Monday, February 9, 2009

ಚಿತ್ರ

ಬಿತ್ತಿ ಇಲ್ಲದೆ
ಬರೆದ ಚಿತ್ರಗಳನ್ನು
ನಿನ್ನಲ್ಲಿ ಹರಡಿ
ಸಾವಿರ ಕನಸುಗಳಿಗೆ
ಮಾರಿಕೊಳ್ಳೋ ಆಸೆ
ಹೆಸರಿಲ್ಲದ ಬಣ್ಣಗಳನು
ರಾಚಿ ಎರಚಾಡಿ
ಇಲ್ಲಸಲ್ಲದ ನೆಪವೊಡ್ಡಿ
ನೀರೆರಚಿ ಮತ್ತೊಮ್ಮೆ
ತಿದ್ದಿತೀಡಿ ಮತ್ತೊಂದಷ್ಟು
ಕನಸುಗಳ ಹವಣಿಕೆಯಲ್ಲಿ
ಕಾದುಕೂತು ಬರೆದ
ಚಿತ್ರಗಳಿಗೆ ಬೆಲೆ ಬರದೆ
ಎಲ್ಲವನ್ನು ಕಟ್ಟಿಟ್ಟಿ
ಒಲ್ಲದ ಕನಸುಗಳಿಗೆ
ತೂರದ ತೂಕಕೆ ಹಾಕಿ
ಸಿಕ್ಕಷ್ಟು ಬಾಚಿ-ಬಳಿದು
ಬಾರದ ಬಣ್ಣಗಳಿಗೆ
ಕುಂಚ ಹಿಡಿದು
ಹೊಂಚು ಹಾಕಿ
ಮತ್ತಷ್ಟು ಬರೆದ
ಚಿತ್ರಗಳನು ನಿನ್ನಲ್ಲಿ
ಹರಡಿ ಸಾವಿರ
ಕನಸುಗಳಿಗೆ ಮಾರುವಾಸೆ



Photoshop Smoke Image: Santhosh Chidambar

21 comments:

ಚಿತ್ರಾ ಸಂತೋಷ್ said...

ಸಂತೋಷ್..ತುಂಬಾ ಚೆನ್ನಾಗಿದೆ ಕವನ. ಬರೆದ್ರೆ ಹೀಗೇ ಚೆನ್ನಾಗಿರೋದನ್ನೇ ಬರೆತಿರ..ಇಲ್ಲಾಂದ್ರೆ ಜಪ್ಪಯ್ಯ ಅಂದ್ರೂ ನಿಮ್ ಪತ್ತೆನೇ ಇರಲ್ಲ.. ನಿಮ್ಮ ಇನ್ನಷ್ಟು ಕವನ, ಬರಹಗಳ ನಿರೀಕ್ಷೆಯಲ್ಲಿ..
-ಚಿತ್ರಾ

Unknown said...

CHITHA chennagide santhosh,odtha idre manasinalli nooraru chitragalu mooduthave, nimm hosa barahakke kaytha irthini

Anonymous said...

Good one..

shivu.k said...

ಸಂತೋಷ್,

ತುಂಬಾ ಅಪರೂಪಕ್ಕೆ ಬರೆದರೂ.....
ಕವನದಲ್ಲಿ ಪದ ಪ್ರಯೋಗ ನನಗಿಷ್ಟವಾಯಿತು...ನಿಮ್ಮ ಕಲ್ಪನೆಯೂ ಚೆನ್ನಾಗಿ ಮೂಡಿಬಂದಿದೆ...

ಹಿಂದಿನ ಕವನದಂತೆ ಇದು ಕೂಡ ಚೆನ್ನಾಗಿದೆ....
ನಿಮ್ಮ ಪರೀಕ್ಷೆ ಸುಗಮವಾಗಿ ಆಗಲಿ...all the best!!

Prabhuraj Moogi said...

bahaLa chennaagide... modalina earDu kavitegaLoo chennaagiddavau...

Ittigecement said...

ಸಂತೋಷ್...

ಬರೆದರೆ ಮುತ್ತಿನ ಹಾರದಂತಿತರ ಬೇಕು..

ಅನ್ನುವಂತೆ ಬರೆಯುತ್ತೀರಿ...

