಿರವಾದ ಬಡ್ಡಿ ದರ ಇರೋದಿಲ್ಲ ಅದನ್ನು ARM (adjustable rate mortgage) ಅಂತಾರೆ . ಅಮೇರಿಕಾದ ರೆಸೆರ್ವ್ ಬ್ಯಾಂಕ್ ಕೊಡುವ ಬಡ್ಡಿ ದರಕ್ಕೆ ಅನುಗುಣವಾಗಿ ಬಡ್ಡಿ ಕಟ್ ಬೇಕು . ಆ ರೆಸೆರ್ವ್ ಬ್ಯಾಂಕ್ ಇದ್ದಿಕಿದಂತೆ ಬಡ್ಡಿ ಜಾಸ್ತಿ ಮಾಡಿ , ಜನ ಮನೆ ಕಳಕೊಂಡು ಕಾರಲ್ಲಿ ವಾಸ ಮಾಡೋ ಹಾಗೆ ಮಾಡ್ತು .

ಆದರೂ ಸಹ ಈ ಬ್ಯಾಂಕುಗಳು ಮತ್ತೆ ಸಲದ ಮೇಲೆ ಸಾಲ ಕೊಡ್ತಾ ಹೋಯಿತು . ಹೇಗೆ ಅಂದ್ರೆ ನಿಮಗೆ ಯಾವುದೇ ಕೆಲಸ, ಆಸ್ತಿ ಇಲ್ದೆ ಇದ್ರೂ ಪರವಾಗಿಲ್ಲ , ಸಾಲ ಕೊಡಲು ನಾವು ಸಿದ್ದ (NINJA - no income, no job or assets), ಹೀಗೆ ಕೊಟ್ಟು ಕೊಟ್ಟು sub-prime ಸಾಲ ೧೦೦ ಕೋಟಿಗೂ ದಾಟಿ ಹೋಗಿತ್ತು . ಅವ್ರು ಪ್ಲಾನ್ ಏನಪ್ಪಾ ಅಂದ್ರೆ real estate ಬೆಲೆ ಯಾವಾಗ್ಲೂ ಜಾಸ್ತಿ ಇದ್ದೆ ಇರುತ್ತೆ ಅಂತ . ಈ ಬ್ಯಾಂಕುಗಳು ಅವೇ ಕೆಲವೊಂದು ಸಲದ documents ಗಳನ್ನೂ ಸೃಷ್ಟಿ ಮಾಡಿ , ಅಲ್ಲಿ ಇರೋ ದಲ್ಲಾಳಿಗಳಿಗೆ ಮಾರಿ ಸೇಫ್ ಆಗೋಕ್ಕೆ ಪ್ರಯತ್ನ ಪಡ್ತು . ಆ ಸೃಷ್ಟಿ ಮಾಡಿದ್ದ documents ಗಳನ್ನು MBS (mortgage based security) ಅಂತ ನಾಮಕರಣ ಮಾಡಿ .. ಆ ದೇಶದಲ್ಲಿ ಇರೋ insurance ಕಂಪನಿ ಹತ್ತಿರ ವಿಮೆ ಬೇರೆ ಮಡ್ಸ್ಕೊಂದ್ರು ... ಆಮೇಲೆ ಈ MBS ಗಳನ್ನ bond ಗಳಾಗಿ ಪರಿವರ್ತಿಸಿ ಪ್ರಪಂಚದ ಎಲ್ಲಾ ಕಡೆ ಮರೋದಕ್ಕೆ ಶುರು ಮಾಡಿದ್ರು . ಇನ್ನೊಂದು ಮಜಾ ಅಂದ್ರೆ ಆ ಬಾಂಡ್ ಗೆ 50 ರುಪಾಯಿ ಇದ್ರೆ ಲೆಮನ್ ಬ್ಯಾಂಕು 4000 ರೂಪಾಯಿಗೆ ಮಾರಿದ್ದರು ಅದನ್ನ CDO (Collaterised Debt Obligations) ಅಂತ ಅರ್ಥವಾಗದ ಹೆಸರು ಕೊಟ್ಟು , ಜನಗಳನ್ನ Confuse ಮಾಡಿದ್ದರು. ಕೊನೆಗೆ ಮನೆಗಳು ಸಿಕ್ಕಾಪಟ್ಟೆ ಆದ ಮೇಲೆ .. Real estate ಮಕಾಡೆ ಮಲಿಕೊಲ್ತು . ಮನೆ ಹರಾಜಿಗೆ ಕುಗುವವರು ಗತಿ ಇಲ್ಲದ ಹಾಗೆ ಆಯಿತು . ಆಗ ಶುರುವಾಯಿತು ನೋಡಿ ಮಾರಿ ಹಬ್ಬ .
