Tuesday, November 17, 2009

Sitting On A Patch Of Grass

Sitting On A Patch Of Grass 


Come, sit awhile, On this patch of grass, 
This corner of the earth, That is ours alone, 
Till we go our separate ways. 
 Let me rest in your arms, In my mouth a blade of grass, 
Your hair a curtain Sheltering me from the world, 
Your fingers easing the frowns That burrow deeper in my forehead With each passing day. 

Let us not remember, The lengthening shadows in my father's face, 
My mother's pinched and wrinkled skin, 
The worries that like an insidious worm Are eroding their life away, 
My poetry collection that I sold To apply for the last job inteview. 
 Let us also try and forget That your father no longer speaks to you, 
Your sister looks at you with accusing eyes, 
Your mother called you a whore last night, That you are now a stranger in your home, 
Gray strands in your hair no longer a rarity, 
That you will be thirty in a month's time. 
 There will be time enough to remember, 
Once evening dies and we part our ways, 
Instead, let us, for now, 
Look into each other's eyes and be content That the grass below is green still, 
The sky above still daylight blue, 
That the love that I see in your eyes,
 And the dreams that you see in mine, Are not an illusion just yet.

-Santhosh 




 Photo: Nejro

Friday, October 30, 2009

ಅಚ್ಚರಸಿಗೆ ..!

ಬಾ ಗೆಳತಿ..
ಮಳೆ ಹನಿಯಲಿ
ಅಚ್ಚ- ಅಡವಿಯಲಿ
ನನ್ನ ಅಚ್ಚರಸಿ
ನಿನಗೆ ನನ್ನುಸಿರನು
ಬೆಚ್ಚಗೆ ಆಚ್ಛಾದಿಸಿ
ಒಲವ-ದೀಪ ಹಚ್ಚಿಟ್ಟು
ಜಗದ ಎಲ್ಲ
ಸಂಚಿಗೆ ಕಿಚ್ಚಿಟ್ಟು
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ

Monday, October 26, 2009

ಕುಂಚ ಹಿಡಿದು ನಿಂತವಳು ...!!


ಇದು ನನ್ನ ಭಾವಕ್ಕೆ ಬೆಕಾಗಿತ್ತೆನೋ.. ಸುಮಾರು ವರ್ಷಗಳ ಹಿಂದೆ ಇದ್ದ ಪರಿಚಯ ಈಗ ಹೀಗೊಂದು ಹೊಸ ಅರ್ಥಕ್ಕೆ ಗಂಟು ಬೀಳುತ್ತೆ ಅಂತ ತಿಳಿದಿರಲಿಲ್ಲ . ನನ್ನೆಲ್ಲ ಆರ್ಭಟ, ಸಿಟ್ಟು-ಸೆಡವು, ಎಲ್ಲವನ್ನು ಬದಿಗೊತ್ತಿ ಒರೋಗೋ ಹೆಗಲು ಬೇಕೆನಿಸಿದ್ದು ನನ್ನ ಅಂತರಾಳಕ್ಕೆ ಬೇಕಾಗಿತ್ತು.ನೀನು ನನ್ನವಳು ಎಂಬ ಭಾವಕ್ಕಿಂತ , ನಾನು ನಿನ್ನವನು, ನನ್ನದೆಲ್ಲವೂ ನಿಂದೆ ಎಂಬ ಒಂದು ಪರಿಪಕ್ವತೆಯ ಪ್ರಯತ್ನ.