ತುಂಬಾ ಚಂದದ ಕವನ...

ತುಂಬಾ ಕಾಯಿಸುತ್ತೀರಿ...ನೀವು..!

ಎಲ್ಲಿ ಹೋಗಿದ್ರಿ ಇಷ್ಟು ದಿನ..?

ಚಂದದ ಕವನಕ್ಕೆ

ಅಭಿನಂದನೆಗಳು..

Anonymous said...

Please read and participate

http://thepinkchaddicampaign.blogspot.com/

Santhosh Rao said...

@ ಚಿತ್ರ ,
ಧನ್ಯವಾದಗಳು , ಕೆಲವೊಂದು ಸಲ physically & mentally conservative.

Santhosh Rao said...

@ prakash, shivu, and prabhu
Thanks you vey much...
ಇನ್ನ್ ಮೇಲೆ ಆಗಾಗ ಬರೆಯೋಕೆ ಪ್ರಯತ್ನ ಮಾಡ್ತೀನಿ :)

sunaath said...

ಸಂತೋಷ,
ನಿಮ್ಮಲ್ಲಿ ಕನಸುಗಳು ಹೇರಳವಾಗಿ ಇರುವಂತೆ ಕಾಣುತ್ತದೆ.
ಕನಸುಗಳನ್ನು ಕಾಣುತ್ತಲೇ ಹೋಗಿರಿ. ಅವೆಲ್ಲ ಫಲಿಸಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಸಂತೋಷ್,
ಚೆನ್ನಾಗಿದೆ ಕವನ. ಚಿಕ್ಕ ಚಿಕ್ಕ ಮುತ್ತುಗಳನ್ನು ಪೋಣಿಸಿಕೊಟ್ಟಂತಿದೆ.

Santhosh Rao said...

ಸುನಾಥನ್ ಅವರಿಗೆ:
ಧನ್ಯವಾದಗಳು ಸಾರ್.. ನಿಜ ಕನಸುಗಳು ಹೇರಳವಾಗಿವೆ ಆದರೆ ಕನಸು ಕಾಣೋಕ್ಕೆ ಟೈಮ್ ಸಿಕ್ತಾ ಇಲ್ಲ :)

Santhosh Rao said...

ಮಲ್ಲಿಕಾರ್ಜುನ್ ಅವರಿಗೆ:
ಧನ್ಯವಾದಗಳು ಸಾರ್, ಬರುತ್ತಿರಿ ..

ಸುಹಾನಿ ಅವರಿಗೆ:
ಧನ್ಯವಾದಗಳು ... ಹೀಗೆ ಬರುತ್ತಿರಿ, ಆದಷ್ಟು ಬೇಗ ಹೊಸ ಕವಿತೆ ಬರೀತೀನಿ

ರಂಜು - ಥ್ಯಾಂಕ್ಸ್ ಕಣೇ..

Anonymous said...

nice one..

Niveditha said...

wow!!! Thats it.. not a bit less than that..ತುಂಬಾ ಚನ್ನಾಗಿದೆ.

Santhosh Rao said...

@ Niveditha...

Bit less than that and this :)

Thanks :)

Anonymous said...

"ಸಾವಿರ ಕನಸುಗಲಿಗೆ ಮಾರುವಾಸೆ.."
ಆಹಾ! :-)

Smi said...

very beautifull...chitra nivoo tagdiree, akige banna hakri antha helri..
Sorry I donno banglore kannada..this is NK kannada

Santhosh Rao said...

@ Smita..

Dhanyavaadagalu
ಯಾವ್ "ಆಕೀಗೆ" ಬಣ್ಣ ಬಳಿಲಿಕ್ಕೆ ಹೇಳ್ಲಿ ಅಂತ ಗೊತ್ತಗೊವೊಲ್ತು ! :)

ಯಾವ್ ಭಾಷ ಶೈಲಿ ಆದ್ರೆ ಏನಂತೆ .. ಮೆಚ್ಚಿದಕ್ಕೆ ಮತ್ತೊಮ್ಮೆ ಧನ್ಯವಾದಗಳು

ಗೌತಮ್ ಹೆಗಡೆ said...

mast re:)

Veena DhanuGowda said...

Wonderfull :)
bere mathe illa adbhutavagide