ಭಾರತದಲ್ಲಿದ್ದ ವಿದೇಶಿ ಹೂಡಿಕೆದಾರರು ಬಾಗಿಲು ಮುಚ್ಕೊಂಡು ಓಡಿ ಹೋಗೋಕೆ ಶುರು ಮಾಡಿದ್ರು . ತಲೆ ಮಾಸಿದ ವಿತ್ತ ಮಂತ್ರಿ ಚಿದಂಬರಂ .. ನಮಗೇನು ಆಗಿಲ್ಲ ನಾವು ಭಾರಿ strongu ಅಂತ statement ಕೊಟ್ರು. ಎಲ್ಲಾ ಕಡೆ Globalization ಅದು ಇದು ಅಂತ ಇರೋ ನಾವು ಅಮೆರಿಕಕ್ಕೆ ಹೊಡ್ತ ಬಿದ್ದಿದೆ ಅಂದ್ರೆ , ನಮ್ ದೇಶಕ್ಕೂ ತೊಂದ್ರೆ ಇದೆ ಅಂತ ಚಿದಂಬರಂ ಗೆ ಆಮೇಲೆ flash ಆಯಿತಂತೆ . ಊರೆಲ್ಲ ಕೊಳ್ಳೆ ಹೊಡೆದ ಮೇಲೆ ನಮ್ ಚಿದಂಬರಂ ಅಂಬಾನಿ ಮನೆಗೆ ಹೋಗಿ ಬಾಗಿಲು ಬದ್ರ ಮಾಡಿ ಬಂದರಂತೆ . ಇನ್ನು ನಮ್ ದೇವೇ ಗೌಡ್ರು Global economic crisis ಗೆ ಅಮೇರಿಕಾದ ಪರವಾಗಿ ಚಂಡೀ ಹೋಮ ಮಾಡಿಸ್ತರಂತೆ... ಅದು ಅಲ್ದೇನೆ ಆತ್ಮ ಚರಿತ್ರೆ ಬರೀತೀನಿ ಅಂತ ಕುಂತವ್ರೆ ..ಬಚ್ಚೆ ಗೌಡ್ರು ನಾನು ಕಮ್ಮಿ ಇಲ್ಲ ಕಲ ನಾನು ಬರಿತಿವ್ನಿ ....!
ಐಯ್ಯೋ ಮ್ಯಾಟ್ರು ಎಲ್ಲೆಲ್ಲೊ ಹೊಂಟ್ ಹೋಯಿತು....