ಮಾಸಲಾದ ಬಣ್ಣಗಳನ್ನು ತೆಗೆದು, ಬಣ್ಣ ಬಳಿದು ಕುಂಚ ಹಿಡಿದು "ಚಿತ್ರ" ಬಿಡಿಸುವ ಹವಣಿಕೆಯಲ್ಲಿ ನಿಂತಿದ್ದಾಳೆ. ಯಾವುದೇ ಪ್ರಶ್ನೆಗಳ ಸರಮಾಲೆ ಇಲ್ಲದೆ ಎಲ್ಲವನ್ನೂ ತಿದ್ದಿ-ತೀಡಿ ತಾನೇ ಉತ್ತರವನ್ನು ಸೂಚಿಸುವ ಪ್ರಶ್ನೆಯಾಗಿಬಿಟ್ಟಿದ್ದಾಳೆ. ತನ್ನೆಲ್ಲ ಚಾತುರ್ಯ , ಚಾಕಚಕ್ಯಗಳನ್ನು ಒಟ್ಟುಗೂಡಿಸಿ ಎಲ್ಲವನ್ನು ಸದ್ದಿಲ್ಲದೆ ಆವಾಹಿಸಿಕೊಂಡುಬಿಟ್ಟಿದ್ದಾಳೆ. ಮತ್ತೆ ಇವೆಲ್ಲವೂ ನನ್ನ ಅಂತರಾಳಕ್ಕೆ ಬೇಕಾಗಿತ್ತು .

ಬಹು ದೂರಕೆ ತೇಲಿಬಿಟ್ಟ ಎಷ್ಟೋ ಭಾವಗಳನ್ನು ಎಲ್ಲಿಂದಲೂ ಹುಡುಕಿ ತಂದು ಎದುರಿಗೆ ಹರಡಿದ್ದಾಳೆ ... !!


Photo: Balee

Tuesday, October 20, 2009

Haunting Memories !



Memories are swmming against tide,
memory here and a memory there
Shattered & battered everywhere

All submerged in nostalgia of melancholy.
Memories, the permanent invaders,
still deferred successors,
reinforcers'
punishers.



-Santhosh Chidambar

Learn to Sin


Let us learn to sin,
Nothing is forbidden..

Let us break unwritten laws,
All are confounded hooplas.

Death is no more dark shadow,
Let's not reduce it to shallow.

Let us learn to sin,
Nothing is forbidden..


-Santhosh Chidambar

Sunday, October 18, 2009

At Heart..

Let us not remember
the last straw of our days..

I've set my heart
I took from
your words of encouragment

I am in heart of hearts
I am at heart...
heart in the right place

I am ready to heart to heart
I can't get a word edgeways
I am up against the wall in all ways

Still days are deceiving, weaving,
Some are on the way
And this is not a poem anyway

-Santhosh Chidambar

Friday, June 19, 2009

ನೀನಿಲ್ಲದೆ ....

ನೀನು ಮೊದಲು
ನಕ್ಕ ದಿನ
ನಾ ಮೌನಿಯಾದೆ
ಬಾಳ ತುಂಬಾ
ಎಲ್ಲ ಮರೆತು
ನಿನ್ನ ಧ್ಯಾನಿಯಾದೆ

ನಿನ್ನ ನಗುವಿರದ
ನನ್ನ ಊರಿನಲಿ
ಹಕ್ಕಿ ಹಾಡಲಿಲ್ಲ
ನಿನ್ನ ಇರುವಿರದ
ನನ್ನ ತೋಟದಲ್ಲಿ
ಹೂಗಳರಲಿಲ್ಲ

ನನ್ನ ಮನದಲಿ
ನಿನ್ನ ಹೆಸರಿಟ್ಟು
ನನ್ನ ಉಸಿರ ಬೆರೆಸಿ
ಎದೆಯಲಿ ಹಸಿರ ಬೆಳಸಿ
ಹರಸಿ ಹೋದ ಚೈತ್ರ
ಮತ್ತೆ ಮರಳಲಿಲ್ಲ

ನಿನ್ನ ನೋಡುವ
ನಲಿವಿನಲಿ ಮರೆತವು
ಬಾಳಿನ ನಲಿವುಗಳು
ಸೇರುವ ಸಾಹಸದಲ್ಲಿ
ಕಂಡವು ನನ್ನ
ಬಾಳಿನ ಗೆಲುವುಗಳು


Photo: Nic Temby

Thursday, June 18, 2009

ನಿರೀಕ್ಷೆ ...


