ಪದಬಂಧ ಆಟದಲ್ಲಿ ಪೆನ್ನಿನ ತುದಿಯಲ್ಲಿ
ಸಿಕ್ಕಿ ಹೊರ ಬರಲಾರದೆ ಒದ್ದಾಡುತ್ತಿರುವ
ಪದದಲ್ಲಿ ನೀನು ಇರುವೆಯೆಂದು ತಿಳಿದು
ಮತ್ತಷ್ಟೂ ಗೋಜಲು ಸಂಕಷ್ಟಕ್ಕೆ ಸಿಲುಕಿ
ನಿನ್ನ ಆಚೀಚಿನ ವಿನ್ಯಾಸಕ್ಕೆ
ತಪ್ಪು ಹೊಂದಿಕೆಯಾದೀತೆಂಬ ಭಯದಲ್ಲಿ
ಪೆನ್ನಿನ ಮೊನೆಯಲ್ಲಿಯೇ ಹೊರಬರಲಾರದೆ
ಮರುಹೊಂದಾಣಿಕೆ ಮಾಡುವ ಹವಣಿಕೆಯಲ್ಲಿ
ಕಾದು ಹೊಂಚು ಹಾಕುತ್ತಿರುವ ಪದಗಳೆಷ್ಟೋ !!
____________________________________________
ಲಲನಾನಾದ
ಬ್ರಿಗೆಡ್ ರೋಡಿನಲ್ಲಿ
ಸಣ್ಣ ಸಣ್ಣ ಸ್ಕರ್ಟ್ ತೊಟ್ಟ
ಲಲನೆಯರ ಲಲನಾನಾದ
ಪೋಲಿ ಮನಸಿಗೆ ಕೊಂಚ
ಆಹ್ಲಾದತೆ ಕೊಟ್ಟಿದ್ದೇನೂ ನಿಜವೆಂದು
ಹೆಂಡತಿ ಮುಂದೆ ಒಪ್ಪಿಕೊಂಡ ಮೇಲೆ
ಮೊದಲು ಈ ಆಫೀಸ್ ಬಿಡು
ಇಲ್ಲ root change ಮಾಡೆಂದು
ಕೂತಿದ್ದಾಳೆ..!!
sir kavte odutta oudtta khushisuttade,,,,, munduvaresi....
ReplyDeleteಮೊದಲನೆಯದು ಸೂಪರ್...
ReplyDeleteಒ೦ದೇ ಮಾತಿನಲ್ಲಿ ಹೇಳಬೇಕ೦ದರೆ, ನಿಮ್ಮೆಲ್ಲಾ ಬರಹದ ಭಾಷೆ ಸರಳ, ಸು೦ದರ.
ReplyDelete