ಬೆಂಗಳೂರಿನ ಜನಕ್ಕೆ ಟ್ರಾಫಿಕ್ ಜಾಮ್ ಏನು ಹೊಸದಲ್ಲ , ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಅದರ ಕಹಿ ಅನುಭವ ಆಗೇ ಆಗಿರುತ್ತೆ , ಆದ್ರೆ ಮಾತ್ರ ಬೆಂಗಳೂರಿನಲ್ಲಿ ಇದ್ದಿದ್ದಕ್ಕೆ ಮರ್ಯಾದೆ . "ಟ್ರಾಫಿಕ್ ಜಾಮ್ " ಅನ್ನೋ ಪದ ಕೆಲವೊಮ್ಮೆ ತುಂಬ ಸಹಾಯ ಮಾಡುತ್ತೆ ಕಂಡ್ರಿ . ನಮ್ ಆಫೀಸ್ ಹುಡ್ಗನ್ನ ಯಾವೊದೋ ಕೆಲಸದ ಮೇಲೆ ಹೊರಗೆ ಕಳಿಸಿ .. ಎಷ್ಟೊತ್ತದ್ರು ಬರದೆ ಇದ್ದಾಗ , ಹಲೋ ! ಎಲ್ಲಿದಿಯಪ್ಪ ರಾಜಕುಮಾರ್ ! M G ರೋಡಿಂದ ಮಲ್ಲೇಶ್ವರಂಗೆ ಬರೋಕ್ಕೆ ಎರಡು ಘಂಟೆ ಕಾಲ ಬೇಕೆನಪ್ಪ ... ಅದಕ್ಕವನು , ಸಾರ್ .. ಇಲ್ಲ ಸಾರ್ ಫುಲ್ ಜಾಮು ! ಗಾಡಿ ಮೋವೇ ಆಗ್ತ ಇಲ್ಲ ಸಾರ್ !... ಮುಗೀತ್ ಬೇರೆ ಮಾತಾಡ್ದಂಗಿಲ್ಲ . ಇದು ಪ್ರತಿ ದಿನದ ಕಥೆ . ಆದ್ರೆ ಮೊನ್ನೆ "ಕುಮಾರ್ಸಾಮಿ ಜಾಮ್ " ಬೆಂಗಳೂರು ಟ್ರಾಫಿಕ್ ಇತಿಹಾಸದಲ್ಲಿ ಎಂದೂ ಕಂಡರಿಯದ ಮಹಾನ್ ಸಾದನೆ !! .. ನಾನು ಕೂಡ ಸಣ್ಣ ಪುಟ್ಟ ಟ್ರಾಫಿಕ್ ಜಾಮ್ ಸಾಧನೆ ಮಾಡಿದ್ದೀನಿ .. ಕಳೆದ ವಾರ ಮಿನ್ನರ್ವಾ ಸರ್ಕಲ್ಲ್ನಲ್ಲಿ ಸ್ನೇಹಿತನ ಜಿಪ್ಸಿ ಓಡಿಸ್ತಿನಿ ಅಂತ ಬಲವಂತವಾಗಿ ಗಲಾಟೆ ಮಾಡಿ ತಗೊಂಡು , ರಿವೆರ್ಸ್ ತೆಗಿಯೋಕೆ ಆಗದೇನೆ ಅಡ್ಡಡ್ಡ ನಿಲ್ಸಿ ಕಾಲ್ ಘಂಟೆ ಜಾಮ್ ಮಾಡಿದ್ದೆ . ಕೊನೆಗೆ ಆಟೋ ಡ್ರೈವರ್ ಯಿಂದ ಸ್ಕೂಟಿ ಹುಡ್ಗೀರ್ ವರೆಗೂ ಖರಾಬಾಗಿ ಬೈಸಿಕೊಂಡು ಪೋಲಿಸ್ ಮಾಮಂಗೆ 200 ಕೊಟ್ಟು ಬಂದಿದ್ದಾಯಿತು . ಅಷ್ಟಕ್ಕೆ 200 ಅಂದ್ರೆ ಈ ಮಣ್ಣಿನ ಮಗನ ಮಗನ್ ಸಾಧನೆಗೆ ಎಷ್ಟು ದಂಡ ಹಾಕಬೋದು ಅಂತ ನೀವೇ ಹೇಳಿ !
ನಾನೂ ಈ ದೇಶದಲ್ಲಿನ ಸುಮಾರು ಎಲ್ಲಾ ಪಟ್ಟಣಗಳ ಟ್ರಾಫಿಕ್ ಜಾಮ್ ಗಳಿಗೆ ಸಾಕ್ಷಿಯಾಗಿದ್ದೇನೆ , ಆದ್ರೆ "ಕುಮಾರ್ಸಾಮಿ ಜಾಮ್" ಮುಂದೆ ಯಾವ್ದು ಸಮ ಆಗೋಕೆ ಸಾದ್ಯ ಇಲ್ಲ ಬಿಡಿ ...