ದೂರದಲ್ಲೆಲ್ಲೋ ಮೋಡದಡಿಯಲಿ
ಯಾರೋ ಹಾಡುವ ಸವಿ ಹಾಡು
ದೇಹ ಮನಸ್ಸು ಭಾವಗಳೆಲ್ಲವು
ಚುಕ್ಕಿ ಚಂದ್ರಮರ ನಾಡು


ಮನದ ಒಳ ಹೊರಗೂ
ಯಾರೋ ಹಚ್ಚಿಟ್ಟ ದೀಪಗಳು
ಮುಸುಕು ಮುಸುಕಾಗಿ ಕಂಡರೂ ಕಾಣದ
ಅಸ್ಪಷ್ಟ ರೂಪಗಳು


ಈಜಲು ಬಾರದ ಭಾವಗಳನು
ಮುಳುಗಿಸೋ ಬಾವಿಗಳು
ಅಲ್ಲಲ್ಲಿ ಹಚ್ಚಿಟ್ಟು ಹೋದ ದೀಪಗಳು
ನೆಮ್ಮದಿ ತಂದು ಕೊಡುವ ನಾವಿಗಳು



Photo: Rexguo

Wednesday, February 18, 2009

ಲೊಟ್ಟೆ-ಲೋಸ್ಕು ಪುರಾಣ


ಸ್ನೇಹಿತರ ಹತ್ತಿರ ಲೊಟ್ಟೆ-ಲೋಸ್ಕು ಪುರಾಣ ಮಾತಾಡ್ತಾ ಇರ್ಬೇಕಾದ್ರೆ ಮನುಷ್ಯರೆಲ್ಲಾ ಅಮೀಬಾಗಳಂತೆ Reproduction ಮಾಡೋಹಾಗಿದ್ದಿದ್ರೆ ಹೇಗ್ ಇರ್ತಿತ್ತು ಅನ್ನೂ ವಿಷಯ ಪ್ರಸ್ತಾಪ ಆಗಿತ್ತು , ಒಂದು ವೇಳೆ ಮನುಷ್ಯರೆಲ್ಲಾ ಅಮೀಬಾ ತರ ಆಗೊಗಿದ್ರೆ ಕವಿತೆಗಳು, ಚಿತ್ರಗಳು, ಬಣ್ಣಗಳು ಯಾವುದು ಹುಟ್ಟುತ್ತಿರಲಿಲ್ಲವೇನೋ, ಪ್ರಣಯಕ್ಕೂ ಮತ್ತು ಪ್ರಳಯಕ್ಕೂ ಅಂತಹ ವ್ಯತ್ಯಾಸ ಗೊತ್ತಾಗ್ತಾ ಇರ್ಲಿಲ್ಲ ! . ಆದ್ರೆ ನೆನಪುಗಳನ್ನು ಅಮೀಬಾಕ್ಕೆ ಹೋಲಿಸಬಹುದು, ಒಂದರ ಹಿಂದೆ ಒಂದು ಬಿಚ್ಚಿಕೊಳ್ತಾ ಹೋಗುತ್ತೆ , ಕೆಲವೊಂದು ಬೇಡವಾದ ನೆನಪುಗಳ ಮೇಲೆ Attempt to Murder ಕೇಸ್ ಹಾಕಿ ಗಲ್ಲಿಗೆ ಹಾಕೋಣ ಅಂದ್ರೆ ಹೇಗೋ ಜಾಮೀನಿನ ಮೇಲೆ ಹೊರೆಗೆ ಬಂದು ಮತ್ತೆ ಕಾಡ್ತಾವೆ !

