ದೂರದಲ್ಲೆಲ್ಲೋ ಮೋಡದಡಿಯಲಿ
ಯಾರೋ ಹಾಡುವ ಸವಿ ಹಾಡು
ದೇಹ ಮನಸ್ಸು ಭಾವಗಳೆಲ್ಲವು
ಚುಕ್ಕಿ ಚಂದ್ರಮರ ನಾಡು
ಮನದ ಒಳ ಹೊರಗೂ
ಯಾರೋ ಹಚ್ಚಿಟ್ಟ ದೀಪಗಳು
ಮುಸುಕು ಮುಸುಕಾಗಿ ಕಂಡರೂ ಕಾಣದ
ಅಸ್ಪಷ್ಟ ರೂಪಗಳು
ಈಜಲು ಬಾರದ ಭಾವಗಳನು
ಮುಳುಗಿಸೋ ಬಾವಿಗಳು
ಅಲ್ಲಲ್ಲಿ ಹಚ್ಚಿಟ್ಟು ಹೋದ ದೀಪಗಳು
ನೆಮ್ಮದಿ ತಂದು ಕೊಡುವ ನಾವಿಗಳು
ಯಾರೋ ಹಾಡುವ ಸವಿ ಹಾಡು
ದೇಹ ಮನಸ್ಸು ಭಾವಗಳೆಲ್ಲವು
ಚುಕ್ಕಿ ಚಂದ್ರಮರ ನಾಡು
ಮನದ ಒಳ ಹೊರಗೂ
ಯಾರೋ ಹಚ್ಚಿಟ್ಟ ದೀಪಗಳು
ಮುಸುಕು ಮುಸುಕಾಗಿ ಕಂಡರೂ ಕಾಣದ
ಅಸ್ಪಷ್ಟ ರೂಪಗಳು
ಈಜಲು ಬಾರದ ಭಾವಗಳನು
ಮುಳುಗಿಸೋ ಬಾವಿಗಳು
ಅಲ್ಲಲ್ಲಿ ಹಚ್ಚಿಟ್ಟು ಹೋದ ದೀಪಗಳು
ನೆಮ್ಮದಿ ತಂದು ಕೊಡುವ ನಾವಿಗಳು
Photo: Rexguo
5 comments:
ಸಂತೋಷ್,
ಭಾವನಾತ್ಮಕವಾದ ಕವನ ತುಂಬಾ ಚೆನ್ನಾಗಿದೆ...
"ಮುಸುಕು ಮುಸುಕಾಗಿ ಕಂಡರೂ ಕಾಣದ
ಅಸ್ಪಷ್ಟ ರೂಪಗಳು"
ಇದು ಒಂದು ಹೊಸ ರೀತಿಯ ಪದಪ್ರಯೋಗವೆನಿಸಿತು...
ಧನ್ಯವಾದಗಳು..
santu,
tumba dina aada mele tumba chennagiro kavite bardiddiya...
- Sunanda
ಸಂತೋಷ್....
ಸೊಗಸಾದ ಕವಿತೆ....!
ಬಹಳ ಇಷ್ಟವಾಯಿತು....
ತುಂಬಾ ಅಪರೂಪ ಆಗಿಬಿಟ್ಟಿದ್ದೀರಿ...
@ Shivu & Prakash and Sunanda
Thanks..
:):)
Post a Comment