ಈಗ ಆರ್ಥಿಕ ಭಿಕ್ಕಟ್ಟಿಗೆ ಪರಿಹಾರ ಅಂದ್ರೆ .. ಯಾವ ಕಂಪೆನಿಗಳು ಕೆಲಸಗರನ್ನು ತೇಗಿ ಬಾರ್ದು.. ಅಲ್ಲಿ ಇಲ್ಲಿ ಬಚಿಟ್ಟಿರೋ ದುಡ್ಡನ್ನು ತೆಗಿ ಬೇಕು . ಜನಗಳಿಗೆ ಖರ್ಚು ಮಾಡಲು ಕೊಡ ಬೇಕು .. ಖರ್ಚ ಆದ್ರೆ ತಾನೆ ನಮ್ ಫ್ಯಾಕ್ಟರಿ ಗಳು production ಮಾಡೋಕೆ ಸಾದ್ಯ . ಶ್ರೀಮಂತರಿಗೆ ಹೆಚ್ಚಿನ ತೆರಿಗೆ ಹಾಕಿ , ಅವರಿಗಿರುವ ರಿಯಾಯಿತಿ ಗಳನ್ನ ನಿಲ್ಲಿಸಬೇಕು . ಅಗತ್ಯ ಇರೋ ವಸ್ತುಗಳ ಬೆಲೆ ಇಳಿಸಬೇಕು .. ಮುಖ್ಯವಾಗಿ UPA ಸರ್ಕಾರ ಶ್ರೀಮಂತರಿಗೆ ಬಕೇಟು ಹಿಡಿಯೋದನ್ನ ಬಿಡಬೇಕು . ಈಗಿರೋ ಗೃಹ ಸಚಿವ ಚಿದಂಬರಂ ಸ್ವಂತ ಗೃಹಗಳನ್ನು ಕಟ್ಟಿಸೋದನ್ನ ಬಿಡ ಬೇಕು (ಛೆ ! ನನ್ ಕೊನೆ ಹೆಸರು ಬೇರೆ ಇಟ್ಟಿಕೊಂಡು ಬಿಟ್ಟಿದಾರೆ .. ಇಲ್ಲ ಅಂದಿದ್ದರೆ!! )
6 comments:
ಸಂತೋಷ್...
ನಮ್ಮ ದೇಶಕ್ಕೆ ಈ ಬಿಕ್ಕಟ್ಟನ್ನು ಎದುರಿಸುವ ಸಾಮರ್ಥ್ಯ ಖಂಡಿತಾ ಇದೆ... ತಾತ್ಕಾಲಿಕ ಹಿನ್ನಡೆ ಸ್ವಲ್ಪ ದಿನ ನಡೆಯಬಹುದು.
ಇನ್ನು ನಮ್ಮ ದೇಶದ ರಿಯಲ್ ಎಸ್ಟೇಟ್ ಕೂಡ ಚೆನ್ನಾಗಿಯೇ ಇರುತ್ತದೆ... ೩೫% ಜನರಿಗೆ ಮಾತ್ರ ಸ್ವಂತ ಮನೆ ಇದೆಯಂತೆ..ಅವರಿಗೆಲ್ಲ ಮನೆ ಆದಂತೂ ನನ್ನಂತವರು ಸುಮ್ಮನಿರಬೇಕಲ್ಲ ..!!
ನಿಮ್ಮ ಲೇಖನ ಚೆನ್ನಾಗಿದೆ..
ಸಮಯೋಚಿತವೂ ಆಗಿದೆ...
ಧನ್ಯವಾದಗಳು..
ಒಳ್ಳೇ ಇನ್ಫೋ.
ಥ್ಯಾಂಕ್ಸು.