ಬೇಡ ಕಣ್ಲಾ ಇಷ್ಟೊಂದು complex ಆಗ್ ಬೇಡ ಅಂತ ಸ್ನೇಹಿತನ ಕಾಳಜಿ ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಶಾಪ್ಪಿಂಗ್ ಮಾಲ್ ಗಳಲ್ಲಿ ಕಳೆದು ಹೋಗೋಕೆ ಇಷ್ಟ ಇಲ್ಲ , ಅಜ್ಞಾತದ ಕಡೆಗೆ ಒಂದು ನೆಗೆತ ಬೇಕು ಅನ್ಸುತ್ತೆ, a perfect unfamiliar. ಒಂದು ಚೂರು ಪರಿಚಯವಿಲ್ಲದ್ದನ್ನು ಕಾಣದ ಊರಿಗೆ ಹೋಗಿ ಗೊತ್ತಿಲ್ಲದನ್ನು ಹುಡುಕುವ ಆಸೆ ಮರೀಚಿಕೆ ಆಗೋ ಭಯ ಕಾಡಿದಾಗೆಲ್ಲ ಕವಿತೆ, ಹಾಡು, ಡಾರ್ಕ್ ರಮ್ ಯಾವುದು ರುಚಿಸೋಲ್ಲ. ಪ್ರತೀ ನಿಮಿಷವೂ ಗಂಟೆಗಳಷ್ಟು ಕೆಳೆದ ಅನುಭವ (ಥೇಟ್ ಗಾಂಜಾ ಹೊಡೆದಂತೆ). ಬಹುಶಃ ಇದು ಮನಸ್ಸಿನ ಒಂದು ಭಾವದ ಉತ್ಕಟತೆ ಆಗಿರಲಿಕ್ಕೆ ಮಾತ್ರ ಸಾಧ್ಯವೇನೋ .

ಕೊನೆಗೆ ನಮ್ಮೆಲ್ಲಾ ತೀವ್ರ ತರಹದ ಭಾವನೆಗಳನ್ನು ಕಲ್ಪಿಸಿಕೊಳ್ಳುವಂತಹ intensity ಮನಸ್ಸಿಗಿದ್ದರೂ ಎಲ್ಲವೋ ನಮ್ಮ ಅಭಿವ್ಯತಿತ್ವಕ್ಕೆ ಮತ್ತು ಮಾನಸಿಕ ಪರಾತಂತ್ರ್ಯಕ್ಕೆ ಬಿಟ್ಟಿದ್ದು. ಪರಾತಂತ್ರ್ಯ ಭಾವವಿರುವುದು ಮನಸಿನ್ನಲ್ಲೇ ಹೊರತು ದೇಹದಲಲ್ಲವಲ್ಲ. ಕಾಮಾಟಿಪುರದ ಬೀದಿಗಳಲ್ಲಿ ನಿರೋದ್ ಪ್ಯಾಕೆಟ್ ಮಾರುವ ಪುಟ್ಟ ಬಾಲಕನನ್ನು ಕಂಡಾಗ ಫೆಮಿನಿಸಂನ ತತ್ವಗಳು ಊದಿ ಹಾರಲು ಬಿಟ್ಟ ಬಲೂನ್ , ಬಹುಶಃ ಅದು ಪರಾತಂತ್ರ್ಯದ ಇನ್ನೊಂದು phase ಇರಬಹುದೇನೋ. ಲೊಟ್ಟೆ-ಲೋಸ್ಕು ಪುರಾಣಗಳು, ಫೆಮಿನಿಸಂ ತತ್ವಗಳು, ದೊಡ್ಡ ದೊಡ್ಡ ಆಚಾರ್ಯರ ಸಿದ್ದಾಂತಗಳು, ವೈಜ್ಞಾನಿಕ ಥಿಯರಿಗಳು, ರಾತ್ರಿ ದಂಧೆಗಳ ಮೇಲೆ ನಿಂತ ಪಟ್ಟಣಗಳ ಹಗಲುಗಳು ನಮ್ಮ ನಮ್ಮ ಮನೆಯ ಉಪ್ಪಿನ ಋಣದಿಂದ ಮುಕ್ತವಾಗಿರಲಿಕ್ಕೆ ಸಾದ್ಯನೇ ಇಲ್ಲವೇನೋ.