ಅವತ್ತು ಹೀಗೆ ಜಾಮ್ ಮದ್ಯ ನನ್ ಜಿಂಗ್ಲಿ ನ (ನನ್ ಬೈಕ್ ಹೆಸರು ) ನಿಲ್ಸಕೊಂಡಿದ್ದೆ... ಪಕ್ಷದ ಎಲ್ಲಾ ಚಮಚ , ಸ್ಪೂನು ಸೌಟು , ಬಾಟಲಿಗಳು ಗುಂಪುಗುಂಪಾಗಿ ಫುಟ್ ಪಾತು , ರೋಡು ಸರ್ವೆಯ್ ಮಾಡ್ತಾ ಹೋಗ್ತಾ ಇತ್ತು , ಅಲ್ಲೊಬ್ಬ ಬಾಟಲಿ ನನ್ ಹತ್ರ ಬಂದು ... ಸಾರ್ ನೆಸ್ತು ನಮ್ ಅಣ್ಣನೆಯ..ಪ್ರಿಮ್ ಮಿನಿಸ್ರು .. ಅವನ್ ಅ ****ನ್ನ್ ಯಾರ್ ಸಾರ್ ರಾಕೇಟು , ನಾವು ಚಂದ್ರನ್ಕೆ ಹೊಲಿಕಾಪ್ತ್ರು ಕಲ್ಸತಿವಿ (ಅವನ್ ಭಾಷೆನಲ್ಲೇ ಬರೆಯಲಾಗಿದೆ ಟೈಪಿಂಗ್ ಮಿಸ್ಟೇಕ್ ಅಲ್ಲ ). ನಾನೂ ಬೇರೆ ಮಾತನಾಡದೇನೆ ಮನಸ್ಸಿನಲ್ಲೇ ನಕ್ಕೊಂಡು ಜಂಗ್ಲಿ ಮೇಲೆ ಕೂತಿದ್ದೆ ನನ್ ಜಂಗ್ಲಿನು ನಗ್ತಾ ಇತ್ತು ಅಂತ ಕಾಣುತ್ತೆ ... . ನಾನ್ ಮೊದ್ಲೇ ಬಾಯಿ ಬಡ್ಕ , ನಾನ್ ಒಂದು ಮಾತಡೋದು ಅದು ಹೋಗಿ ಇನ್ನೇನೋ ಆಗೋದು .... ಯಾಕ್ ಬೇಕು .. ಮೊದ್ಲೇ ಎಲ್ರು ಫುಲ್ ಟೈಟು ...ಬಿಟ್ಟಿದ್ರೆ ಬಡ್ಡಿಮಕ್ಳು ರೋಡ್ ಮದ್ಯ ಏನೇನ್ ಮಾಡ್ತಾ ಇದ್ರೋ ದೇವರಿಗೆ ಗೊತ್ತು ! ಈ ಪುಢಾರಿಗಳದ್ದು ಒಂದು ಕಥೆ ಆದ್ರೆ , ಪೋಲಿಸ್ನವರದು ಕಥೆ ಇನ್ನೊಂದ್ ತರ .. ಟ್ರಾಫಿಕ್ ಕಂಟ್ರೋಲ್ ಮಾಡರಯ್ಯ ಅಂದ್ರೆ .... ಹೆಲ್ಮೆಟ್ ಹಾಕಿಲ್ದೆ ಇರೋರನ ಹಿಡ್ಯೋದು, ಲೈಸೆನ್ಸ್ ತೋರ್ಸು ಅನ್ನೋದು , ಬಡ್ಡೆತವ್ಕೆ ಸಿಕ್ಕಿದ್ದೇ ಚಾನ್ಸು !!
ನೆನ್ನೆ ಒಂದು ಬ್ಲಾಗ್ನಲ್ಲಿ ... ವ್ಯವಸ್ಥೆ ಬಗ್ಗೆ ಸುಮಾರು ಕಾಮೆಂಟ್ಸ್ ನಡೀತಾ ಇತ್ತು .. ಮತ್ತೆ ಈ ವ್ಯವಸ್ಥೆ ಬಗ್ಗೆ ಬರಿಯೋಕೆ ಮೂಡ್ ಇಲ್ಲ. ಅದು ಅಲ್ದೇನೆ ಪೇಪರ್ನೋರು, ಟಿವಿನೋರು "ಕುಮಾರ್ಸಾಮಿ ಜಾಮ್ " ಬಗ್ಗೆ ಸಾಕಷ್ಟು ಟ್ಯಾಲೆಂಟ್ ತೋರಿಸಿ ಆಗಿದೆ . ಅದು ಸಾಕಾಗಲ್ಲ ಅಂತ ನಮ್ ಪಕ್ಕದ ಮನೆ ಆಂಟಿ ಈ ಜಾಮ್ ಬಗ್ಗೆ ಸಾಕಷ್ಟು ಮಸಾಲೆ ಸೇರ್ಸಿ ನಮ್ ಬೀದಿಗೆಲ್ಲ ಮಂದಿಗೆಲ್ಲ ಬಾಳೆ ಎಲೆ ಹಾಸಿ ಬಡಿಸಿದ್ದು ಆಗಿದೆ .