ಸಂತೋಷ್,
ಒಳ್ಳೆಯ ಲೇಖನ. ಆರ್ಥಿಕ ಬಿಕ್ಕಟ್ಟನ್ನು ಚೆನ್ನಾಗಿ ವಿವರಿಸಿದ್ದೀರಿ.... [ ನಾನು ಈ ಮಾತನ್ನು ಹೇಳವುದರಲ್ಲಿ ಸ್ವಾರ್ಥವಿದೆ]ಈ ಅರ್ಥಿಕ ಬಿಕ್ಕಟ್ಟು ಬಂದಿದ್ದು ಒಳ್ಳೆಯದೇ ಆಯಿತೆನೆಸುತ್ತದೆ. ಆಗ ಕೇವಲ IT, BT, IIM, ಇನ್ನಿತರರಿಂದಾಗಿ ನಮ್ಮಂಥ ವಾಸ ಮಾಡುವ ಮನೆಗಳ ಬಾಡಿಗೆಗಳೆಲ್ಲಾ ಹೆಚ್ಚಾಗಿ ನಗರ ಜೀವನವೇ ಕಷ್ಟಕರವಾಗಿತ್ತು. ನಮ್ಮಂಥ ಕೆಳಮಟ್ಟದ ಉದ್ಯೋಗಗಳಿಗೆ[ಹಾಲು, ದಿನಪತ್ರಿಕೆ,ವ್ಯವಸಾಯ ಇತ್ಯಾದಿ] ಕೆಲಸಗಳಿಗೆ ಲೇಬರ್ ತೊಂದರೆ ಇತ್ತು. ಕಾರಣ ಅಂಥ ಕೆಲಸ ಮಾಡಲು ಯಾರು ಬರುತ್ತಿರಲಿಲ್ಲ. ಈಗ ಹಣದ ಮುಗ್ಗಟ್ಟಿನಿಂದಾಗಿ ಕೆಲಸವಿಲ್ಲದ ಪರಿಸ್ಥಿತಿ ಬಂದಿದೆ. ಕೊನೆಗೆ ವಿಧಿಯಿಲ್ಲದೆ ಜನರೆಲ್ಲಾ ಹಳ್ಳಿಗೆ ಹೋಗಿ ವ್ಯ್ವವಸಾಯ ಮಾಡಲೇ ಬೇಕಾದ ಪರಿಸ್ಥಿತಿ ಬರಬಹುದು. ನಮ್ಮ ಕೆಲಸಗಳಿಗೆ ಧಾರಳವಾಗಿ ಕೆಲಸಗಾರರು ಸಿಗಬಹುದು ಅನ್ನಿಸುತ್ತದೆ. ಇದರಿಂದ ವಲಸೆ ತಪ್ಪಿ ಹಳ್ಳಿಗಳ ಜೊತೆ ನಗರಗಳು ನೆಮ್ಮದಿಯಿಂದ ಉಸಿರಾಡಬಹುದು ಅನ್ನಿಸುತ್ತದೆ. ಇದು ನನ್ನ ಅಭಿಪ್ರಾಯ ನೀವೇನಂತೀರಿ ?
ಶಿವೂ ಅವರೇ ..Globalization ಆದಗಿಂದ ಶ್ರಿಮಂತನಲ್ಲಿದ್ದ ಹಣ ಮುರು ಪಟ್ಟು ಜಾಸ್ತಿ ಆಗಿದೆ ಹಾಗೆ ಕಾರ್ಮಿಕ ವರ್ಗದವರು ಕುಸಿಯುತ್ತ ಹೋಗಿದ್ದಾರೆ .. ಕಾರ್ಲ್ ಮಾರ್ಕ್ಸ್ ತೋರಿಸಿ ಕೊಟ್ಟಂತೆ ಲಾಭವೆನ್ನುವುದು ಕಾರ್ಮಿಕನಿಗೆ ಪಾವತಿಸದೇ ಉಳಿದು ಕೊಂಡ ಕೂಲಿ . ಈಗ ಆಗಿರುವ ಮುಗ್ಗಟ್ಟು ಈ ಬಂಡವಾಳಿಗಳ ಹಣ ಶೇಕರನೆಯಿಂದಾಗಿ..ಮನುಷ್ಯನಿಗೆ ಊಟ ಮಾಡಲು ಸಹ ಹಣ ಇಲ್ಲದಿದ್ದಾಗ .. ರೈತ ಎಷ್ಟೇ ಬೆಳೆ ಬೆಳೆದರು ಪ್ರಯೋಜನವೇನು ?
@Prakash sir..
ಖಂಡಿತ..ನಿಮ್ಮ ಮಾತು ನಿಜ .. ನಮ್ಮ ದೇಶ ಇದರಿಂದ ಹೊರ ಬರುತ್ತೆ .
Ninna end hesaru chidambaram anta ildidre enu anta barittidde. Do Pakkada mane le yaaradru dum andre namgu eno kalkonda age agutte. ange ivaga america nodi namgu bhaya agide adre namma maneli yaru dum annodilla anta tilko.
effect tatkalika not permanent!
What U Say?
Post a Comment