Optical Illusion Image By - Ava7

Monday, February 9, 2009

ಚಿತ್ರ

ಬಿತ್ತಿ ಇಲ್ಲದೆ
ಬರೆದ ಚಿತ್ರಗಳನ್ನು
ನಿನ್ನಲ್ಲಿ ಹರಡಿ
ಸಾವಿರ ಕನಸುಗಳಿಗೆ
ಮಾರಿಕೊಳ್ಳೋ ಆಸೆ
ಹೆಸರಿಲ್ಲದ ಬಣ್ಣಗಳನು
ರಾಚಿ ಎರಚಾಡಿ
ಇಲ್ಲಸಲ್ಲದ ನೆಪವೊಡ್ಡಿ
ನೀರೆರಚಿ ಮತ್ತೊಮ್ಮೆ
ತಿದ್ದಿತೀಡಿ ಮತ್ತೊಂದಷ್ಟು
ಕನಸುಗಳ ಹವಣಿಕೆಯಲ್ಲಿ
ಕಾದುಕೂತು ಬರೆದ
ಚಿತ್ರಗಳಿಗೆ ಬೆಲೆ ಬರದೆ
ಎಲ್ಲವನ್ನು ಕಟ್ಟಿಟ್ಟಿ
ಒಲ್ಲದ ಕನಸುಗಳಿಗೆ
ತೂರದ ತೂಕಕೆ ಹಾಕಿ
ಸಿಕ್ಕಷ್ಟು ಬಾಚಿ-ಬಳಿದು
ಬಾರದ ಬಣ್ಣಗಳಿಗೆ
ಕುಂಚ ಹಿಡಿದು
ಹೊಂಚು ಹಾಕಿ
ಮತ್ತಷ್ಟು ಬರೆದ
ಚಿತ್ರಗಳನು ನಿನ್ನಲ್ಲಿ
ಹರಡಿ ಸಾವಿರ
ಕನಸುಗಳಿಗೆ ಮಾರುವಾಸೆ



Photoshop Smoke Image: Santhosh Chidambar

Friday, January 2, 2009

ಕಿವಿ ಮಾತು / ಅಳಿಸು

ಗೆಳೆತಿ ನಿನಗೊಂದು ಕಿವಿ ಮಾತು ..

ಇತಿಹಾಸವೆನೇನೂ ಹೇಳುತ್ತಿದೆ
ಕೇಳಿಸಿಕೂ ಸುಮ್ಮನೆ
ಯಾರದೂ ಕೂಗುಗಳು ಕೇಳಿಸಿದರೆನಂತೆ
ನೆಮ್ಮದಿಯ ನಾಳೆಗಳು ನಮ್ಮವೇ

ಅಪ್ಪ ಬೈಯುವರೆಂದು ಹೆದರಿ ಕೂರದಿರು
ಮಾವ ಎನ್ನುವ ಸಲಿಗೆ ನನಗೂ ಇದೆ ಗೆಳತಿ
ತಪ್ಪು ಎಂದು ಅತ್ತೆ ಬೈದರೆ
ಅತ್ತು ಬಿಡು, ಕ್ಷಮಿಸಲಾರದ ತಪ್ಪು ಯಾವುದು ಇಲ್ಲ

ಬೇರಾವ ಮಾತುಗಳು ಕೇಳಿಸದಿರಲಿ
ನನ್ನೆದೆಯ ಬಡಿತದ ಹೊರತು
ಮನ ಮುತ್ತಿದಾ ನಲ್ಲೆ ಬಂದು ಮನೆ ತಟ್ಟಿದರೆ
ಬಾಳಲು ಬಹುದು ಜೊತೆಯಲಿ ಬೆರೆತು


********************************************************

ನಾನೇ ಬರೆದು ನಾನೇ ಅಳಿಸಿದೆ
ಗೀಚಿದ ಗೆರೆಗಳಿಗೆ ಭಾವ ಅವಿತಿದೆ

ಭಾವ ತುಂಬಿ ಬರೆದ ಸಾಲು
ಹೃದಯ ತುಂಬಿ ಹರಿದ ಸಾಲು

ಬದಲಾಯಿಸಿ ಬರೆಯ ಬೇಕೆಂದನಿಸಲಿಲ್ಲ
ಅಳಿಸಿದಲ್ಲೇ ಮತ್ತೇನನು ಬರೆಯಲಾಗಲಿಲ್ಲ

ವ್ಯರ್ಥವಾದ ಸಾಲೊಂದು
ಇರಬಾರದಿತ್ತು
ಅಳಿಸೋ ಮುಂಚೆ ಅರ್ಥ
ಬರಬೇಕಿತ್ತು .....