ಆಗಲೇ ಸಾಕಷ್ಟು ಲೇಟ್ ಆಗಿತ್ತು .. ಸ್ನೇಹಿತನಿಗೆ ಒಂದು ಎಸ್.ಎಂ.ಎಸ್ . ಮಾಡ್ದೆ "got struck in bad jam.. will be late to room. prepare something to eat" " ಅದಕ್ಕವನ reply message ಹೀಗಿತ್ತು .. " oh.. bad jam.. better bring some good bread and butter while coming. i cant cook now.." ನಗು ತಡೆಯಲಾಗಲಿಲ್ಲ .. ಜೋರಾಗಿ ನಕ್ಕಿ ಬಿಟ್ಟೆ .. ಸುತ್ತಲಿನ ಜನ ನನ್ನೇ ನೋಡ್ತಾ ಇದ್ರೂ . ಎಲ್ಲಾ ಮುಖಗಳು ಸೀದಿ ಹೋದ ಬ್ರೆಡ್ ನಂತೆ ಕಂಡವು !!
ಕೊನೆಗೆ ನಾನೂ ಜಂಗ್ಲಿ ರೂಮಿಗೆ ಬಂದಾಗೆ ರಾತ್ರಿ 12.30 .. ಪಾಪ ಜಂಗ್ಲಿ ನನಗಿಂತ ಸುಸ್ತಾಗಿದ್ದ .. ದೊಡ್ಡದೊಂದು ಪ್ಲಾಸ್ಟಿಕ್ ಹೊದಿಸಿ .. ನಾನೂ ಬ್ರೆಡ್ ಹಾಗು ಮತ್ತೊಂದು ಬ್ಯಾಡ್ ಜಾಮ್ ತಿಂದು ಮಲಗಿದ್ದಾಯಿತು !!
ಬೆಳಿಗ್ಗೆ ಸ್ನೇಹಿತ ಕೇಳಿದ ಪ್ರಶ್ನೆಗೆ ತಡೆಯಲಾರದ ಸಿಟ್ಟು ಬಂದಿತ್ತು - " ಯಾವ್ ಊರಲ್ಲಿ ಟ್ರಾಫಿಕ್ ಜಾಮು..??" ..
(ಪಾಪ ಜ್ವರ ಅಂತ ಮೂರೂ ದಿನದಿಂದ ರೂಮು ಬಿಟ್ಟು ಎಲ್ಲೂ ಹೊರಗೆ ಕಾಲಿಟ್ಟಿಲ್ಲ)
5 comments:
ಚೆನ್ನಾಗಿದೆ ಸಂತೊಷ್,
ತುಂಬಾ ಸರಾಗ ನಿರೂಪಣೆ.
ಬೆಂಗಳೂರಿನ ಟ್ರ್ಯಾಫ಼ಿಕ್ ನೋಡಿದಾಗೆಲ್ಲಾ,ಜನರ ಬಗ್ಗೆ ಕರುಣೆ ಹುಟ್ಟುತ್ತೆ..
ಜೀವನದ ಕಾಲುಭಾಗ ಟ್ರ್ಯಾಫ಼ಿಕ್ ನಲ್ಲೇ ಕಳೆದು ಹೋಗುತ್ತೇನೋ ಅಂತ..
Hey Santhu,
Chennagide kano...Keep it up my lad.
@ Charita and Niranjan
Thanks... :)
ಸಂತೋಷ್,
ನಗು ಬಂತು ಕಣ್ರೀ :) ನೈಸ್ ರೈಟ್ ಅಪ್. ಅವತ್ತು ಟ್ರಾಫಿಕ್ ಜಾಮ್ ಆಗುತ್ತೆ ಅಂತ ಗೊತ್ತಿತ್ತು ಅದಕ್ಕೆ ನಾನು ನನ್ನ ಬ್ಲಾಕಿ (ಅಂದ ಹಾಗೆ ಬ್ಲಾಕಿ ನನ್ನ ಬೈಕು)ಐದು ಗಂಟೆಗೆಲ್ಲ ಮನೆ ಸೇರಿಬಿಟ್ಟಿದ್ವಿ.
@ Hema,
ಧನ್ಯವಾದಗಳು ... ಹೀಗೆ ಬರುತ್ತಿರಿ ..
By the way ನಿಮ್ ಬ್ಲಾಕಿನ ಕೇಳ್ದೆ ಅಂತ ಹೇಳಿ :)
Post a Comment